ರಾಜ್ಯ

ನಕಲಿ ರೋಗಿಗಳ ದಾಖಲು: ರಾಜ್ಯದ ಮೂರು ಕಾಲೇಜುಗಳ ಸದಸ್ಯತ್ವ ನವೀಕರಣಕ್ಕೆ ನಕಾರ

ರೋಗಿಗಳನ್ನು ದಾಖಲು ಮಾಡಿಕೊಳ್ಳಲು ರಾಜ್ಯದ ಕೆಲವು ವೈದ್ಯಕೀಯ ಕಾಲೇಜುಗಳು ಲಜ್ಜೆಗೆಟ್ಟ ...

ನಕಲಿ ರೋಗಿಗಳ ದಾಖಲು: ರಾಜ್ಯದ ಮೂರು ಕಾಲೇಜುಗಳ ಸದಸ್ಯತ್ವ ನವೀಕರಣಕ್ಕೆ ನಕಾರ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ರೋಗಿಗಳನ್ನು ದಾಖಲು ಮಾಡಿಕೊಳ್ಳಲು ರಾಜ್ಯದ ಕೆಲವು ವೈದ್ಯಕೀಯ ಕಾಲೇಜುಗಳು ಲಜ್ಜೆಗೆಟ್ಟ ವಿಧಾನಗಳನ್ನು ಅನುಸರಿಸುತ್ತಿರುವುದು ಕಂಡುಬಂದಿದೆ.  ತೆರೆದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರ ದೇಹದಲ್ಲಿ ಯಾವುದೇ ಗುರುತು ಕಂಡುಬರುತ್ತಿಲ್ಲ, ಆರೋಗ್ಯ ಸರಿಯಿಲ್ಲವೆಂದು ಕುಂಟು ನೆಪ ಹೇಳಿ ಬಂದು ದಾಖಲಾಗುತ್ತಾರೆ. ಅನಾಥಾಶ್ರಮದಿಂದ ಮಕ್ಕಳನ್ನು ಕರೆದುಕೊಂಡು ಬಂದ ಮಕ್ಕಳ ವಾರ್ಡ್ ನಲ್ಲಿ ದಾಖಲು ಮಾಡಿಕೊಳ್ಳಲಾಗುತ್ತದೆ ಎಂದು ಭಾರತೀಯ ವೈದ್ಯಕೀಯ ಮಂಡಳಿಯ ತಪಾಸಣೆಯಿಂದ ತಿಳಿದುಬಂದಿದೆ.
ಇದರ ಪರಿಣಾಮ ಕರ್ನಾಟಕದ ಮೂರು ಖಾಸಗಿ ವೈದ್ಯಕೀಯ ಕಾಲೇಜುಗಳ ಸದಸ್ಯತ್ವ ನವೀಕರಿಸದಿರುವುದು. ತುಮಕೂರಿನ ಶ್ರೀದೇವಿ ವೈದ್ಯಕೀಯ ಕಾಲೇಜು, ದೇವನಹಳ್ಳಿಯ ಆಕಾಶ್ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮತ್ತು ಕೋಲಾರದ ಸಂಭ್ರಮ್ ಮೆಡಿಕಲ್ ಕಾಲೇಜು. ಮೂಲ ಸೌಕರ್ಯ ಮತ್ತು ಇತರ ಕೊರತೆಯಿಂದಾಗಿ ಎರಡು ಸರ್ಕಾರಿ ಕಾಲೇಜುಗಳು ಸೇರಿದಂತೆ ಮೂರು ಕಾಲೇಜುಗಳ ಸದಸ್ಯತ್ವ ನವೀಕರಣವಾಗಿಲ್ಲ. ಅವುಗಳು ಚಾಮರಾಜನಗರ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಕಾರವಾರ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮತ್ತು ವಿಜಯಪುರದ ಅಲ್ ಅಮೀನ್ ಕಾಲೇಜುಗಳಾಗಿವೆ.
ಕಾಲೇಜಿನ ರೋಗಿಗಳ ವಾರ್ಡ್ ಗಳಲ್ಲಿ ಆರೋಗ್ಯವಂತ ವ್ಯಕ್ತಿಗಳು ರೋಗಿಗಳಾಗಿ ಬಂದು ದಾಖಲಾಗಿರುವುದು ತಪಾಸಣೆ ವೇಳೆ ತಿಳಿದುಬಂದಿದೆ ಎಂದು ಸಮಿತಿ ತಿಳಿಸಿದೆ.
ಕಾರ್ಯಕಾರಿ ಸಮಿತಿಯ ವರದಿ ಪ್ರಕಾರ ಮುಂದಿನ ಎರಡು ವರ್ಷಗಳವರೆಗೆ ಈ ಕಾಲೇಜುಗಳ  ಸದಸ್ಯತ್ವವನ್ನು ನವೀಕರಣ ಮಾಡಲಾಗುವುದಿಲ್ಲ. ಭಾರತೀಯ ವೈದ್ಯಕೀಯ ಮಂಡಳಿಯ ವೆಬ್ ಸೈಟ್ ನಲ್ಲಿ ಈ ಮಾಹಿತಿಯನ್ನು ಅಪ್ ಲೋಡ್ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.