ರಾಯಚೂರು: ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ, ಸ್ಥಳೀಯ ಬಿಜೆಪಿ ಮುಖಂಡನ ಬಂಧನ
ಗುರುವಾರ ಸಂಜೆ ತನ್ನ ಕಾರ್ ನಲ್ಲಿ 24 ವರ್ಷದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ ರಾಯಚೂರು ಸ್ಥಳೀಯ ಬಿಜೆಪಿ ಮುಖಂಡ ಈಗ ಕಂಬಿಗಳ ಹಿಂದೆ ಬಂಧಿಯಾಗಿದ್ದಾರೆ.
Published On :
ದೇವದುರ್ಗ ಗುರುವಾರ ಸಂಜೆ ತನ್ನ ಕಾರ್ ನಲ್ಲಿ 24 ವರ್ಷದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ ರಾಯಚೂರು ಸ್ಥಳೀಯ ಬಿಜೆಪಿ ಮುಖಂಡ ಈಗ ಕಂಬಿಗಳ ಹಿಂದೆ ಬಂಧಿಯಾಗಿದ್ದಾರೆ. ವಿಪರ್ಯಾಸವೆಂದರೆ ಈ ಘಟನೆ ನಡೆವ ಎರಡು ಗಂಟೆಗಳ ಮುನ್ನ ವಿಜಯಪುರದಲ್ಲಿ ನಡೆದ ದಲಿತ ಬಾಲಕಿ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಇದೇ ಮುಖಂದರು ದೇವದುರ್ಗದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಆರೋಪಿ ಯಲ್ಲಪ್ಪ ಅಲ್ದಾರ್ಥಿ, ಗ್ರಾಮ ಪಂಚಾಯತ್ ಸದಸ್ಯರಾಗಿದ್ದು ಸಂತ್ರಸ್ತೆಯು ಬಳ್ಳಾರಿ ಜೆಲ್ಲೆ ಹೊಸಪೇಟೆಯ ಓರ್ವ ಶಿಕ್ಷಕಿಯಾಗಿದ್ದಾರೆ. ಸಂತ್ರಸ್ತೆಯು ಖಾಸಗಿ ಶಾಲೆಯೊಂದರಲ್ಲಿ ಎರಡನೇ ವರ್ಷದ ಎಂ.ಕಾಂ (ದೂರಶಿಕ್ಷಣ) ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು ಅವರ ಸ್ನೇಹಿತರೊಬ್ಬರು ಆಕೆಗೆ ಯಲ್ಲಪ್ಪ ಪರಿಚಯ ಮಾಡಿಸಿಕೊಟ್ಟಿದ್ದರು, ಒಂದು ರಾತ್ರಿ ಉಳಿದುಕೊಳ್ಳಲು ಬೇಕಾದ ವ್ಯವಸ್ಥೆಯನ್ನು ಅವರು ಆಕೆಗೆ ಒದಗಿಸಿಕೊಡಲಿದ್ದಾರೆಂದು ಸ್ನೇಹಿತರು ತಿಳಿಸಿದ್ದರು. ಹೀಗೆ ಅಲ್ದಾರ್ಥಿ ಆಕೆಗೆ ವಸತಿಯೊದಗಿಸಿ ಕೊಡುವುದಾಗಿ ಹೇಳಿದ ಬಳಿಕ ಆಕೆ ಪಂಚಾಯತ್ ಸದಸ್ಯರ ಕಾರ್ ಏರಿದ್ದರು.
ಕಾರ್ ನಾಲ್ಕು ಕಿಮೀ. ಚಲಿಸಿದ ಬಳಿಕ ದೇವದುರ್ಗದ ಹೊರಗೆ ಶಹಪುರ ರಸ್ತೆಯ ಒಂದು ಜಮೀನಿಗೆ ಪ್ರವೇಶಿಸಿತ್ತು. ಆಗ ಆರೋಪಿಯು ಆಕೆಯನ್ನು ಅತ್ಯಾಚಾರ ಮಾಡಲು ಮುಂದಾಗಿದ್ದು ಆಕೆ ಅದನ್ನು ಪ್ರತಿಭಟಿಸಿ ಕಾರ್ ಬಾಗಿಲು ತೆರೆದು ಹೊರಗೆ ಓಡಿದ್ದಳು. ನಂತರ ಅಲ್ಲೇ ಸನಿಹದಲ್ಲಿದ್ದ ಹತ್ತಿ ಗಿರಣಿಯೊಂದರ ಬಳಿ ಸಾರಿ ಅಲ್ಲಿದ್ದ ನಾಲ್ಕಾರು ವ್ಯಕ್ತಿಗಳಿಗೆ ತನ್ನ ಪರಿಸ್ಥಿತಿಯನ್ನು ವಿವರಿಸಿದ್ದಾಳೆ.ನಂತರ ಆಕೆಯು ದೇವದುರ್ಗ ಪೋಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದು ದೂರಿನ ಆಧಾರದಲ್ಲಿ ಆರೋಪಿ ಗ್ರಾಮಪಂಚಾಯತ್ ಸದಸ್ಯರನ್ನು ಪೋಲೀಸರು ಬಂಧಿಸಿ ಎಫ್ ಐಆರ್ ದಾಖಲಿಸಿದ್ದಾರೆ.ಆರೋಪಿ ಯಲ್ಲಪ್ಪ ದೇವದುರ್ಗ ವ್ಯಾಪ್ತಿಯಲ್ಲಿ ಜನಪ್ರಿಯ ನಾಯಕನಾಗಿದ್ದರೆಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Bijapurವಿಜಯಪುರಅತ್ಯಾಚಾರ ಯತ್ನDevadurgaದೇವದುರ್ಗlocal BJP leaderattempting to rapeDalit girl rape and murderಸ್ಥಳೀಯ ಬಿಜೆಪಿ ಮುಖಂಡದಲಿತ ಬಾಲಕಿ ಅತ್ಯಾಚಾರ ಮತ್ತು ಕೊಲೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

