ರಾಜ್ಯ

ರಾಯಚೂರು: ಪರಿವರ್ತನಾ ರ್ಯಾಲಿ ವೇಳೆ ಕನ್ನಡಕ ಕಳೆದುಕೊಂಡ ಯಡಿಯೂರಪ್ಪ!

ರಾಯಚೂರಿನಲ್ಲಿ ಮಂಗಳವಾರ ರಾತ್ರಿ ನಡೆದ ಪರಿವರ್ತನಾ ರ್ಯಾಲಿ ಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಮ್ಮ ಕನ್ನಡಕವನ್ನು ಕಳೆದುಕೊಂಡಿದ್ದಾರೆ.

ರಾಯಚೂರು: ಪರಿವರ್ತನಾ ರ್ಯಾಲಿ ವೇಳೆ ಕನ್ನಡಕ ಕಳೆದುಕೊಂಡ ಯಡಿಯೂರಪ್ಪ!
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ
Published On :
ರಾಯಚೂರು: ರಾಯಚೂರಿನಲ್ಲಿ ಮಂಗಳವಾರ ರಾತ್ರಿ ನಡೆದ ಪರಿವರ್ತನಾ ರ್ಯಾಲಿ ಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಮ್ಮ ಕನ್ನಡಕವನ್ನು ಕಳೆದುಕೊಂಡಿದ್ದಾರೆ.
ರಾಯಚೂರು ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರಿಗೆ ಹೂ ಮಾಲೆ ಹಾಕಿದ್ದ ವೇಳೆ ಈ ಘಟನೆ ನಡೆದಿದೆ. ಹಾಕಿದ ಹೂ ಮಾಲೆ ತೆಗೆಯುವಾಗ ಕನ್ನಡಕ ಕೆಳಗೆ ಬಿದ್ದಿದ್ದು ಮತ್ತೆ ಪತ್ತೆಯಾಗಿಲ್ಲ. ಕನ್ನಡಕವಿಲ್ಲದ ಕಾರಣ ರಾಯಚೂರು ನಗರದ ಧೂಳು ಭರಿತ ವಾತಾವರಣಕ್ಕೆ ಅವರ ಕಣ್ಣುಗಳು ಕೆಂಪಗಾಗಿದ್ದವು. 
ಸದ್ಯ ಖಾಸಗಿ ಹೋಟೆಲ್ ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಯಡಿಯೂರಪ್ಪ ಅವರಿಗೆ ಬದಲಿ ಕನ್ನಡಕ ತರಲು ಅವರ ಆಪ್ತ ಸಹಾಯಕ ಸಂತೋಷ್ ಬೆಂಗಳೂರಿಗೆ ತೆರಳಿದ್ದಾರೆ. ಇಂದು ಅವರು ಹೆಲಿಕಾಪ್ಟರ್ ನಲ್ಲಿ ಬಿಎಸ್ ವೈ ಅವರ ಕನ್ನಡಕ ತರುವವರಿದ್ದು ನಂತರ ಯಡಿಯೂರಪ್ಪ ಮಾಜಿ ಸಚಿವರಾದ ಸಿ.ಸಿ.ಪಾಟೀಲ್ ಕುಟುಂಬದವರ ವಿವಾಹ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.