ರಾಜ್ಯ

3 ತಿಂಗಳುಗಳಿಂದ ಖಾಲಿಯಿದೆ ಬೆಂಗಳೂರು, ಮೈಸೂರು ವಿವಿ ಉಪಕುಲಪತಿ ಹುದ್ದೆ

ಬೆಂಗಳೂರು ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳ ಉಪ ಕುಲಪತಿಗಳ ಅವಧಿ ಮುಗಿದು ನಿವೃತ್ತಿಯಾಗಿ 3 ತಿಂಗಳು ಸಮಯ ಕಳೆದಿದ್ದರೂ ಇನ್ನೂ ವಿಸಿ ...

3 ತಿಂಗಳುಗಳಿಂದ ಖಾಲಿಯಿದೆ  ಬೆಂಗಳೂರು, ಮೈಸೂರು ವಿವಿ ಉಪಕುಲಪತಿ ಹುದ್ದೆ
ಬೆಂಗಳೂರು ಮತ್ತು ಮೈಸೂರು ವಿವಿ
Published On :
ಬೆಂಗಳೂರು: ಬೆಂಗಳೂರು ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳ ಉಪ ಕುಲಪತಿಗಳ ಅವಧಿ ಮುಗಿದು ನಿವೃತ್ತಿಯಾಗಿ 3 ತಿಂಗಳು ಸಮಯ ಕಳೆದಿದ್ದರೂ ಇನ್ನೂ ವಿಸಿ ನೇಮಕವಾಗಿಲ್ಲ.
ಬೆಂಗಳೂರು ವಿವಿ ಉಪಕುಲಪತಿ ನೇಮಕ ಹಲವು ಕಾರಣಗಳಿಗೆ ವಿಳಂಬವಾಗುತ್ತಿದೆ, ಬುಧವಾರ ಆಯ್ಕೆ ಸಮಿತಿ ಸಭೆ ನಡೆಯಬೇಕಾಗಿತ್ತು, ಆದರೆ ಸಭೆಗೆ ಸಮಿತಿ ಸದಸ್ಯರ ಗೈರಿನ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಸಮಿತಿ ಸಭೆಯನ್ನು ಮುಂದೂಡಲಾಗಿದೆ.
ಹರ್ಯಾಣದ ಸೆಂಟ್ರಲ್ ವಿವಿ ವಿವಿ ಪ್ರೊ. ಆರ್ ಸಿ ಖುಹಾದ್ ವಯಕ್ತಿಕ ಕಾರಣಗಳಿಂದಾಗಿ ಇಂದು ನಡೆಯಬೇಕಿದ್ದ ಸಭೆಗೆ ಗೈರಾಗಿರುವ ಕಾರಣ ಮೇ10 ಮತ್ತು 11 ಕ್ಕೆ ನಿಗದಿ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ಇನ್ನೂ ಮೈಸೂರು ವಿವಿ ಉಪಕುಲಪತಿ ಹುದ್ದೆ ಕೂಡ ಜನವರಿಯಿಂದ ಖಾಲಿಯಿದೆ. ಬೆಂಗಳೂರು ವಿವಿಉಪಕುಲಪತಿ ಹುದ್ದೆಗೆ ಫೆಬ್ರವರಿಯಿಂದ ನೇಮಕ ಮಾಡಿಲ್ಲ, ಎರಡು ವಿವಿಗಳ ಮೇಲ್ವಿಚಾರಣೆಯನ್ನು ಉಸ್ತುವಾರಿ ಉಪಕುಲಪತಿಗಳು ನೋಡಿಕೊಳ್ಳುತ್ತಿದ್ದಾರೆ, ಆದರೆ ಹಲವರ ಪ್ರಕಾರ ಉಪ ಕುಲಪತಿ ನೇಮಕ ಮಾಡದ ಕಾರಣ ಅಭಿವೃದ್ಧಿಗೆ ಪೂರಕವಾಗಿರುವ ಮಹತ್ವಹ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.