2018 ರ ವಿಧಾನಸಭಾ ಚುನಾವಣಾ ಕರ್ತವ್ಯದಿಂದ ನಮ್ಮನ್ನು ದೂರವಿಡಿ: ಸರ್ಕಾರಿ ಶಿಕ್ಷಕರ ಬೇಡಿಕೆ
ರಾಜ್ಯ ಚುನಾವಣಾ ಆಯೋಗ (ಎಸ್ಇಸಿ) ಸುಮಾರು 40,000 ಸರ್ಕಾರಿ ಶಿಕ್ಷಕರಿಗೆ 2018 ರ ಆರಂಭದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಪೂರ್ವಭಾವಿ ಕರ್ತವ್ಯಗಳನ್ನು ನಿರ್ವಹಿಸುವಂತೆ....

Published On :
ಬೆಂಗಳೂರು: ರಾಜ್ಯ ಚುನಾವಣಾ ಆಯೋಗ (ಎಸ್ಇಸಿ) ಸುಮಾರು 40,000 ಸರ್ಕಾರಿ ಶಿಕ್ಷಕರಿಗೆ 2018 ರ ಆರಂಭದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಪೂರ್ವಭಾವಿ ಕರ್ತವ್ಯಗಳನ್ನು ನಿರ್ವಹಿಸುವಂತೆ ಆದೇಶ ನೀಡಿದೆ. ಆಯೋಗದ ಈ ಆದೇಶದಿಂಡ ಪಠ್ಯ ಚಟುವಟಿಕೆ ಮತ್ತು ಪರೀಕ್ಷೆ ಸಂಬಂಧಿತ ಕಕೆಲಸಗಳೊಡನೆ ಚುನಾವಣೆ ಸಂಬಂಧದ ಕೆಲಸಗಳೂ ಸೇರಿ ಶಿಕ್ಷಕ ವರ್ಗಕ್ಕೆ ಹೊರೆಯಾಗಲಿದೆ ಎನ್ನಲಾಗಿದೆ.
ಈ ಸಂಬಂಧ ಶಿಕ್ಷಕರು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಮತ್ತು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮೆಮೊರಾಂದಮ್ ಸಲ್ಲಿಸಿದ್ದು ಚುನಾವಣೆ ಸಂಬಂಧಿತ ಕರ್ತವ್ಯಗಳಿಂದ ತಮ್ಮನ್ನು ದೂರವಿರಲು ಅವರು ಒತ್ತಾಯಿಸಿದ್ದಾರೆ, ಇದರಿಂದ ಬೋಧನೆ, ಪರೀಕ್ಷೆಗಳು ಮತ್ತು ಮೌಲ್ಯಮಾಪನ ಕೆಲಸಗಳಲ್ಲಿ ಝೆಚ್ಚಾಗಿ ಗಮನ ಕೇಂದ್ರೀಕರಿಸಬಹುದು ಎಂದು ಅವರು ಹೇಳಿಕೊಂಡಿದ್ದಾರೆ.
ಆಯೋಗದ ಆದೇಶದಂತೆ, ಜನವರಿ ಅಂತ್ಯದ ತನಕ ಶಿಕ್ಷಕರು ಚುನಾವಣಾ ಪೂರ್ವ ತಯಾರಿ ಕೆಲಸಗಳಲ್ಲಿ ಭಾಗವಹಿಸಬೇಕು. ಈ ಸಂಬಂಧ ಇದಾಗಲೇ ಆಯೋಗವು ಆಯ್ದ ಶಿಕ್ಷಕರಿಗೆ ಒಂದು ಸುತ್ತಿನ ತರಬೇತಿ ನೀಡಿದೆ. "ಚುನಾವಣಾ ಕರ್ತವ್ಯದಿಂದ ನಮ್ಮನ್ನು ದೂರವಿಡುವಂತೆ ನಾವು ಸಚಿವರು ಮತ್ತು ಪ್ರಧಾನ ಕಾರ್ಯದರ್ಶಿಗೆ ಮನವಿ ಮಾಡಿದ್ದೇವೆ. ಡಿಸೆಂಬರ್, ಜನವರಿ ಮತ್ತು ಫೆಬ್ರುವರಿ ನಮಗೆ ಅತ್ಯಂತ ಪ್ರಮುಖ ತಿಂಗಳುಗಳಾಗಿವೆ. ಮಾರ್ಚ್ / ಏಪ್ರಿಲ್ ನಲ್ಲಿ ವಾರ್ಷಿಕ ಪರೀಕ್ಷೆಗಳು ನಡೆಯಲಿದ್ದು ಅದರ ಅನುಸಾರ ವಿದ್ಯಾರ್ಥಿಗಳ ಫಲಿತಾಂಶಗಳನ್ನು ನಾವು ವಿಶ್ಲೇಷಿಸಬೇಕಾಗಿದೆ. " ಕರ್ನಾಟಕ ರಾಜ್ಯ ಪ್ರೌಢಶಾಲೆ ಸಹಾಯಕ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಕೆ. ಮಂಜುನಾಥ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
2008 ರಲ್ಲಿ, ರಾಜ್ಯ ಸರ್ಕಾರವು ಚುನಾವಣಾ ಕೆಲಸದಲ್ಲಿ ಅಥವಾ ಇತರ ಯಾವುದೇ ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧವಿಲ್ಲದ ಕೆಲಸದಲ್ಲಿ ಶಿಕ್ಷಕರನ್ನು ಒಳಗೊಂಡಿರಬಾರದೆಂದು ನಿರ್ದೇಶನ ನೀಡಿದ್ದರೂ ಸರ್ಕಾರದ ಆದೇಶದ ಹೊರತಾಗಿ, ಶಿಕ್ಷಕರು ಚುನಾವಣಾ ಪೂರ್ವ ತಯಾರಿ ಕೆಲಸಗಳಿಗೆ ನೇಮಕವಾಗಿದ್ದಾರೆ.
ಶೌಚಾಲಯ ಲೆಕ್ಕ ನೀಡುವ ಶಿಕ್ಷಕರು!
ಇನ್ನು ಕೆಲ ಉತ್ತರ ಕರ್ನಾಟಕದ ಜಿಲ್ಲೆಗಳ ಶಿಕ್ಷಕರು ಆಯಾ ಜಿಲ್ಲೆಗಳಲ್ಲಿ ಶೌಚಾಲಯಗಳಿಲ್ಲದ ಮನೆಗಳ ಸಂಖ್ಯೆಯನ್ನು ಜಿಲ್ಲಾ ಪಂಚಾಯತ್ ಗೆ ತಿಳಿಸಬೇಕೆಂದು ಅಲ್ಲಿನ ಜಿಲ್ಲಾ ಪಂಚಾಯತ್ ಗಳು ಆದೇಶಿಸಿದೆ. ಸ್ವಚ್ಚ ಭಾರತ ಅಭಿಯಾನದ ಅಂಗವಾಗಿ ಶಿಕ್ಷಕರು ಮನೆ ಮನೆಗೆ ತೆರಳಿ ಶೌಚಾಲಯಗಳ ಇರುವಿಕೆಯನ್ನು ಪತ್ತೆ ಮಾಡಬೇಕಿದೆ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Tanveer Saitತನ್ವೀರ್ ಸೇಠ್ವಿಧಾನಸಭಾ ಚುನಾವಣೆ 2018State Election Commission (SEC)government teachersassembly polls 2018ರಾಜ್ಯ ಚುನಾವಣಾ ಆಯೋಗ (ಎಸ್ಇಸಿ)ಸರ್ಕಾರಿ ಶಾಲಾ ಶಿಕ್ಷಕರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


