ರಾಜ್ಯ

ಕಾರವಾರ: ರೂ.100 ಲಂಚ ನೀಡದ ರೈತನಿಗೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸರು

ರೂ.100 ನೀಡಲಿಲ್ಲ ಎಂಬ ಕಾರಣಕ್ಕೆ ಮನೆಗೆ ನುಗ್ಗಿದ ಇಬ್ಬರು ಸಂಚಾರಿ ಪೊಲೀಸರು ರೈತನೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕಾರವಾರದ ಕುಮ್ಟಾ ತಾಲೂಕಿನಲ್ಲಿ ನಡೆದಿದೆ...

ಕಾರವಾರ: ರೂ.100 ಲಂಚ ನೀಡದ ರೈತನಿಗೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸರು
ಸಂಗ್ರಹ ಚಿತ್ರ
Published On :
ಕಾರವಾರ: ರೂ.100 ನೀಡಲಿಲ್ಲ ಎಂಬ ಕಾರಣಕ್ಕೆ ಮನೆಗೆ ನುಗ್ಗಿದ ಇಬ್ಬರು ಸಂಚಾರಿ ಪೊಲೀಸರು ರೈತನೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕಾರವಾರದ ಕುಮ್ಟಾ ತಾಲೂಕಿನಲ್ಲಿ ನಡೆದಿದೆ. 
ಹಿರೇಗುಟ್ಟಿಯ ಶಾಂತರಾಮ್ ಪ್ರಭು ಥಳಿತಕ್ಕೊಳಗಾದ ರೈತರಾಗಿದ್ದಾರೆ. ಕಳೆದ ಭಾನುವಾರ ಶಾಂತರಾಮ್ ಅವರು ಖಂದಗರ್ ಹುಲಸೆ ಗ್ರಾಮಕ್ಕೆ ಹೋಗಿದ್ದರು. ರಾತ್ರಿ ಮನೆಗೆ ಬರುವಾಗ ಚೆಕ್ ಪೋಸ್ಟ್ ಬಳಿ ಮೋಹನ್ ಗೌಡ ಹಾಗೂ ನಿತ್ಯ ಎಂಬ ಇಬ್ಬರು ಪೊಲೀಸ್ ಸಿಬ್ಬಂದಿಗಳು ತಡೆದಿದ್ದಾರೆ. ಈ ವೇಳೆ ವಾಹನದ ದಾಖಲೆಗಳನ್ನು ನೀಡುವಂತೆ ತಿಳಿಸಿದ್ದಾರೆ. 
ದಾಖಲೆಗಳನ್ನು ತೋರಿಸಿದ ಬಳಿಕವೂ ಪೊಲೀಸರು ರೂ.100 ಲಂಚ ನೀಡುವಂತೆ ತಿಳಿಸಿದ್ದಾರೆ. ಈ ವೇಳೆ ಲಂಚ ನೀಡಲು ಶಾಂತಕುಮಾರ್ ಅವರು ನಿರಾಕರಿಸಿದ್ದಾರೆ. ಅಲ್ಲದೆ. ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ದೂರು ನೀಡುವುದಾಗಿ ತಿಳಿಸಿದ್ದಾರೆ. ಈ ವೇಳೆ ಪೊಲೀಸ್ ಸಿಬ್ಬಂದಿಗಳು ಶಾಂತಕುಮಾರ್ ನನ್ನು ಕಳುಹಿಸಿದ್ದಾರೆ. 
ಇದಾದ ಗಂಟೆಗಳ ಬಳಿಕ ಅರಣ್ಯ ಸಿಬ್ಬಂದಿ ನಾಗರಾಜ್ ನಾಯಕ್ ಮತ್ತು 108 ಅ್ಯಂಬುಲೆನ್ಸ್ ಚಾಲಕ ನಾಗರಾಜ್ ಗಣಪತಿ ನಾಯಕ್ ಜೊತೆಗೆ ಮೋಹನ್ ಗೌಡ ಹಾಗೂ ನಿತ್ಯ ರೈತ ಶಾಂತಕುಮಾರ್ ಅವರ ಮನೆಗೆ ನುಗ್ಗಿದ್ದಾರೆ. ಪತ್ನಿ ಹಾಗೂ ಶಾಂತಕುಮಾರ್ ಅವರ ವಯಸ್ಸಾದ ತಂದೆಯ ಎದುರೇ ರೈತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮಗನನ್ನು ರಕ್ಷಿಸಲು ಬಂದ ಶಾಂತಕುಮಾರ್ ಅವರ ತಂದೆಗೂ ಪೊಲೀಸರು ಥಳಿಸಿದ್ದಾರೆ. 
ದೂರು ದಾಖಲಿಸಿದರೆ ಇಲ್ಲಸಲ್ಲದ ಪ್ರಕರಣಗಳನ್ನು ಹೂಡಿ ಬಂಧಿಸುತ್ತೇವೆಂದು ನಮಗೆ ಬೆದರಿಕೆ ಹಾಕಿದರು. ಘಟನೆ ಬಳಿಕ ಗೋಕರ್ಣ ಪೊಲೀಸ್ ಠಾಣೆಗೆ ಹೋಗಿದ್ದೆವು. ಈ ವೇಳೆ ಠಾಣೆಯಲ್ಲಿದ್ದ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದರು. 
ಮಂಗಳವಾರ ಉತ್ತರಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ಪಾಟೀಲ್ ಅವರಿಗೆ ನಡೆದ ಘಟನೆಯನ್ನು ವಿವರಿಸಲಾಗಿತ್ತು. ನಂತರ ವಿನಾಯಕ್ ಅವರು ಗೋಕರ್ಣ ಪೊಲೀಸರಿಗೆ ಪತ್ರ ಬರೆದು ದೂರು ಸ್ವೀಕರಿಸುವಂತೆ ಸೂಚನೆ ನೀಡಿದರು. ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಗೋಕರ್ಣ ಪೊಲೀಸ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆಂದು ಶಾಂತಕುಮಾರ್ ಪ್ರಭು ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.