ರಾಜ್ಯ

ಹಿಂದಿ ಭಾಷಾ ಹೇರಿಕೆ ವಿರೋಧಿಸುವಂತೆ ಇತರ ರಾಜ್ಯಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನವಿ

ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಭಾಷೆ ಹೇರುವುದನ್ನು ವಿರೋಧಿಸಿ ಕನ್ನಡವನ್ನು ಹೆಚ್ಚು ಬಳಸಲು...

ಹಿಂದಿ ಭಾಷಾ ಹೇರಿಕೆ ವಿರೋಧಿಸುವಂತೆ ಇತರ ರಾಜ್ಯಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನವಿ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ
Published On :
ಬೆಂಗಳೂರು: ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಭಾಷೆ ಬಳಕೆ ವಿರೋಧಿಸಿ ಕನ್ನಡವನ್ನು ಹೆಚ್ಚು ಬಳಸಲು ಒತ್ತಾಯಿಸುತ್ತಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇದೀಗ, ಪ್ರಾದೇಶಿಕ ಭಾಷಾ ಅಭಿವೃದ್ಧಿ ಪ್ರಾಧಿಕಾರಗಳನ್ನು ಸ್ಥಾಪಿಸಲು ಇತರ ರಾಜ್ಯಗಳನ್ನು ಒತ್ತಾಯಿಸುತ್ತಿದೆ. 
ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಹಿಂದಿ ಭಾಷೆ ಬಳಸುವುದನ್ನು ನಾವು ವಿರೋಧಿಸುವುದಿಲ್ಲ. ಹಾಗೆಂದು ಕನ್ನಡ ಭಾಷೆಯನ್ನು ತಿರಸ್ಕರಿಸಬಾರದು. ಎಲ್ಲಾ ಕಚೇರಿ ದಾಖಲೆಗಳು, ಪ್ರಕಟಣೆಗಳು, ಭಿತ್ತಿಪತ್ರಗಳು, ರಬ್ಬರ್ ಸ್ಟಾಂಪ್ ಗಳು, ವಿಸಿಟಿಂಗ್ ಕಾರ್ಡುಗಳಲ್ಲಿ, ವಾಹನ ನೋಂದಣಿ, ವೆಬ್ ಸೈಟ್ ಗಳು ಇತ್ಯಾದಿಗಳಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಬಳಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಹೇಳುತ್ತಾರೆ. 
ಇದುವರೆಗೆ 316 ಸರ್ಕಾರಿ ಆದೇಶಗಳಲ್ಲಿ ಕನ್ನಡ ಭಾಷೆಯನ್ನು ವ್ಯಾವಹಾರಿಕ ಭಾಷೆಯಾಗಿ ಜಾರಿಗೆ ತರುವಂತೆ ಸೂಚಿಸಲಾಗಿದ್ದರೂ ಕೂಡ ಕನ್ನಡವನ್ನು ಇನ್ನೂ ವಿಸ್ತಾರವಾಗಿ ಬಳಸುತ್ತಿಲ್ಲ ಎಂದು ಹೇಳಿದರು.
ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಭಾಷೆಯನ್ನು ಹೇರಲಾಗುತ್ತಿದೆ. ಸರ್ಕಾರದ ಪ್ರಾಧಿಕಾರವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಭಾಷೆಯ ಉಳಿವು-ಬೆಳವಿಗಾಗಿ ಹೋರಾಡುತ್ತಿದೆ. ಬೇರೆ ಯಾವುದೇ ರಾಜ್ಯಗಳಲ್ಲಿ ಸ್ಥಳೀಯ ಭಾಷಾ ಅಭಿವೃದ್ಧಿ ಪ್ರಾಧಿಕಾರಗಳಿಲ್ಲ. ಹೀಗಾಗಿ ಇದೇ ರೀತಿಯ ಪ್ರಾಧಿಕಾರ ಸ್ಥಾಪಿಸುವಂತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಕನ್ನಡ ಭಾಷೆಗಾಗಿ: ನಮ್ಮ ಮೆಟ್ರೊ ನಿಲ್ದಾಣಗಳಲ್ಲಿ ಹಿಂದಿ ಭಾಷೆ ಬಳಸಬಾರದೆಂದು ಕನ್ನಡಪರ ಸಂಘಟನೆಗಳು ನಡೆಸಿದ ಪ್ರತಿಭಟನೆ ಯಶಸ್ವಿಯಾಗಿದೆ. ಹಿಂದಿ ಸೂಚನಾ ಫಲಕಗಳನ್ನು ತೆಗೆದುಹಾಕಲಾಗಿದೆ. ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಕಡ್ಡಾಯಗೊಳಿಸಲು ಪ್ರಾಧಿಕಾರ ಶಿಫಾರಸು ಮಾಡಿದೆ. ಬ್ಯಾಂಕು ಉದ್ಯೋಗಿಗಳಿಗೆ ಆರು ತಿಂಗಳಿನಲ್ಲಿ ಕನ್ನಡ ಭಾಷೆ ಕಲಿಯುವಂತೆ ಸೂಚನೆ ನೀಡಲಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಆಪಲ್ ಇಂಕ್ ಕಂಪೆನಿಯ ಸಿಇಒಗೆ ಪತ್ರ ಬರೆದು, ಐಒಎಸ್ ಸಾಫ್ಟ್ ವೇರ್ ನಲ್ಲಿ ಕನ್ನಡ ಕೀಬೋರ್ಡ್ ಲೇ ಔಟ್ ಮತ್ತು ಫಾಂಟ್ ಗಳನ್ನು ಅಭಿವೃದ್ಧಿಪಡಿಸಲು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.