ರಾಜ್ಯ

ಎನ್ಐಒಎಸ್ ಸರ್ಟಿಫಿಕೇಟ್ ನೊಂದಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ದಾಖಲೆ ತಪಾಸಣೆ: ಬೆಂಗಳೂರು ವಿ.ವಿ

ರಾಷ್ಟ್ರೀಯ ಮುಕ್ತ ಶಾಲೆಗಳಿಗೆ ಇರುವ ಸಂಸ್ಥೆಯ ಸರ್ಟಿಫಿಕೇಟ್(ಎನ್ಐಒಎಸ್) ನೀಡಿ ಹಲವು ಪದವಿ ಕೋರ್ಸ್...

ಎನ್ಐಒಎಸ್ ಸರ್ಟಿಫಿಕೇಟ್ ನೊಂದಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ದಾಖಲೆ ತಪಾಸಣೆ: ಬೆಂಗಳೂರು ವಿ.ವಿ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ರಾಷ್ಟ್ರೀಯ ಮುಕ್ತ ಶಾಲೆಗಳಿಗೆ ಇರುವ ಸಂಸ್ಥೆಯ ಸರ್ಟಿಫಿಕೇಟ್(ಎನ್ಐಒಎಸ್) ನೀಡಿ ಹಲವು ಪದವಿ ಕೋರ್ಸ್ ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ದಾಖಲೆಗಳನ್ನು ತಪಾಸಣೆ ಮಾಡುವಂತೆ ಬೆಂಗಳೂರು ವಿಶ್ವವಿದ್ಯಾಲಯ ಅಧೀನ ಕಾಲೇಜುಗಳಿಗೆ ಆದೇಶ ನೀಡಿದೆ.
ಎನಐಒಎಸ್ ನಕಲಿ ಸರ್ಟಿಫಿಕೇಟ್ ಅಡಿಯಲ್ಲಿ ಅನರ್ಹ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡ ಆಕಾಶ್ ಇಂಟರ್ ನ್ಯಾಷನಲ್ ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ಕಾಲೇಜು ಸಿಕ್ಕಿಹಾಕಿಕೊಂಡ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಈ ಆದೇಶ ನೀಡಿದೆ. 
ವಿಶ್ವವಿದ್ಯಾಲಯದ ಆಡಳಿತ ವಿಭಾಗದ ರಿಜಿಸ್ಟ್ರಾರ್ ಪ್ರೊ. ಕೆ.ಎನ್. ನಿಂಗೇ ಗೌಡ ಮಾತನಾಡಿ, ನಕಲಿ ದಾಖಲೆಗಳನ್ನು ನೀಡಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಮತ್ತು ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಎನ್ಐಒಎಸ್ ಸರ್ಟಿಫಿಕೇಟ್ ಗಳೊಂದಿಗೆ ಬಿ.ಕಾಂ ಮತ್ತು ಬಿಸಿಎಗೆ ಪ್ರವೇಶ ಪಡೆದ ಹಲವರಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.