ಪತ್ರಕರ್ತರಿಗೂ ತಟ್ಟಿದ ಕಾವೇರಿಗಾಗಿ ಕರ್ನಾಟಕ ಬಂದ್ ಬಿಸಿ
ರಾಜ್ಯಾದ್ಯಂತ ಕಾವೇರಿ ಬಂದ್ ಗೆ ನಿರೀಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುವುದರೊಂದಿಗೆ, ಬಹುತೇಕ ಪ್ರದೇಶಗಳಲ್ಲಿ ರಸ್ತೆಯಲ್ಲಿ ಯಾವುದೇ ವಾಹನಗಳು ಸಂಚರಿಸದಂತೆ ಎಚ್ಚರ ವಹಿಸುತ್ತಿದ್ದಾರೆ.

ಬೆಂಗಳೂರು: ರಾಜ್ಯಾದ್ಯಂತ ಕಾವೇರಿಗಾಗಿ ಬಂದ್ ಗೆ ನಿರೀಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುವುದರೊಂದಿಗೆ, ಬಹುತೇಕ ಪ್ರದೇಶಗಳಲ್ಲಿ ರಸ್ತೆಯಲ್ಲಿ ಯಾವುದೇ ವಾಹನಗಳು ಸಂಚರಿಸದಂತೆ ಎಚ್ಚರ ವಹಿಸುತ್ತಿದ್ದಾರೆ.
ಬೆಂಗಳೂರಿನ ಕೆಆರ್ ಪುರಂ ನಲ್ಲಿ ತಮಿಳುನಾಡು ವಿರುದ್ಧ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿರುವ ಕನ್ನಡ ಪರ ಸಂಘಟನೆಗಳು ಬಂದ್ ಇದ್ದರೂ ಸಂಚರಿಸಲು ಯತ್ನಿಸುತ್ತಿದ್ದ ವಾಹನ ಸವಾರರನ್ನು ತಡೆಗಟ್ಟಿ ಬಂದ್ ಗೆ ಬೆಂಬಲ ವ್ಯಕ್ತಪಡಿಸುವಂತೆ ಮನವಿ ಮಾಡುತ್ತಿದ್ದದ್ದು ಸಾಮಾನ್ಯ ದೃಶ್ಯವಾಗಿತ್ತು. ಆದರೆ ಬಂದ್ ನ ಬಿಸಿ ಎಷ್ಟು ತೀವ್ರವಾಗಿತ್ತು ಎಂದರೆ ಬಂದ್ ಇದ್ದರೂ ಮುಕ್ತವಾಗಿ ಸಂಚರಿಸಲು ಅವಕಾಶ ಇದ್ದದ್ದು ಕ್ಯಾಮರಾಗಳನ್ನು ಹೊತ್ತ ಟಿವಿ ಪತ್ರಕರ್ತರಿಗೆ, ಅದು ಬಿಟ್ಟರೆ ಪೊಲೀಸರಿಗೆ ಮಾತ್ರ ಎಂಬ ವಾತಾವರಣ ನಿರ್ಮಾಣವಾಗಿತ್ತು.
"ನಾವು ಪತ್ರಕರ್ತರು(ವೆಬ್ ಸೈಟ್ ನಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು) ಕಚೇರಿಗೆ ಹೋಗಿ ನಿಮ್ಮ ಪ್ರತಿಭಟನೆಯ ಸುದ್ದಿಯನ್ನೇ ಅಪ್ ಡೇಟ್ ಮಾಡಬೇಕು ದಾರಿ ಬಿಡ್ರಯ್ಯ ಎಂದರೂ, ಊಹ್ಹು ನಮ್ಮ ಮಾತನ್ನು ಕೇಳಲು ಅಲ್ಲಿ ಯಾರೂ ಸಿದ್ದರಿರಲಿಲ್ಲ. " ಅದೇನು ಮಾಡ್ತಿರೋ ಇಲ್ಲೇ ಮಾಡಿ, ನಿಮ್ಮ ಸಹೋದ್ಯೋಗಿಗಳು ಕ್ಯಾಮರಾ ಹಿಡ್ಕೊಂಡು ಬಂದು ಇಲ್ಲಿಂದಲೇ ಸುದ್ದಿ ಮಾಡ್ತಿಲ್ವಾ, ನೀವು ಹಾಗೆಯೇ ಮಾಡಿ" ಎಂಬ ಆಲಾಪ ಪ್ರಾರಂಭವಾಗಿತ್ತು. ಕೊನೆಗೆ ಪ್ರತಿಭಟನಾ ನಿರತರಿಗೆ ವೆಬ್ ಮೀಡಿಯಾದ ಕಾರ್ಯನಿರ್ವಹಣೆಯನ್ನು ವಿವರಿಸಿ ಕಚೇರಿಗೆ ಬರುವಷ್ಟರಲ್ಲಿ ಬಂದ್ ಸಾಕಾಗಿ ಹೋಗಿತ್ತು.
-ಶ್ರೀನಿವಾಸ್ ರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


