ರಾಜ್ಯ

ತೆರೆದ ಕೊಳವೆ ಬಾವಿಗೆ ಮತ್ತೊಂದು ಮಗು ಬಲಿ : ಇದಕ್ಕೆ ಯಾರು ಹೊಣೆ?

ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಆರು ವರ್ಷದ ಬಾಲಕಿ ಕಾವೇರಿ ಕೊನೆಗೂ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಬರಲಾಗಲಿಲ್ಲ, ಯಾರದೋ ತಪ್ಪಿಗೆ ಮುಗ್ದ ಜೀವ ಬಲಿಯಾಗಿದೆ...

ತೆರೆದ ಕೊಳವೆ ಬಾವಿಗೆ ಮತ್ತೊಂದು ಮಗು ಬಲಿ : ಇದಕ್ಕೆ ಯಾರು ಹೊಣೆ?
ಕಾವೇರಿಯನ್ನು ಹೊರತೆಗೆಯಲು ರಕ್ಷಣಾ ತಂಡದ ಪ್ರಯತ್ನ
Published On :
ಬೆಳಗಾವಿ: ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಆರು ವರ್ಷದ ಬಾಲಕಿ ಕಾವೇರಿ ಕೊನೆಗೂ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಬರಲಾಗಲಿಲ್ಲ, ಯಾರದೋ ತಪ್ಪಿಗೆ ಮುಗ್ದ ಜೀವ ಬಲಿಯಾಗಿದೆ. 
ಈ ಪ್ರಕರಣ ಸರ್ಕಾರಿ ಆಡಳಿತ ಸಂಸ್ಥೆಗಳ ನಿರ್ಲಕ್ಷ್ಯ ಹಾಗೂ ಬೇಜಾವಬ್ದಾರಿಯುತ ವರ್ತನೆಗೆ ಸಾಕ್ಷಿಯಾಗಿದೆ, ದುರಂತಗಳು ನಡೆದಾಗ ಮಾತ್ರವೇ ಎಚ್ಚೆತ್ತುಕೊಳ್ಳುವ ಸರ್ಕಾರಿ ಸಂಸ್ಥೆಗಳು ಕೆಲ ದಿನಗಳಲ್ಲಿ ತಮ್ಮ ಕರ್ತವ್ಯಗಳನ್ನು ಮರೆಯುತ್ತವೆ.
ಎಲ್ಲಾ ಜಿಲ್ಲೆಗಳಲ್ಲಿರುವ ತೆರೆದ ಕೊಳವೆ ಬಾವಿಗಳ ಬಗ್ಗೆ ಸಮೀಕ್ಷೆ ಮಾಡಿ ವರದಿ ಸಲ್ಲಿಸುವಂತೆ ಸರ್ಕಾರ ಜಿಲ್ಲಾಡಳಿತಕ್ಕೆ ಸುತ್ತೋಲೆ ಹೊರಡಿಸಿತ್ತು.
ನಿಷ್ಕ್ರಿಯ ಕೊಳವೆ ಬಾವಿಗಳನ್ನು ಮುಚ್ಚಿಸಿ, ಅದರೆ ಮೇಲೆ ಮುಚ್ಚಳ ಹಾಕಿಸುವ ಜವಾಬ್ದಾರಿ ಆ ಜಮೀನು ಮಾಲಿಕನಿಗೆ ಸೇರಿದ ಕರ್ತವ್ಯವಾಗಬೇಕು ಎಂದು ಜಲ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಬೋರ್ ವೆಲ್ ಕೊರೆಸಲು ಅನುಮತಿ ನೀಡುವ ಹೊಣೆ ಜಿಲ್ಲಾಡಳಿತದ್ದಾಗಿದೆ, ಜೊತೆಗೆ ಕೊಳವೆ ಬಾವಿ ಮುಚ್ಚಿಸಿದ ಕುರಿತು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ವರದಿ ನೀಡಬೇಕಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಎಷ್ಟು ಬೋರ್ ವೆಲ್ ಕೊರೆಸಲಾಗಿದೆ, ಎಂಬ ಬಗ್ಗೆ ಯಾವುದೇ ಅಂಕಿ ಅಂಶಗಳು ಲಭ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು ಎಂದು ಶಾಸಕ ಸತೀಶ್ ಜಾರಕಿಹೊಳಿ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ  ಆದೇಶ ನೀಡಿದ್ದಾರೆ. ಈ ಸಂಬಂದ ಸಿಎಂ ಸಿದ್ದರಾಮಯ್ಯ ಅಲರ ಜೊತೆ ಚರ್ಚಿಸುವುದಾಗಿ ಹೇಳಿದ್ದಾರೆ.
ಜಿಲ್ಲೆಯಲ್ಲಿರುವ ಎಲ್ಲಾ ಬೋರ್ ವೆಲ್ ಗಳ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಆದೇಶಿಸಿದ್ದಾರೆ.ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ನೀರು ಬರದ ಕೊಳವೆ ಬಾವಿಗಳಲ್ಲಿರುವ ಕೇಸಿಂಗ್ ಪೈಪ್ ಗಳನ್ನು ರೈತರು ಹೊರತೆಗೆಯುವುದು ಸಾಮಾನ್ಯ. ಕೇಸಿಂಗ್ ಪೈಪ್ ಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿರುವುದರಿಂದ ಅವುಗಳನ್ನು ಮಾರಾಟ ಮಾಡಿಕೊಳ್ಳುತ್ತಾರೆ.
ಈ ಕೇಸಿಂಗ್ ಪೈಪ್ ಗಳನ್ನು ತೆಗೆಯಲು ರೈತರಿಂದ ಸಾಧ್ಯವಿಲ್ಲ, ಇದಕ್ಕೆ ವೃತ್ತಿಪರ ಕೆಲಸಗಾರರು ತಂಡ ಬೇಕಿದೆ,. ಬೋರ್ ವೆಲ್ ಕೊರೆಯುವವರು ಕೊಳವೆ ಬಾವಿಗಳಿಂದ ಕೇಸಿಂಗ್ ಪೈಪೇ ತೆಗಯುವವರು ಅದನ್ನು ಮುಚ್ಚಿಸುವ ಜವಾಬ್ದಾರಿಯೂ ಅವರದ್ದೇ ಆಗಿರುತ್ತದೆ. 
ಒಂದು ವೇಳೆ ಕೇಸಿಂಗ್ ಪೈಪ್ ಬೋರ್ ವೆಲ್ ಒಳಗೆ ಇದ್ದು ಅದರ ಮೇಲೆ ಒಂದು ಮಚ್ಚಳ ಹಾಕಿಬಿಟ್ಟರೇ ಇಂತಹ ದುರಂತಗಳನ್ನು ತಪ್ಪಿಸಬಹುದಾಗಿದೆ. ಒಂದು ವೇಳೆ ಕೊಳವೆ ಬಾವಿಯಲ್ಲಿ ನೀರು ಸಿಗದಿದ್ದರೇ ಅದನ್ನು ಡ್ರಿಲ್ಲರ್ ಗಳೇ ಮುಚ್ಚಿಸಬೇಕಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.