ವನ್ಯಜೀವಿ ಸಂರಕ್ಷಕರಾದ ಎಸ್.ಜಯಚಂದ್ರನ್ ಸೇರಿ ನಾಲ್ವರಿಗೆ ಪ್ರತಿಷ್ಠಿತ ‘ಸ್ಯಾಂಕ್ಚುರಿ ವೈಲ್ಡ್‌ಲೈಫ್ ಪ್ರಶಸ್ತಿ’
ಪ್ರಖ್ಯಾತ ವನ್ಯಜೀವಿ ಸಂರಕ್ಷಕರಾದ ಎಸ್.ಜಯಚಂದ್ರನ್ ಸೇರಿ ನಾಲ್ವರಿಗೆ ಪ್ರತಿಷ್ಠಿತ ‘ಸ್ಯಾಂಕ್ಚುರಿ ಏಷ್ಯಾ ವೈಲ್ಡ್‌ಲೈಫ್ ಪ್ರಶಸ್ತಿ’ಗಳು ಲಭಿಸಿವೆ.

Published On :
ಬೆಂಗಳೂರು: ಪ್ರಖ್ಯಾತ ವನ್ಯಜೀವಿ ಸಂರಕ್ಷಕರಾದ ಎಸ್.ಜಯಚಂದ್ರನ್ ಸೇರಿ ನಾಲ್ವರಿಗೆ ಪ್ರತಿಷ್ಠಿತ ‘ಸ್ಯಾಂಕ್ಚುರಿ ಏಷ್ಯಾ ವೈಲ್ಡ್‌ಲೈಫ್ ಪ್ರಶಸ್ತಿ’ಗಳು ಲಭಿಸಿವೆ.
‘ವೈಲ್ಡ್‌ಲೈಫ್ ಕನ್ಸರ್‌ವೇಷನ್ ಸೊಸೈಟಿ ಇಂಡಿಯಾ (ಡಬ್ಲ್ಯುಸಿಎಸ್‌ಐ)’ ಸಂಘಟನೆಯ ನಾಲ್ಕು ಮಂದಿ ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಮಿಳು ನಾಡಿನ ಎಸ್.ಜಯಚಂದ್ರನ್, ಮುಂಬೈನ ಶಶಾಂಕ್ ದಲ್ವಿ ಅವರುಗಳು ‘ವನ್ಯಜೀವಿ ಸೇವಾ ಪ್ರಶಸ್ತಿ’ ಪಡೆದರೆ ನಿಕಿತ್ ಸುರ್ವೆ ಹಾಗೂ ವೈಶಾಲಿ ರಾವತ್ ‘ಯುವ ಪರಿಸರವಾದಿ’ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
ಸ್ಯಾಂಕ್ಚುರಿ ನೇಚರ್ ಫೌಂಡೇಷನ್ ನ 18ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಮುಂಬೈನಲ್ಲಿ ನಡೆದಿದ್ದು ಆ ಸಂದರ್ಭ ನಾಲ್ವರು ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ConservationJayachandran SSanctuary Wildlife AwardWildlife Conservation Society Indiaವನ ಸಂರಕ್ಷಣೆಜಯಚಂದ್ರನ್ ಎಸ್ಸ್ಯಾಂಕ್ಚುರಿ ವೈಲ್ಡ್‌ಲೈಫ್ ಪ್ರಶಸ್ತಿವೈಲ್ಡ್ಲೈಫ್ ಕನ್ಸರ್ವೇಷ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


