ರಾಜ್ಯ

ರಾಜ್ಯ ಪಠ್ಯಕ್ರಮದ ಪಠ್ಯಪುಸ್ತಕಗಳು ವಿದ್ಯಾರ್ಥಿ ಸ್ನೇಹಿಯಾಗಿಲ್ಲ: ಎನ್ ಸಿಇಆರ್ ಟಿ

ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಇಲಾಖೆ ರಚಿಸಿರುವ ಪಠ್ಯ ಪುಸ್ತಕಗಳು ಸಾಕಷ್ಟು ಚಿಂತನೆಗೆ ಅವಕಾಶ ನೀಡಬಹುದಾದ ವಿಷಯಗಳ ಕೊರತೆಯಿಂದ ಕೂಡಿದೆ.

ರಾಜ್ಯ ಪಠ್ಯಕ್ರಮದ ಪಠ್ಯಪುಸ್ತಕಗಳು ವಿದ್ಯಾರ್ಥಿ ಸ್ನೇಹಿಯಾಗಿಲ್ಲ: ಎನ್ ಸಿಇಆರ್ ಟಿ
ಶಿಕ್ಷಣ ಸಂಶೋಧನೆ ಮತ್ತು ತರಬೇತಿಯ ರಾಷ್ಟ್ರೀಯ ಮಂಡಳಿ
Published On :
ಬೆಂಗಳೂರು: ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಇಲಾಖೆ ರಚಿಸಿರುವ ಪಠ್ಯ ಪುಸ್ತಕಗಳು ಸಾಕಷ್ಟು ಚಿಂತನೆಗೆ ಅವಕಾಶ ನೀಡಬಹುದಾದ ವಿಷಯಗಳ ಕೊರತೆಯಿಂದ ಕೂಡಿದೆ. ಶಿಕ್ಷಣ ಸಂಶೋಧನೆ ಮತ್ತು ತರಬೇತಿಯ ರಾಷ್ಟ್ರೀಯ ಮಂಡಳಿಯ ಸಮೀಕ್ಷೆ ತಿಳಿಸಿದೆ ರಾಜ್ಯದಲ್ಲಿ ಪಠ್ಯಪುಸ್ತಕದ ಕೆಲವು ಪಠ್ಯಗಳಲ್ಲಿ ವಿವಾದಿತ ಅಂಶಗಳಿದೆ ಎಂದು ಕೆಲವು ಬಿಜೆಪಿ ಮುಖಂಡರು ಈ ಕೇಂದ್ರ ಸಚಿವಾಲಯವನ್ನು ಸಂಪರ್ಕಿಸಿದ್ದ ಕಾರಣ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ನೀಡಿದ ಸೂಚನೆಯಂತೆ ಈ ಸಮೀಕ್ಷೆ ನಡೆಸಲಾಗಿದೆ.
ಅದಾಗ್ಯೂ ಎನ್ ಸಿಇಆರ್ ಟಿ ಆಂಗ್ಲ ಭಾಷೆಯಲ್ಲಿರುವ ಪಠ್ಯ ಪುಸ್ತಕಗಳನ್ನಷ್ಟೇ ಪರಿಶೀಲನೆಗೆ ತೆಗೆದುಕೊಂಡಿದೆ. ಎನ್ ಸಿಇಆರ್ ಟಿ ತಂಡವು ಹಲವಾರು ವಿಷಯ ಪರಿಣತರನ್ನು ಒಳಗೊಂಡಿದ್ದು ಇದು ಡಿಎಸ್ ಇಆರ್ ಟಿ ಪ್ರಕಟಿಸಿದ  ಪಠ್ಯ ಪುಸ್ತಕಗಳನ್ನು ವಿಶ್ಲೇಷಣೆಗೆ ಒಳಪಡಿಸಿದೆ.  ಎನ್ ಸಿಇಆರ್ ಟಿ ವಿಶ್ಲೇಷಿಸಿದ ಈ ಎಲ್ಲಾ ಪುಸ್ತಕಗಳೂ ರಾಜ್ಯದ ಶಾಲೆಗಳಲ್ಲಿ ಮಕ್ಕಳ ಬೋಧನೆಗಾಗಿ ಬಳಸಲ್ಪಡುತ್ತವೆ.
ಎನ್ ಸಿಇಆರ್ ಟಿ ವಿ ಪರಿಶೀಲನೆಯಿಂದ ತಿಳಿದ ಸಂಗತಿ ಎಂದರೆ ಪಠ್ಯಪುಸ್ತಕಗಳಲ್ಲಿ ಸಾಮಾನ್ಯವಾಗಿ ಮಕ್ಕಳನ್ನು ಚಿಂತನೆಗೆ ಹಚ್ಚುವ ಚಟುವಟಿಕೆಗಳು ಇರುವುದಿಲ್ಲ, ಮತ್ತು ರಚನಾತ್ಮಕ ಕೆಲಸಗಳಿಗೆ ಸಾಕಷ್ಟು ಅವಕಾಶ ನೀಡಿಲ್ಲ. "ಪಠ್ಯದಲ್ಲಿನ ಚಟುವಟಿಕೆಗಳು ಮಕ್ಕಳಿಗೆ ತಮ್ಮ ಅನುಭವಗಳೊಂದಿಗೆ ಸಂಪರ್ಕ ಸಾಧಿಸಲು ಅವಕಾಶವನ್ನು ಒದಗಿಸುವುದಿಲ್ಲ"ಪಠ್ಯ ಪುಸ್ತಕದಲ್ಲಿ ಪರಿಸರ, ಲಿಂಗ ಸಂಬಂಧಿತ ವಿಚಾರಗಳ ಬಗೆಗೆ ಮಕ್ಕಳಲ್ಲಿ ಸಾಕಷ್ಟು ಅರಿವು ಮೂಡಿಸಬಲ್ಲ ಚಟುವಟಿಕೆಗಳ ಕೊರತೆ ಇದೆ." ಎಂದು ವರದಿಯಲ್ಲಿ ಹೇಳಲಾಗಿದೆ.
ಮಕ್ಕಳ ದೈನಂದಿನ ಅನುಭವಗಳೊಂದಿಗೆ ಪಠ್ಯದ ವಿಚಾರಗಳು ಸಂಬಂಧ ಹೊಂದಿರಬೇಕು. ಇಲ್ಲಿ ಆ ನಿಟ್ಟಿನ ಪ್ರಯತ್ನವನ್ನು ಇನ್ನಷ್ಟು ವ್ಯಾಪಕವಾಗಿ ಮಾಡಬೇಕಾಗಿದೆ. ಪಠ್ಯವು ಪರಿಕಲ್ಪನಾತ್ಮಕ ಜ್ಞಾನವನ್ನು ಒದಗಿಸುವುದಿಲ್ಲ.  ವಿಜ್ಞಾನ ಮತ್ತು ಗಣಿತ ಪಠ್ಯಪುಸ್ತಕದಲ್ಲಿನ ವಿಶೇಷ ಪಠ್ಯಗಳಲ್ಲಿ ಮಕ್ಕಳಿಗೆ ಅರ್ಥವಾಗುವಂತೆ ಯಾವ ಉದಾಹರಣೆಗಳಿಲ್ಲ. ಎಂದು ಎನ್ ಸಿಇಆರ್ ಟಿ ವರದಿ ಬಹಿರಂಗಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.