ರಾಜ್ಯ

ಮೈಸೂರು: ತಾವು ಕಲಿತ ಶಾಲೆಯಲ್ಲೇ ಮಕ್ಕಳಿಗೆ ಸಿದ್ದರಾಮಯ್ಯ ವ್ಯಾಕರಣ ಪಾಠ!

ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಕಲಿತ ಶಾಲೆಯ ವಿದ್ಯಾರ್ಥಿಗಳಿಗೆ ವ್ಯಾಕರಣ ಪಾಠ ಹೇಳಿಕೊಡುವ ಮೂಲಕ ಕೆಲ ಕಾಲ ಶಿಕ್ಷಕರಾಗಿದ್ದರು....

ಮೈಸೂರು: ತಾವು ಕಲಿತ ಶಾಲೆಯಲ್ಲೇ ಮಕ್ಕಳಿಗೆ ಸಿದ್ದರಾಮಯ್ಯ ವ್ಯಾಕರಣ ಪಾಠ!
ಶಾಲೆಯ ಆವರಣದಲ್ಲಿ ಗಿಡ ನೆಡುತ್ತಿರುವ ಸಿಎಂ
Published On :
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಕಲಿತ ಶಾಲೆಯ ವಿದ್ಯಾರ್ಥಿಗಳಿಗೆ ವ್ಯಾಕರಣ ಪಾಠ ಹೇಳಿಕೊಡುವ ಮೂಲಕ ಕೆಲ ಕಾಲ ಶಿಕ್ಷಕರಾಗಿದ್ದರು. 
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ತಾಲೂಕಿನ ಕುಪ್ಪೇಗಾಲದ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಿದ್ದರು.
ಈ ವೇಳೆ ಶಿಕ್ಷಕರು, ಶಾಲಾ ಅಭಿವೃದ್ಧಿ ಮಂಡಳಿ ಸದಸ್ಯರು ಹಾಗೂ ಮಕ್ಕಳು ಸಿದ್ದರಾಮಯ್ಯ ಅವರಿಗೆ ಅದ್ಧೂರಿ ಸ್ವಾಗತ ಕೋರಿದರು. ಜೊತೆಗೆ ಮೈಸೂರು ಪೇಠ ತೊಡಿಸಿ ಸನ್ಮಾನಿಸಿದರು.
ತಮ್ಮ ಎಡೆಬಿಡದ ಕಾರ್ಯಕ್ರಮಗಳ ಮಧ್ಯೆ ಬಿಡುವು ಮಾಡಿಕೊಂಡು ಶಾಲಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಎಂ ಮಕ್ಕಳಿಗೆ ಸಿಎಂ ವ್ಯಾಕರಣ ಪಾಠ ಮಾಡಿದರು.
ನಾನು ಓದಿದ ಶಾಲೆಯ ಋಣ ತೀರಿಸುವುದಕ್ಕಾಗಿ ನನ್ನ ಸ್ವಂತ ಹಣದಿಂದ ಶಾಲೆಗೆ ಕಾಂಪೌಂಡ್, ಗ್ರಂಥಾಲಯ ಕಟ್ಟಿಸಿಕೊಡುತ್ತೇನೆ. ಅಲ್ಲದೆ, ಸರ್ಕಾರದಿಂದ ಈಗಾಗಲೇ 10 ಕೊಠಡಿಗಳನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. 
ಖಾಸಗಿ ಶಾಲೆಗಳಲ್ಲಿ ಓದು ಮಕ್ಕಳು ಬುದ್ಧಿವಂತರಾಗಿರುತ್ತಾರೆ ಎಂಬ ತಪ್ಪುಗ್ರಹಿಕೆಯಿದೆ, ಆದರೆ ಖಾಸಗಿ ಶಾಲಾ ಮಕ್ಕಳಿಗಿಂತ ಸರ್ಕಾರಿ ಶಾಲಾ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಾಗಿದೆ. ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸುವುದರಿಂದ ವಿದ್ಯಾರ್ಥಿಗಳಿಗೆ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. 
ತಾವು ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡಲು ಸಹಾಯ ಮಾಡಿದ ತಮ್ಮ ಶಿಕ್ಷಕರಾದ ನಂಜೇಗೌಡ ಮತ್ತು ರಾಜಪ್ಪ ಅವರಿದೆ ನಮನ ಸಲ್ಲಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.