ರಾಜ್ಯ

ಕೊಡಗಿನ ಹಾಕಿ ಆಟಗಾರನನ್ನು ಕೊಲೆಗೈದ ಪತ್ನಿ

ಕೊಡಗು ಮೂಲದ ಮಾಜಿ ಹಾಕಿ ಆಟಗಾರ ಅಪೈಯ್ಯ ಚೆನಂದ ಅವರ ಪತ್ನಿಯಿಂದಲೇ ಕೊಲೆಗೀಡಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.

ಕೊಡಗಿನ ಹಾಕಿ ಆಟಗಾರನನ್ನು ಕೊಲೆಗೈದ ಪತ್ನಿ
ಅಪೈಯ್ಯ ಚೆನಂದ
Published On :
ಮುಂಬೈ: ಕೊಡಗು ಮೂಲದ ಮಾಜಿ ಹಾಕಿ ಆಟಗಾರ ಅಪೈಯ್ಯ ಚೆನಂದ ಅವರ ಪತ್ನಿಯಿಂದಲೇ ಕೊಲೆಗೀಡಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಕುಟುಂಬ ಕಲಹದಿಂದಾಗಿ ಪತ್ನಿ ಅಮಿತಾ ಏಳು ಬಾರಿ ಚಾಕುವಿನಿಂದ ಇರಿದು 52 ವರ್ಷದ ಅಪೈಯ್ಯ ಅವರನ್ನು ಕೊಲೆಮಾಡಿದ್ದಾರೆ. ನಂತರ ತಾನೂ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಲಾಡದ ಕಚ್‌ಪಡ ಪ್ರದೇಶದಲ್ಲಿರುವ ಫ್ಲ್ಯಾಟ್‌ನ 27 ನೇ ಮಹಡಿಯಲ್ಲಿ ಘಟನೆ ನಡೆದಿದ್ದು ಮೃತ ಅಪೈಯ್ಯ ಗೆ 23 ವರ್ಷದ ಮಗ ಗಣಪತಿ, 15 ವರ್ಷದ ಮಗಳು ಇದ್ದರು. ಆದರೆ ಘಟನೆ ವೇಳೆ ಅವರಾರೂ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. 
ದಂಪತಿಗಳು ಮದ್ಯಪಾನ ಮಾಡುವ ವೇಳೆ ಯಾವುದೋ ವಿಷಯಕ್ಕೆ ದಂಪತಿಗಳಿಬ್ಬರು ವಾದ ಪ್ರಾರಂಭಿಸಿದ್ದಾರೆ. ಇದು ವಿಕೋಪಕ್ಕೆ ಹೋಗಿ ಕೋಪಗೊಂಡ ಅಮಿತಾ ಅಡುಗೆ ಮನೆಗೆ ತೆರಳಿ, ಚಾಕು ತಂದು ಗಂಡನಿಗೆ ಏಳು ಬಾರಿ ಇರಿದು ಕೊಲೆಮಾಡಿ ನಂತರ ತಾನು ಇರಿದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮಲಾಡ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಅಮಿತ ಆರೋಗ್ಯ ಸುಧಾರಿಸಿದ ಬಳಿಕ ವಶಕ್ಕೆ ಪಡೆಯುವುದಾಗಿ ತಿಳಿಸಿದ್ದಾರೆ.
ಅಮಿತಾ ಅವರು ಅಪೈಯ್ಯ ಎರಡನೇ ಪತ್ನಿ ಎಂದು ತಿಳಿದು ಬಂದಿದೆ.
ಅಪೈಯ್ಯ ಚೆನಂದ್ ಏರ್ ಇಂಡಿಯಾ ಪರ ಆಟವಾಡಿದ್ದಾರೆ. ಟಾಟಾ ಮತ್ತು ಬಾಂಬೆ ಹಾಕಿ ತಂಡಗಳಲ್ಲಿ ಹಲವಾರು ಬಾರಿ ಭಾಗವಹಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.