ಹೆಚ್ ಐವಿ ಪೀಡಿತ ಅನಾಥಾಶ್ರಮದಲ್ಲಿ ಮದುವೆ ಮಾಡಿಕೊಂಡ ಜೋಡಿ!
ಸಾಮಾನ್ಯವಾಗಿ ಮದುವೆ ಕಲ್ಯಾಣ ಮಂಟಪದಲ್ಲಾಗುತ್ತದೆ. ಬಹಳ ವಿಜೃಂಭಣೆಯಿಂದ ತಮ್ಮ ....
Published On :
ಬೆಳಗಾವಿ: ಸಾಮಾನ್ಯವಾಗಿ ಮದುವೆ ಕಲ್ಯಾಣ ಮಂಟಪದಲ್ಲಾಗುತ್ತದೆ. ಬಹಳ ವಿಜೃಂಭಣೆಯಿಂದ ತಮ್ಮ ಮದುವೆ ನಡೆಯಬೇಕೆಂಬುದು ಎಲ್ಲ ಯುವಕ-ಯುವತಿಯರ ಆಸೆಯಾಗಿರುತ್ತದೆ. ಆದರೆ ಈ ಜೋಡಿ ಮಾತ್ರ ಹೆಚ್ ಐವಿ ಪೀಡಿತ ತಬ್ಬಲಿ ಮಕ್ಕಳ ಮಧ್ಯೆ ಮದುವೆ ಮಾಡಿಕೊಂಡಿದ್ದಾರೆ. ಗಜಾನನ ಮನೆ ಮತ್ತು ಸ್ನೇಹಲ್ ದವರೆ ಬೆಳಗಾವಿಯಲ್ಲಿ ನಿನ್ನೆ ಮಹೇಶ್ ಫೌಂಡೇಶನ್ ಕೇರ್ ಹೋಂ ಆಶಾಕಿರಣ ಏಡ್ಸ್ ಪೀಡಿತ ಮಕ್ಕಳ ಅನಾಥಾಶ್ರಮದಲ್ಲಿ ಮದುವೆಯಾಗಿ ಮಕ್ಕಳನ್ನು ಖುಷಿಪಡಿಸಿದರು.
ಗಜಾನನ ಮನೆ ಮತ್ತು ಸ್ನೇಹಲ್ ಮದುವೆ ಹಿರಿಯರು ನಿಶ್ಚಯಿಸಿದ್ದು. ಆದರೆ ಇವರಿಬ್ಬರೂ ತಮ್ಮ ಮದುವೆ ಮಾಡಿಕೊಂಡಿದ್ದು ಆಶಾಕಿರಣದ ಅನಾಥಾಶ್ರಮದಲ್ಲಿ.
ಗಜಾನನ ಮನೆಯವರ ಸಂಬಂಧಿಕರೊಬ್ಬರು ಮಹೇಶ್ ಫೌಂಡೇಶನ್ ಗೆ ಅವರನ್ನು ಪರಿಚಯಿಸಿದರು. ನಂತರ ಗಜಾನನ ಅವರು ಸ್ನೇಹಲ್ ಜೊತೆ ಮಾತನಾಡುವಾಗ ಆಶಾಕಿರಣದ ಬಗ್ಗೆ ಹೇಳಿದ್ದರು.ಪತ್ರಿಕೆಯಲ್ಲಿ ಆ ಫೌಂಡೇಶನ್ ಬಗ್ಗೆ ತಾನು ಕೂಡ ಓದಿ ತಿಳಿದುಕೊಂಡಿದ್ದೇನೆ ಎಂದು ಸ್ನೇಹಲ್ ಹೇಳಿದರು. ತಮ್ಮ ಮದುವೆಯನ್ನು ಅಲ್ಲಿ ನಡೆಸಿದರೆ ಹೇಗೆ ಎಂದು ಚರ್ಚಿಸಿದರು. ಅದು ನೆರವೇರಿತು ಕೂಡ.
ಆರಂಭದಲ್ಲಿ ಗಜಾನನ ಮನೆ ಮತ್ತು ಸ್ನೇಹಲ್ ಮನೆಯವರಿಗೆ ಇದು ಒಪ್ಪಿಗೆಯಿರಲಿಲ್ಲ. ಮನೆಯವರನ್ನು ಒಪ್ಪಿಸಲು ಜೋಡಿಗೆ ಬಹಳ ಕಷ್ಟವಾಯಿತು. ಕೊನೆಗೆ ಗಜಾನನ ಮನೆಯವರು ಫೌಂಡೇಶನ್ ನ್ನು ವಾರದ ಹಿಂದೆ ಸಂಪರ್ಕಿಸಿ ಒಪ್ಪಿಗೆ ಪಡೆದುಕೊಂಡರು.
ಗಜಾನನ ಮನೆ ಮತ್ತು ಅವರ ಸ್ನೇಹಿತರು ಮದುವೆ ಕಾರ್ಯಕ್ರಮಕ್ಕೆ ತಯಾರಿ ಮಾಡಿದರು, ಆಶಾಕಿರಣ ಆಶ್ರಮದ ಆವರಣವನ್ನು ಅಲಂಕರಿಸಿದರು. ಅನಾಥಾಶ್ರಮದ ಎಲ್ಲಾ ಮಕ್ಕಳಿಗೆ ಹೊಸ ಬಟ್ಟೆ ತೊಡಿಸಲಾಯಿತು. ಕೆಲವು ನಿರ್ಬಂಧಗಳಿಂದಾಗಿ ಸುಮಾರು 100 ಮಂದಿ ಸಂಬಂಧಿಕರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಮಹೇಶ ಫೌಂಡೇಶನ್ ಸ್ಥಾಪಕ ಮಹೇಶ್ ಜಾಧವ್ ಮತ್ತು ಅವರ ಪತ್ನಿ ಮಧು ಕನ್ಯಾದಾನ ಸಂಪ್ರದಾಯಗಳನ್ನು ನೆರವೇರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

