'ಇದೊಳ್ಳೆ ರಾಮಾಯಣ', ನಾನು ಕಾವೇರಿ ವಿಷಯ ಮಾತಾಡೋಕೆ ಬಂದಿಲ್ಲ: ಸುದ್ದಿ ವಾಹಿನಿಗೆ ಪ್ರಕಾಶ್ ರೈ
ಇದೊಳ್ಳೆ ರಾಮಾಯಣ ಚಿತ್ರದ ಪ್ರಚಾರದ ವೇಳೆ ಕಾವೇರಿ ವಿವಾದದ ಕುರಿತು ಮಾಧ್ಯಮ ನಿರೂಪಕಿಯೊಬ್ಬರು ಕೇಳಿದ ಪ್ರಶ್ನೆಗೆ ನಟ, ಬಹುಭಾಷಾ ನಟ ಪ್ರಕಾಶ್ ರೈ ಅಸಮಾಧಾನಗೊಂಡಿದ್ದಾರೆ.

Published On :
ಬೆಂಗಳೂರು:ಇದೊಳ್ಳೆ ರಾಮಾಯಣ ಚಿತ್ರದ ಪ್ರಚಾರದ ವೇಳೆ ಕಾವೇರಿ ವಿವಾದದ ಕುರಿತು ಮಾಧ್ಯಮ ನಿರೂಪಕಿಯೊಬ್ಬರು ಕೇಳಿದ ಪ್ರಶ್ನೆಗೆ ನಟ, ಬಹುಭಾಷಾ ನಟ ಪ್ರಕಾಶ್ ರೈ ಅಸಮಾಧಾನಗೊಂಡಿದ್ದಾರೆ.
ಚಿತ್ರದ ಬಗ್ಗೆ ಕುರಿತು ಪ್ರಕಾಶ್ ರೈ ಅವರನ್ನು ಸಂದರ್ಶಿಸುತ್ತಿದ್ದ ಖಾಸಗಿ ಸುದ್ದಿ ವಾಹಿನಿಯನಿರೂಪಕಿ, ತಮಿಳುನಾಡು- ಕರ್ನಾಟಕದ ನಡುವಿನ ಕಾವೇರಿ ವಿವಾದದ ಬಗ್ಗೆ ಪ್ರಶ್ನಿಸಿದ್ದಾರೆ, ಆದರೆ ಕಾವೇರಿ ವಿವಾದದ ಬಗ್ಗೆ ಮಾತನಾಡಲು ನಿರಾಕರಿಸಿದ ಪ್ರಕಾಶ್ ರೈ, ನಾನು ಇಲ್ಲಿ ಬಂದಿರುವುದು ಇದೊಳ್ಳೆ ರಾಮಾಯಣ ಚಿತ್ರದ ಪ್ರಚಾರಕ್ಕಾಗಿ, ಕಾವೇರಿ ವಿಚಾರವನ್ನು ಮಾತನಾಡಲು ಅಲ್ಲ ಎಂದಿದ್ದಾರೆ. ಅಲ್ಲದೆ ಕಾವೇರಿ ವಿವಾದ ಸಂಕೀರ್ಣವಾದ ವಿವಾದವಾಗಿದ್ದು ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಮಾತನಾಡಲು ಸಾಧ್ಯವಿಲ್ಲ, ಜನರು ಈಗಾಗಲೇ ಕೋಪದಲ್ಲಿದ್ದಾರೆ, ನೋವಿನಲ್ಲಿದ್ದಾರೆ ಇಂತಹ ಸಂದರ್ಭದಲ್ಲಿ ಸಿನಿಮಾ ನಟರಿಂದ ಕಾವೇರಿ ವಿವಾದದ ಬಗ್ಗೆ ಹೇಳಿಕೆ ಪಡೆಯುವುದರಿಂದ ಉಂಟಾಗುವ ಲಾಭವೇನು ಎಂದು ಪ್ರಶ್ನಿಸಿದ್ದಾರೆ. ಮುಂದುವರೆದು ಪ್ರಶ್ನೆ ಮಾಡಿದ ಮಾಧ್ಯಮದ ನಿರೂಪಕಿ ಬಗ್ಗೆ ಪ್ರಕಾಶ್ ರೈ ಅಸಮಾಧಾನಗೊಂಡಿದ್ದು, ನಿಮಗೆ ವಿವಾದಾತ್ಮಕ ಸುದ್ದಿಗಳೇ ಬೇಕಾ? ಎಂದು ಸಂದರ್ಶನದ ಮಧ್ಯಭಾಗದಲ್ಲೇ ಎದ್ದು ಹೊರನಡೆಡ್ಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


