ರಾಜ್ಯ

ಶಶಿಕಲಾ ಹೊಸೂರು ಕ್ಷೇತ್ರದ ಶಾಸಕರನ್ನು ಮನೆಯಲ್ಲಿ ಭೇಟಿಯಾಗಿದ್ದರು: ಎಸಿಬಿ ಎದುರು ಮಾಜಿ ಡಿಐಜಿ ರೂಪಾ

ಪರಪ್ಪನ ಕೇಂದ್ರ ಕಾರಾಗೃಹದ ಸಮೀಪದಲ್ಲಿರುವ ಹೊಸೂರು ಕ್ಷೇತ್ರದ ಶಾಸಕರ ಮನೆಗೆ ಎಐಎಡಿಎಂಕೆ...

ಶಶಿಕಲಾ ಹೊಸೂರು ಕ್ಷೇತ್ರದ ಶಾಸಕರನ್ನು ಮನೆಯಲ್ಲಿ ಭೇಟಿಯಾಗಿದ್ದರು: ಎಸಿಬಿ ಎದುರು ಮಾಜಿ ಡಿಐಜಿ ರೂಪಾ
ಮಾಜಿ ಡಿಐಜಿ ರೂಪಾ
Published On :

ಬೆಂಗಳೂರು: ಪರಪ್ಪನ ಕೇಂದ್ರ ಕಾರಾಗೃಹದ ಸಮೀಪದಲ್ಲಿರುವ ಹೊಸೂರು ಕ್ಷೇತ್ರದ ಶಾಸಕರ ಮನೆಗೆ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ಭೇಟಿ ನೀಡಿದ್ದು, ಅದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಲ್ಲಿಸಿದ ವರದಿಯಲ್ಲಿ ಮಾಜಿ ಡಿಐಜಿ ಹಾಗೂ ರಸ್ತೆ ಸುರಕ್ಷತೆ ಮತ್ತು ಸಂಚಾರಿ ವಿಭಾಗದ ಆಯುಕ್ತೆ ಡಿ.ರೂಪಾ ಆರೋಪಿಸಿದ್ದಾರೆ.

ಜುಲೈ 31ರಂದು ನೀಡಿದ ನೊಟೀಸ್ ಗೆ ಸಂಬಂಧಪಟ್ಟಂತೆ ಭ್ರಷ್ಟಾಚಾರ ನಿಗ್ರಹ ದಳದ ಮುಂದೆ ಮೊನ್ನೆ 19ರಂದು ಹಾಜರಾದ ರೂಪಾ ಅವರು, ಶಶಿಕಲಾ ಹೊಸೂರು ಕ್ಷೇತ್ರದ ಶಾಸಕರ ಮನೆಗೆ ಭೇಟಿ ನೀಡಿರುವುದು ಜೈಲಿನ ಪ್ರವ್ಶ ಭಾಗದಲ್ಲಿರುವ ಮತ್ತು ಗೇಟ್ ಸಂಖ್ಯೆ 1 ಮತ್ತು ಗೇಟ್ ಸಂಖ್ಯೆ 2ರಲ್ಲಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸಿಗಬಹುದು ಎಂದು ಹೇಳಿದ್ದಾರೆ.

ತಮ್ಮ ಆರೋಪವನ್ನು ಮತ್ತೆ ಪುನಃ ಒತ್ತಿ ಹೇಳಿರುವ ರೂಪಾ, ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಮೇಲ್ದರ್ಜೆಯ ಕೈದಿಯಾಗಿ ಶಶಿಕಲಾ ಪರಪ್ಪನ ಜೈಲಿನಲ್ಲಿ ಜೀವನ ನಡೆಸುತ್ತಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ಕೇಸಿನಲ್ಲಿ ಕೈದಿಯಾಗಿರುವ ಶಶಿಕಲಾ ವಿರುದ್ಧ ರೂಪಾ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ನಾಲ್ಕು ವಿಡಿಯೊ ತುಣುಕುಗಳನ್ನು ಹೊಂದಿದ ಸಿಡಿಯನ್ನು ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.