ತಾಯಿಯಿಂದಲೇ 16 ತಿಂಗಳ ಮಗುವಿನ ಹತ್ಯೆ: ಅತಿಮಾನುಷ ಶಕ್ತಿ ಆವಾಹನೆ ಕಾರಣವಂತೆ!
ತಾಯಿಯೇ ತನ್ನ 16 ತಿಂಗಳ ಮಗುವನ್ನು ಸೀಮೆ ಎಣ್ಣೆ ಹಾಕಿ ಹತ್ಯೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

Published On :
ಚಿಕ್ಕಬಳ್ಳಾಪುರ: ತಾಯಿಯೇ ತನ್ನ 16 ತಿಂಗಳ ಮಗುವನ್ನು ಸೀಮೆ ಎಣ್ಣೆ ಹಾಕಿ ಹತ್ಯೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಮಗುವನ್ನು ಸೀಮೆ ಎಣ್ಣೆ ಸುರಿದು ಹತ್ಯೆ ಮಾಡಿರುವುದರ ಬಗ್ಗೆ ಸ್ವತಃ ತಾಯಿಯೇ ಹೇಳಿಕೆ ನೀಡಿದ್ದು, ಅತಿಮಾನುಷ ಶಕ್ತಿ ಆವಾಹನೆಯಾಗಿದ್ದರಿಂದ ಹೀಗೆ ಮಾಡಿದೆ ಎಂದಿದ್ದಾರೆ. ಚಿಕ್ಕಬಳ್ಳಾಪುರದ ಕೆಸವಾರ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಬೋರ್ ವೆಲ್ ಮೆಕ್ಯಾನಿಕ್ ನ ಮಡದಿ ನಿರ್ಮಲ(28) ಮಗುವನ್ನು ಹತ್ಯೆ ಮಾಡಿರುವ ತಾಯಿಯಾಗಿದ್ದು, ಮಗುವನ್ನು ಹತ್ಯೆ ಮಾಡಿರುವುದರ ಬಗ್ಗೆ ತನ್ನ ಪತಿಗೆ ತಿಳಿಸಿದ್ದಾರೆ. ನಂತರ, ಘಟನೆ ನಡೆದಿರುವ ಬಗ್ಗೆ ಬೋರ್ ವೆಲ್ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಚಿಕ್ಕಬಳ್ಳಾಪುರ ಎಸ್ ಪಿ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.
ತಮ್ಮ ಪತ್ನಿಗೆ ಈ ಹಿಂದೆಯೂ ಅತಿಮಾನುಷ ಶಕ್ತಿ ಆವಾಹನೆಯಾದ ಉದಾಹರಣೆಗಳಿವೆ ಎಂದು ಪತಿ ತಿಳಿಸಿದ್ದು, ಬನಶಂಕರಿ ದೇವತೆಯ ಆರಾಧಕರಾಗಿರುವ ಇಬ್ಬರೂ 6 ವರ್ಷಗಳ ಹಿಂದೆ ವಿವಾಹವಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


