ಕೊಳವೆ ಬಾವಿ ದುರಂತ: ಜಮೀನು ಮಾಲೀಕನ ಬಂಧನ
ತೆರೆದ ಕೊಳವೆ ಬಾವಿಗೆ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಝುಂಜರವಾಡದ ಹೊಲದ ಮಾಲೀಕನನ್ನು..

Published On :
ಬೆಳಗಾವಿ/ಅಥಣಿ: ತೆರೆದ ಕೊಳವೆ ಬಾವಿಗೆ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಝುಂಜರವಾಡದ ಹೊಲದ ಮಾಲೀಕನನ್ನು ಬಂಧಿಸಲಾಗಿದೆ.
ಸುಟ್ಟಟ್ಟಿ ಗ್ರಾಮದ ನಿವಾಸಿ ಮುತ್ತಣ್ಣ ಶಂಕರ ಹಿಪ್ಪರಗಿ ಬಂಧಿತ ವ್ಯಕ್ತಿ. ಅಥಣಿಯ ಜೆಎಂಎಫ್‌ಸಿ ನ್ಯಾಯಾಲಯವು ಆರೋಪಿಯನ್ನು ಮೇ 12ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಝುಂಜರವಾಡದಲ್ಲಿ ತಮಗೆ ಸೇರಿದ್ದ ಹೊಲದಲ್ಲಿ ಮುತ್ತಣ್ಣ ಕೊಳವೆ ಬಾವಿ ಕೊರೆಸಿದ್ದರು. ನೀರು ಬಾರದೇ ವಿಫಲವಾದ ನಂತರ ಬಾವಿಯನ್ನು ತೆರೆದ ಸ್ಥಿತಿಯಲ್ಲಿಯೇ ಬಿಟ್ಟಿದ್ದರು. ಇದರೊಳಗಿದ್ದ ಕೇಸಿಂಗ್ ಪೈಪ್ ತೆಗೆದು, ಬೇರೊಂದು ಬಾವಿಗೆ ಅಳವಡಿಸಿದ್ದರು. ಕಳೆದ ವಾರ, ಬಾಲಕಿ ಕಾವೇರಿ ಮಾದರ ತೆರೆದ ಕೊಳವೆ ಬಾವಿಯೊಳಗೆ ಬಿದ್ದು, ಮೃತಪಟ್ಟಿದ್ದಳು.
ಘಟನೆಗೆ ಸಂಬಂಧಿಸಿದಂತೆ ಐಗಳಿ ಪೊಲೀಸರು ಜಮೀನಿನ ಮಾಲೀಕ ಮುತ್ತಣ್ಣ ಶಂಕರ ಹಿಪ್ಪರಗಿ ಹಾಗೂ ಅವರ ತಂದೆ ಶಂಕರ ಹಿಪ್ಪರಗಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ಮತ್ತೊಬ್ಬ ಆರೋಪಿ ಶಂಕರ ಹಿಪ್ಪರಗಿ ಪರಾರಿಯಾಗಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


