ರಾಜ್ಯ

ಸಿ-ಫೋರ್ ಸಮೀಕ್ಷೆ: 2019 ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 120-132 ಸ್ಥಾನ

ರಾಜ್ಯ ಕಾಂಗ್ರೆಸ್ ಪಕ್ಷವು ಸಂಭ್ರಮಿಸಲು ಇನ್ನೊಂದು ಕಾರಣ ದೊರಕಿದೆ! ಮಾರುಕಟ್ಟೆ ಸಂಶೋಧನಾ ಸಂಸ್ಥೆ ಸಿ-ಫೋರ್ ನಡೆಸಿದ ಸಮೀಕ್ಷೆಯು ಕಾಂ

ಸಿ-ಫೋರ್ ಸಮೀಕ್ಷೆ: 2019 ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 120-132 ಸ್ಥಾನ
ಸಮೀಕ್ಷೆ-ಕಾಂಗ್ರೆಸ್ ಗೆ 120-132 ಸ್ಥಾನ
Published On :
ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಕ್ಷವು ಸಂಭ್ರಮಿಸಲು ಇನ್ನೊಂದು ಕಾರಣ ದೊರಕಿದೆ!  ಮಾರುಕಟ್ಟೆ ಸಂಶೋಧನಾ ಸಂಸ್ಥೆ ಸಿ-ಫೋರ್ ನಡೆಸಿದ  ಸಮೀಕ್ಷೆಯು ಕಾಂಗ್ರೆಸ್ ಗೆ ಸಂಪೂರ್ಣ ಬಹುಮತ ಬರುವುದಾಗಿ ತಿಳಿದು ಬಂದಿದೆ. .
ಸಂಸ್ಥೆಯ ವೆಬ್ ಸೈಟಿನಲ್ಲಿ ಹಾಕಲಾದ ಸಮೀಕ್ಷೆ ಫಲಿತಾಂಶದಂತೆ ಮತ್ತು, ಭಾನುವಾರ ಮುಖ್ಯಮಂತ್ರಿ ಕಚೇರಿಯಿಂದ ಪ್ರಸಾರವಾದ ಸಮೀಕ್ಷೆಯ ವರದಿಯ ಆಧಾರದಲ್ಲಿ, ಇದೇ ತಕ್ಷಣ ಚುನಾವಣೆ ನಡೆದರೆ ಕಾಂಗ್ರೆಸ್ 120 ರಿಂದ 132 ಸ್ಥಾನಗಳನ್ನು ಪಡೆಯುತ್ತದೆ, ಇದು ಪೂರ್ಣ ಬಹುಮತಕ್ಕೆ 113 ರ ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಾಗಿದೆ. 
ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ಸಂಸ್ಥೆಯ ಪ್ರತಿನಿಧಿ, ಯಾವುದೇ ರಾಜಕೀಯ ಪಕ್ಷದ ಕೋರಿಕೆಯ ಮೇರೆಗೆ ಈ ಸಮೀಕ್ಷೆಯನ್ನು ನಡೆಸಲಾಗಲಿಲ್ಲ ಮತ್ತು ಈ ಕಾರ್ಯವು ಸಂಸ್ಥೆಯ ಸಾಮಾನ್ಯ ಕಾರ್ಯಾಚರಣೆಯ ಭಾಗವಾಗಿತ್ತು ಎಂದು ಹೇಳಿದ್ದಾರೆ.
ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, ಬಿಜೆಪಿ 60 ರಿಂದ 72 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಮತ್ತು ಜೆಡಿಎಸ್ 24 ರಿಂದ 30 ಸ್ಥಾನಗಳನ್ನು ಪಡೆಯಬಹುದಾಗಿದೆ. ಜುಲೈ 19 ಮತ್ತು ಆಗಸ್ಟ್ 10 ರ ನಡುವೆ ಈ ಸಮೀಕ್ಷೆಯನ್ನು ನಡೆಸಲಾಗಿದ್ದು ಎಲ್ಲ ಜಿಲ್ಲೆಗಳನ್ನೂ ಒಳಗೊಂಡಿದ್ದ 165 ವಿಧಾನಸಭಾ ಕ್ಷೇತ್ರಗಳಲ್ಲಿ 24,679 ಮತದಾರರನ್ನು ಸಮೀಕ್ಷೆಗಾಗಿ ಸಂಪರ್ಕಿಸಲಾಗಿತ್ತು.
ವರದಿಯ ಪ್ರಕಾರ, ಚುನಾವಣೆ ನಡೆದರೆ ಕಾಂಗ್ರೆಸ್ ಶೇಕಡಾ 43 ರಷ್ಟು ಮತಗಳನ್ನು ಪಡೆದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಬಿಜೆಪಿ ಶೇಕಡ 32 ರಷ್ಟು ಮತ್ತು ಜೆಡಿಎಸ್ ಶೇ 17 ರಷ್ಟು ಇದೆ.
ಕರ್ನಾಟಕದ ಜನತೆಯ ಅಗಾಧವಾದ ಬೆಂಬಲವನ್ನು ಸಿದ್ದರಾಮಯ್ಯ ಹೊಂದಿದ್ದಾರೆ. ಸಿದ್ದರಾಮಯ್ಯ ರಾಜ್ಯದ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಎಂದು ಶೇ. 46 ರಷ್ಟು ಜನರು ಸಮೀಕ್ಷೆಯ ಸಮಯದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.