ರಾಜ್ಯ

ವೀರಶೈವ- ಲಿಂಗಾಯತ ಎರಡೂ ಒಂದೇ: ಮಠಾಧೀಶರ ಒಕ್ಕೊರಲ ಘೋಷಣೆ

ವೀರಶೈವ – ಲಿಂಗಾಯತ ಎರಡೂ ಒಂದೇ, ಸ್ವತಂತ್ರ ಧರ್ಮದ ಮಾನ್ಯತೆಯನ್ನು ವೀರಶೈವ- ಲಿಂಗಾಯತ ಧರ್ಮ ಎಂದೇ ನೀಡಬೇಕು ...

ವೀರಶೈವ- ಲಿಂಗಾಯತ ಎರಡೂ ಒಂದೇ: ಮಠಾಧೀಶರ ಒಕ್ಕೊರಲ ಘೋಷಣೆ
ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದ ಮಠಾಧೀಶರು
Published On :
ಬೆಂಗಳೂರು: ವೀರಶೈವ – ಲಿಂಗಾಯತ ಎರಡೂ ಒಂದೇ, ಸ್ವತಂತ್ರ ಧರ್ಮದ ಮಾನ್ಯತೆಯನ್ನು ವೀರಶೈವ- ಲಿಂಗಾಯತ ಧರ್ಮ ಎಂದೇ ನೀಡಬೇಕು ಎಂದು ಮಠಾಧೀಶರು ಆಗ್ರಹಿಸಿದ್ದಾರೆ. 
ವೀರಶೈವ ಲಿಂಗಾಯತ ಸಮನ್ವಯ ಸಮಿತಿ ವಿಜಯನಗರದ ಸುಜ್ಞಾನ ಮಂಟಪದಲ್ಲಿ ಆಯೋಜಿಸಿದ್ದ ಪಂಚಪೀಠಾಚಾರ್ಯರು ಹಾಗೂ ವಿರಕ್ತ ಪರಂಪರೆಯ ಹರಗುರು ಚರಮೂರ್ತಿಗಳ ಬೃಹತ್ ಸಮಾಲೋಚನಾ ಸಭೆಯಲ್ಲಿ ವೀರಶೈವ ಲಿಂಗಾಯತ ಎರಡೂ ಒಂದೇ, ಹಾಗಾಗಿ, ಸ್ವತಂತ್ರ ಧರ್ಮದ ಮಾನ್ಯತೆಯನ್ನು ವೀರಶೈವ ಲಿಂಗಾಯತ ಎಂದೇ ನೀಡಬೇಕು ಎಂಬ ನಿರ್ಣಯವನ್ನು ವೀರಶೈವ – ಲಿಂಗಾಯತ ಪಂಚಪೀಠಾಧೀಶ್ವರರು ಹಾಗೂ ವಿರಕ್ತ ಪರಂಪರೆಯ ಶ್ರೀಗಳ ಸಮಾವೇಶದಲ್ಲಿ ಕೈಗೊಳ್ಳಲಾಗಿದೆ. 
ಸಮಾಜವನ್ನು ಒಡೆಯಲು ಕೆಲವರು ವೀರಶೈವ ಬೇರೆ, ಲಿಂಗಾಯತ ಬೇರೆ ಎಂಬ ವಾದಗಳನ್ನು ಹರಿಯಬಿಟ್ಟಿದ್ದಾರೆ. ಇದು ಸರಿಯಲ್ಲ ಎಂದು ಅರಗೂರು ಚಾರುಮೂರ್ತಿ ಸ್ವಾಮಿ ಹೇಳಿದ್ದಾರೆ. ಸಮಾಜ ಕಟ್ಟುವ ಕೆಲಸ ಆಗಲಿ, ಸಮಾಜ ಒಡೆಯುವ ಬಗ್ಗೆ ಎಲ್ಲರೂ ಎಚ್ಚರದಿಂದಿರಬೇಕು. ವೀರಶೈವರದು, ಲಿಂಗಾಯತರದು ಎಲ್ಲರದೂ ಒಂದೇ ಆಚಾರ-ವಿಚಾರ ಎಂದು ತಿಳಿಸಿದ್ದಾರೆ.
ಸಮಾಲೋಚನಾ ಸಭೆಯಲ್ಲಿ ಪಂಚಪೀಠಾಧಿಪತಿಗಳ ಜತೆಗೆ ಬಸವಾಧಿಶರಣರ ಪರಂಪರೆಯ ವಿರಕ್ತ ಮಠದ 300ಕ್ಕೂ ಹೆಚ್ಚು ಸ್ವಾಮೀಜಿಗಳು ಪಾಲ್ಗೊಂಡಿದ್ದರು.
ಪಂಚಪೀಠಾಧೀಶರ ಪೈಕಿ ಕೇದಾರ ಪೀಠದ ಸ್ವಾಮಿಗಳು ಗೈರಾಗಿದ್ದರು. ಉಳಿದಂತೆ ರಂಭಾಪುರಿ ಪೀಠದ ಶ್ರೀ ಪ್ರಸನ್ನರೇಣುಕಾ ವೀರಸೋಮಶ್ವರ ಸ್ವಾಮೀಜಿ, ಶ್ರೀಶೈಲ ಪೀಠದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ, ಉಜ್ಜಯನಿಯ ಸಿದ್ದಲಿಂಗ ರಾಜ ದೇಶೀಕೇಂದ್ರ ಸ್ವಾಮೀಜಿ, ಕಾಶಿಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಇವರುಗಳು ಪಾಲ್ಗೊಂಡಿದ್ದರು.
ವಿರಕ್ತ ಮಠಗಳ ಪೈಕಿ ಕೊಪ್ಪಳದ ಗವಿಮಠದ ಸ್ವಾಮೀಜಿ, ಮುಂಡರಗಿ ಮಠದ ಸ್ವಾಮೀಜಿ, ದೇವೀಮಠದ ಸ್ವಾಮೀಜಿ, ಕುಪ್ಪೂರು ಶ್ರೀಗಳು ಹೀಗೆ ಹಲವು ಪ್ರಮುಖ ವಿರಕ್ತ ಪರಂಪರೆಯ ಮಠಾಧೀಶರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.