99% ರಷ್ಟು ಅತ್ಯಾಚಾರಗಳು ಮಹಿಳೆಯರ ಪರಿಚಯಸ್ಥರಿಂದಲೇ ಸಂಭವಿಸುತ್ತವೆ
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಹೆಚ್ಚುತ್ತಿದ್ದು ಇದರಲ್ಲಿ ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳು ಮಹಿಳೆಯರ ಪರಿಚಿತರೇ ಆಗಿರುತ್ತಾರೆ.

Published On :
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಹೆಚ್ಚುತ್ತಿದ್ದು ಇದರಲ್ಲಿ ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳು ಮಹಿಳೆಯರ ಪರಿಚಿತರೇ ಆಗಿರುತ್ತಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್ ಸಿಆರ್ ಬಿ) ಇತ್ತೀಚೆಗೆ ಬಿಡುಗಡೆ ಮಾಡಿದ 2016 ರ ಅಂಕಿ ಅಂಶಗಳ ಪ್ರಕಾರ, 2014 - 16 ರ ನಡುವೆ, ಮಹಿಳೆಯರಿಗೆ ಪರಿಚಯ ವಿರುವವರಿಂದಲೇ ನಡೆದ ಲೈಂಗಿಕ ಕಿರುಕುಳದ ಪ್ರಕರಣಗಳು ಶೇ.86 ರಿಂದ 99.2 ಕ್ಕೆ ಏರಿದೆ.
ಹೆಚ್ಚಿನ ಸಂದರ್ಭಗಳಲ್ಲಿ, ಅಪರಾಧಿಗಳು ನೆರೆಮನೆಯವರಾಗಿರುತ್ತಾರೆ ಅಥವಾ ಅತ್ಯಾಚಾರ ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದವರಾಗಿರುತ್ತಾರೆ. 2016 ರಲ್ಲಿ ಬೆಳಕಿಗೆ ಬಂದ ಒಟ್ಟು 1,655 ಅತ್ಯಾಚಾರ ಪ್ರಕರಣಗಳಲ್ಲಿ, 1,642 ಪ್ರಕರಣಗಳು ಈ ವಿಭಾಗದಲ್ಲಿ ವರದಿಯಾಗಿದೆ.
ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಕೆ.ಎಸ್. ವಿಮಾಲಾ ಅವರು, ಜನರ ಮನಸ್ಸು ಬದಲಾಗಬೇಕು. ರಾತ್ರಿ ವೇಳೆ ಮಹಿಳೆ ಒಂಟಿಯಾಗಿ ತಿರುಗುತ್ತಾಳೆ ಎಂದ ಮಾತ್ರಕ್ಕೆ ಅತ್ಯಾಚಾರಾ ನಡೆಯುವುದಿಲ್ಲ. ನಾವೇ$ನು ಬೇಡಿಕೆ ಇಟ್ಟಿದ್ದೆವೋ ಅದನ್ನೇ ಈ ವರದಿಯೂ ಹೇಳಿದೆ. ಸಮಾಜದ ಜನರಲ್ಲಿ ಈ ಕುರಿತಂತೆ ಅರಿವು ಮೂಡಬೇಕಿದೆ ಎನ್ನುತ್ತಾರೆ. "ಭಾರತೀಯರಲ್ಲಿ ಹಿಂದಿನಿಂದ ಬಂದ ಪುರುಷ ಪ್ರಧಾನ ಸಮಾಜ ವ್ಯವಸ್ಥೆಯ ಕಾರಣ ಮಹಿಳೆ ಬಗೆಗೆ ಇಂತಹಾ ಭಾವನೆಗಳು ಉಂಟಾಗುತ್ತಿದೆ. ಲಿಂಗ ಸಮಾನತೆ ಕುರಿತಂತೆ ಸಮಾಜದಲ್ಲಿ ಜಾಗೃತಿ ಮೂಡಬೇಕಿದೆ"ಮಾಜಿ ಡಿಜಿ ಮತ್ತು ಐಜಿಪಿ ಎಸ್ ಟಿ ರಮೇಶ್ ಹೇಳಿದರು.
"ಸಂಬಂಧಿಕರು ಅಥವಾ ಪರಿಚಿತರು ಅತ್ಯಾಚಾರವೆಸಗಿದಾಗ ಮಹಿಳೆಯರು ಅದರ ವಿರುದ್ಧ ದೂರು ನೀಡಲು ಹಿಂಜರಿಯುವುದರಿಂದ ಅತ್ಯಾಚಾರಿಗಳಿಗೆ ಈ ಮಾರ್ಗ ಅನುಕೂಲಕರವಾಗಿ ಪರಿಣಮಿಸಿದೆ" ಮನೋವೈದ್ಯರಾದ ಡಾ ಸತೀಶ್ ರಾಮಯ್ಯ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಅತ್ಯಾಚಾರ ಪ್ರಕರಣrape victimsNational Crime Records Bureausexual assaultsknown peopleರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊಪರಿಚಿತ ಜನರುಅತ್ಯಾಚಾರದ ಸಂತ್ರಸ್ತರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


