ಮೈಸೂರು ದಸರಾ: ರಾಜಮನೆತನದವರಿಗೆ ಸಾಂಪ್ರಾದಾಯಿಕ ಆಹ್ವಾನ ನೀಡಿದ ಜಿಲ್ಲಾಡಳಿತ
ವಿಶ್ವವಿಖ್ಯಾತ ಮೈಸೂರು ದಸರಾಗೆ ಫಲ ತಾಂಬೂಲ ನೀಡುವ ಮೂಲಕ ರಾಜಮನೆತನದವರಿಗೆ ಸಾಂಪ್ರದಾಯಕವಾಗಿ ಜಿಲ್ಲಾಡಳಿತ ಆಹ್ವಾನ ...

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಫಲ ತಾಂಬೂಲ ನೀಡುವ ಮೂಲಕ ರಾಜಮನೆತನದವರಿಗೆ ಸಾಂಪ್ರದಾಯಕವಾಗಿ ಜಿಲ್ಲಾಡಳಿತ ಆಹ್ವಾನ ನೀಡಿತು.
ಪ್ರತಿ ವರ್ಷದಂತೆ ನಾಡಹಬ್ಬ ದಸರಾಗೆ ರಾಜಮನೆತನದವರನ್ನು ತಾಂಬೂಲ ಹಾಗೂ ಗೌರವಧನ ನೀಡಿ ಆಹ್ವಾನ ನೀಡುವುದು ಸಂಪ್ರದಾಯ. ಅದರಂತೆ ಈ ವರ್ಷ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲಾಡಳಿತದ ವತಿಯಿಂದ 36 ಲಕ್ಷ ಚೆಕ್‍ನ ಗೌರವ ರಾಜಧನ ನೀಡುವ ಮೂಲಕ ಜಂಬೂ ಸವಾರಿಗೆ ಸಹಕಾರಿ ನೀಡಿ, ಅಂಬಾರಿಯನ್ನು ನೀಡಬೇಕೆಂದು ಮನವಿ ಮಾಡಲಾಯಿತು.
ಸಹಕಾರ ಸಚಿವ ಹೆಚ್.ಎಸ್ ಮಹದೇವಪ್ರಸಾದ್, ಎಚ್.ಸಿ ಮಹಾದೇವಪ್ಪ, ಜಿಲ್ಲಾಧಿಕಾರಿ ಡಿ.ರಂದೀಪ್ ಸೇರಿದಂತೆ ಇತರರು ಪ್ರಮೋದಾದೇವಿ ಒಡೆಯರ್ ಮತ್ತು ಯದೂವೀರ್ ಅವರನ್ನು ದಸರಾಗೆ ಸಾಂಪ್ರದಾಯಕವಾಗಿ ಆಹ್ವಾನಿಸಿದರು.
ಆಹ್ವಾನ ಸ್ವೀಕರಿಸಿ ಮಾತನಾಡಿದ ನೀಡಿದ ರಾಣಿ ಪ್ರಮೋದಾದೇವಿ ಒಡೆಯರ್, ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಸಹಕಾರ ಇರುತ್ತದೆ ಎಂದು ಉಸ್ತುವಾರಿ ಸಚಿವರಿಗೆ ಭರವಸೆ ನೀಡಿದರು. ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುವಂತೆ ಪ್ರಾರ್ಥಿಸಿದ ಅವರು, ಎರಡು ರಾಜ್ಯಗಳು ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


