ಶಿವಮೊಗ್ಗ: ವಿದ್ಯಾರ್ಥಿ ಮೇಲೆ ಚಾಕುವಿನಿಂದ ಹಲ್ಲೆ, ಆರೋಪಿಗಳ ಶೀಘ್ರ ಬಂಧನಕ್ಕೆ ಬಿಜೆಪಿ ಮುಖಂಡರ ಆಗ್ರಹ
ನಗರದ ಕಾಲೇಜು ವಿದ್ಯಾರ್ಥಿ ಚೂರಿ ಇರಿತಕ್ಕೊಳಗಾದ ಒಂದು ದಿನದ ನಂತರ ಶಾಸನಸಭೆಯ ಪ್ರತಿಪಕ್ಷ ನಾಯಕ ಕೆ. ಎಸ್. ಈಶ್ವರಪ್ಪ ಸೇರಿದಂತೆ ಬಿಜೆಪಿ ನಾಯಕರು ಪೊಲೀಸ್ ವರಿಷ್ಠಾಧಿಕಾರಿ........

Published On :
ಶಿವಮೊಗ್ಗ: ನಗರದ ಕಾಲೇಜು ವಿದ್ಯಾರ್ಥಿ ಚೂರಿ ಇರಿತಕ್ಕೊಳಗಾದ ಒಂದು ದಿನದ ನಂತರ ಶಾಸನಸಭೆಯ ಪ್ರತಿಪಕ್ಷ ನಾಯಕ ಕೆ. ಎಸ್. ಈಶ್ವರಪ್ಪ ಸೇರಿದಂತೆ ಬಿಜೆಪಿ ನಾಯಕರು ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಅವರನ್ನು ಭೇಟಿ ಮಾಡಿದರು.
ಶುಕ್ರವಾರ, ಶಿವಮೊಗ್ಗದ ನ್ಯಾಷನಲ್ ಪಿಯು ಕಾಲೇಜಿನಲ್ಲಿ ಎರಡು ಸಮುದಾಯಗಳ ವಿದ್ಯಾರ್ಥಿಗಳು ವಾಗ್ವಾದಗಳಲ್ಲಿ ತೊಡಗಿದ್ದರು. ನಗರದ ಹೊರವಲಯ ಟಿಪ್ಪು ನಗರದಲ್ಲಿ ಈ ಘಟನೆ ನಡೆದಿದೆ. ಗಲಾಟೆಯಲ್ಲಿ ಸಲೀಂ (ಹೆಸರು ಬದಲಾಗಿದೆ) ಗಾಯಗೊಂಡು ಆಸ್ಪತ್ರೆಗೆ ದಾಖಲಾದರು. ಇದರಿಂದ ರೊಚ್ಚಿಗೆದ್ದ ಮುಸ್ಲಿಂ ವಿದ್ಯಾರ್ಥಿಗಳು ಒಂದು ಗುಂಪಿನ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲು ಮುಂದಾದಾಗ ಪೋಲೀಸರು ಮದ್ಯ ಪ್ರವೇಶಿಸಿ ಅದನ್ನು ತಡೆದಿದ್ದರು.
ಅಕ್ಷರಾ ಕಾಲೇಜ್ ವಿದ್ಯಾರ್ಥಿ ಸಲೀಂ ಗಾಂಧಿ ಉದ್ಯಾನವನದ ನ್ಯಾಷನಲ್ ಪಿಯು ಕಾಲೇಜಿನ ಮುಂದೆ ಸ್ನೇಹಿತರೊಡನೆ ಕುಳಿತಿದ್ದರು, ಆಗ ಮೂರು ಅಥವಾ ನಾಲ್ಕು ಜನರಿದ್ದ ಯುವಕರ ತಂಡ ಆಗಮಿಸಿ ಸಲೀಂ ನನ್ನು ನೀನು ನ್ಯಾಷನಲ್ ಪಿಯು ಕಾಲೇಜು ವಿದ್ಯಾರ್ಥಿಯೆ? ಎಂದು ಪ್ರಶ್ನಿಸಿದ್ದಾರೆ. ಸಲೀಂ ನ ಸ್ನೇಹಿತರು ನಾವು ಬೇರೆ ಕಾಲೇಜಿನವರು ಎಂದ ತಕ್ಷಣ ಆ ಗುಂಪು ಸಲೀಂ ಮೇಲೆ ಚಾಕುವಿನಿಂಡ ಹಲ್ಲೆ ನಡೆಸಿದೆ. ಅದಾಗ ಅವರ ಸ್ನೇಹಿತರು ಸಲೀಂ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೋಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಸಲೀಂ ಅಪಾಯದಿಂದ ಪಾರಾಗಿದ್ದಾರೆ.
ಈಶ್ವರಪ್ಪ ಅವರು ಆರೋಪಿಗಳ ಬಂಧನದಲ್ಲಿ ವಿಳಂಬವಾದದ್ದು ಏಕೆ ಎಂದು ಪ್ರಶ್ನಿಸಿದ್ದಾರೆ ಮುಂದಿನ ಎರಡು ದಿನಗಳಲ್ಲಿ ಒಳಗೊಂಡಿರುವ ಎಲ್ಲರನ್ನು ಬಂಧಿಸಬೇಕು. ಸಲ್ಮಾನ್ ಮೇಲೆ ಆಕ್ರಮಣ ಮಾಡಿದವರಿಗೆ ಐಪಿಸಿ ಸೆಕ್ಷನ್ 370 ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದಿದ್ದಾರೆ. ಜಿಲ್ಲೆಯ ಪೊಲೀಸರು ಶನಿವಾರ ಸಂಜೆ ನಗರದ ರಸ್ತೆಗಳಲ್ಲಿ ರೂಟ್ ಮಾರ್ಚ್ ಆಯೋಜಿಸಿದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


