ರಾಣಿ ಚೆನ್ನಮ್ಮ, ಒನಕೆ ಓಬವ್ವ ವಿರುದ್ಧ ಹೇಳಿಕೆ: ಕನ್ನಡ ವೆಬ್ಸೈಟ್ ವಿರುದ್ಧ ಎಫ್ಐಆರ್ ದಾಖಲು
ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಲಾಗಿದೆ ಎಂದು ವೆಬ್ ಸೈಟ್ ವೊಂದರ ....

Published On :
ಬೆಂಗಳೂರು: ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಲಾಗಿದೆ ಎಂದು ವೆಬ್ ಸೈಟ್ ವೊಂದರ ವಿರುದ್ಧ ದೂರು ದಾಖಲಿಸಿದ್ದು ಟ್ವಿಟ್ಟರ್ ನಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಪೋಸ್ಟ್ ಕಾರ್ಡ್ ಕನ್ನಡ.ಕಾಂ ಎಂಬ ವೆಬ್ ಸೈಟ್ ನಲ್ಲಿ ಇತಿಹಾಸಕಾರರಾದ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಒನಕೆ ಓಬವ್ವ ಅವರ ವಿರುದ್ಧ ಅವಹೇಳನಕಾರಿಯಾಗಿ ಬರೆಯಲಾಗಿದೆ ಎಂದು ಕನವ ಬಸವಕುಮಾರ್ ಎಂಬುವವರು ದೂರು ನೀಡಿದ್ದರು. ಈ ವಿಷಯ ಟ್ವಿಟ್ಟರ್ ನಲ್ಲಿ ಚರ್ಚಾ ವಿಷಯವಾಗಿತ್ತು.
ಬಸವಕುಮಾರ್ ತಮ್ಮ ದೂರಿನಲ್ಲಿ, ವೆಬ್ ಸೈಟ್ ನ ಅನಾಮಧೇಯ ಅಡ್ಮಿನಿಸ್ಟ್ರೇಟರ್, ಕಿತ್ತೂರು ರಾಣಿ ಚೆನ್ನಮ್ಮ ಅವರಿಗೆ ಬ್ರಿಟಿಷರ ಜೊತೆ ಅಕ್ರಮ ಸಂಬಂಧವಿತ್ತು ಮತ್ತು ಒನಕೆ ಓಬವ್ವ ಹೈದರ್ ಆಲಿಯ ಜೊತೆ ಹಾಸಿಗೆ ಹಂಚಿಕೊಂಡಿದ್ದರು. ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ಈ ಇಬ್ಬರು ಮಹಿಳೆಯರ ಅನುಯಾಯಿಗಳು ಮತ್ತು ಈ ಸಮುದಾಯದ ನಾಯಕರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ದೂರು ಸಲ್ಲಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಒತ್ತಾಯಿಸಿದ್ದಾರೆ.
ದೂರಿನ ಪ್ರಕಾರ, ವಿ ಸಪೋರ್ಟ್ ಪೋಸ್ಟ್ ಕಾರ್ಡ್ ಹ್ಯಾಶ್ ಟಾಗ್ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗಿದೆ. ಅದಕ್ಕೆ 5,000ಕ್ಕೂ ಅಧಿಕ ಟ್ವೀಟ್ ಗಳು ಬಂದಿವೆ. ಹಲವರು ವೆಬ್ ಸೈಟ್ ಗೆ ಬೆಂಬಲ ಸೂಚಿಸಿದ್ದಾರೆ. ಐಪಿಸಿ ಸೆಕ್ಷನ್ 295 ಎಯಡಿ ದೂರು ದಾಖಲಿಸಲಾಗಿದೆ. ಇದೊಂದು ದುರುದ್ದೇಶಪೂರಿತ ಕ್ರಮವಾಗಿದ್ದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಲಾಗಿದೆ ಎಂದು ಆರೋಪಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Twitterಟ್ವಿಟ್ಟರ್Social Mediaಸಾಮಾಜಿಕ ಮಾಧ್ಯಮReligious sentimentOnake ObavvaKittur Rani Chennammaಒನಕೆ ಓಬವ್ವಕಿತ್ತೂರು ರಾಣಿ ಚೆನ್ನಮ್ಮಧಾರ್ಮಿಕ ಭಾವನೆಗಳು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


