ರಾಜ್ಯ

ರಕ್ಷಾ ಬಂಧನ ಉಡುಗೊರೆಯಾಗಿ ಮಹಿಳೆಯರಿಗೆ ಶೌಚಾಲಯದ ಗಿಫ್ಟ್!

ಭಾರತೀಯ ಸಂಪ್ರದಾಯ ಬಿಂಬಿಸುವ ರಕ್ಷಾ ಬಂಧನ ಹಬ್ಬದ ಆಚರಣೆಯನ್ನು ಬೆಳಗಾವಿಯಲ್ಲಿ ಅರ್ಥಪೂರ್ಣವಾಗಿ ಮತ್ತು ವಿನೂತನವಾಗಿ ಆಚರಿಸಲಾಗಿದೆ.

Published On :

ಬೆಳಗಾವಿ: ಭಾರತೀಯ ಸಂಪ್ರದಾಯ ಬಿಂಬಿಸುವ ರಕ್ಷಾ ಬಂಧನ ಹಬ್ಬದ ಆಚರಣೆಯನ್ನು ಬೆಳಗಾವಿಯಲ್ಲಿ ಅರ್ಥಪೂರ್ಣವಾಗಿ ಮತ್ತು ವಿನೂತನವಾಗಿ ಆಚರಿಸಲಾಗಿದೆ.

ಶೌಚಾಲಯ ನಿರ್ಮಾಣಕ್ಕಾಗಿ ಜಾಗೃತಿ ಮೂಡಿಸಲೆಂದು ಜಿಲ್ಲಾ ಪಂಚಾಯ್ತಿ ಸಿಇಒ ರಾಮಚಂದ್ರನ್. ಆರ್ ಅವರ ಸಲಹೆಯ ಮೇರೆಗೆ ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ಸೋಮವಾರ ಸಡಗರದಿಂದ ರಕ್ಷಾ ಬಂಧನವನ್ನು  ಆಚರಿಸಲಾಯಿತು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ನೂತನವಾಗಿ ಶೌಚಾಲಯ ನಿರ್ಮಾಣಕ್ಕಾಗಿ ಶ್ರಮಿಸಿದ ಸಹೋದರರಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬವನ್ನು ವಿನೂತನವಾಗಿ ಆಚರಿಸಿದರು.

ಸೋಮವಾರ ಶಿಂದಿಕುರಬೇಟ ಗ್ರಾಮದಲ್ಲಿ ಶೌಚಾಲಯ ನಿರ್ಮಿಸಿದ ಸಹೋದರರಿಗಾಗಿ ವಿಶೇಷ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಶೌಚಾಲಯ ನಿರ್ಮಿಸಿದ ಕಾರ್ಮಿಕರ ಕೈಗೆ ಅಂಗನವಾಡಿ ಮತ್ತು ಆಶಾ  ಕಾರ್ಯಕರ್ತೆಯರು ರಾಖಿ ಕಟ್ಟಿದರು. ಪ್ರತಿಯಾಗಿ ರಾಖಿ ಕಟ್ಟಿಸಿಕೊಂಡವರು ಶೌಚಾಲಯದ ಕೀಗಳನ್ನು ಸಹೋದರಿಯರಿಗೆ ನೀಡಿದರು.

ಇನ್ನು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯ್ತಿ ಸಿಇಒ ಆರ್‌. ರಾಮಚಂದ್ರನ್‌ ಅವರು ರಾಖಿ ಕಟ್ಟಿದ ಸಹೋದರಿಯರಿಗೆ ಉಡುಗೊರೆ ನೀಡುವುದು ಸಾಮಾನ್ಯ. ಆದರೆ ಆ ಉಡುಗೊರೆ ಶಾಶ್ವತವಾಗಿರಬೇಕು ಎಂದು  ಹೇಳಿದರು. ಪ್ರಸ್ತುತ ನಾವು ಈಗ ನೀಡಿರುವ ಶೌಚಾಲಯಗಳ ಉಡುಗೊರೆ ನಮ್ಮ ಸಹೋದರಿಯರ ಗೌರವ ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟರು. ರಕ್ಷಾ ಬಂಧನವನ್ನು ಗ್ರಾಮೀಣಭಾಗಗಳಲ್ಲಿ ಶೌಚಾಲಯಗಳ ನಿರ್ಮಾಣದ  ಮಹತ್ವದ ಅರಿವು ಮೂಡಿಸಲು ವೇದಿಕೆಯಾಗಿ ಬಳಿಸಿಕೊಳ್ಳಲಾಗಿತ್ತು. ಈ ಕಾರ್ಯದಲ್ಲಿ ನಾವು ಯಶಸ್ವಿ ಕೂಡ ಆಗಿದ್ದೇವೆ. ಇತರೆ ಗ್ರಾಮಗಳಲ್ಲೂ ಈ ಬಗ್ಗೆ ಅರಿವು ಮೂಡುತ್ತಿದೆ ಎಂದು ಅವರು ಹೇಳಿದಕು.

ಕಾರ್ಯಕ್ರಮದಲ್ಲಿ ಹಾಜರಿದ್ದ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸಾಯೀಶ್ವರಿ ಮೆಣಸಿನಕಾಯಿ ಮಾತನಾಡಿ, ಪ್ರೀತಿಯ ದ್ಯೋತಕವಾಗಿ ರಕ್ಷಣೆ ಕೋರಿ ರಾಖಿ ಕಟ್ಟುವ ಸಹೋದರರು ಉಡುಗೊರೆ ಕೊಡುವುದು ಸಾಮಾನ್ಯ.  ಅದರಂತೆ ಶಾಶ್ವತವಾದ ಉಡುಗೊರೆ ನೀಡಿ ಸ್ವಾಭಿಮಾನ ಮೆರೆಯಬೇಕೆಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.