ರಾಜ್ಯದ 6 ರಸ್ತೆಗಳು ರಾಷ್ಟ್ರೀಯ ಹೆದ್ದಾರಿಯಾಗಿ ಶೀಘ್ರವೇ ಮೇಲ್ದರ್ಜೆಗೆ: ನಿತಿನ್ ಗಡ್ಕರಿ
ರಾಜ್ಯದ ಆರು ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್)ಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭರವಸೆ ...

ಹುಬ್ಬಳ್ಳಿ: ರಾಜ್ಯದ ಆರು ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್)ಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ.
ನಗರದಲ್ಲಿ ಶನಿವಾರ ಹೊಸಪೇಟೆ- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ- 63 ಸೇರಿದಂತೆ ವಿವಿಧ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಕಾರವಾರ-ಕೈಗಾ -ಮುಂಡಗೋಡ- ಬಂಕಾಪುರ-ಸವಣೂರು- ಲಕ್ಷ್ಮೇಶ್ವರ- ಗದಗ-ಗಜೇಂದ್ರಗಡ ಮಾರ್ಗದ 318 ಕಿ.ಮೀ. ರಸ್ತೆ, ಅಣ್ಣಿಗೇರಿ-ನವಲಗುಂದ-ಹೆಬಸೂರ-ಧಾರವಾಡ-ಕಳಸ ಮಾರ್ಗದ 200 ಕಿ.ಮೀ. ರಸ್ತೆ, ನರಗುಂದ-ಜಗಳೂರು ಮಾರ್ಗದ 260 ಕಿ.ಮೀ. ರಸ್ತೆ, ಅಫಜಲಪುರ-ಅಲಮೇಲ್-ಇಂಡಿ-ಲೋಕಾಪುರ ಮಾರ್ಗದ 180 ಕಿ.ಮೀ. ರಸ್ತೆ, ಸಂಕೇಶ್ವರ-ಗೋಕಾಕ-ಯರಗಟ್ಟಿ-ನರಗುಂದ ಮಾರ್ಗದ 150 ಕಿ.ಮೀ. ರಸ್ತೆ ಹಾಗೂ ನರಗುಂದ-ರೋಣ-ಗಜೇಂದ್ರಗಡ-ಕುಷ್ಟಗಿ ಮಾರ್ಗದ 150 ಕಿ.ಮೀ. ರಾಜ್ಯ ಹೆದ್ದಾರಿಯನ್ನು ಎನ್‌ಎಚ್ ಮಾಡಲಾಗುವುದು ಎಂದರು.
ಬಳ್ಳಾರಿ- ಶಿರಗುಪ್ಪ ರಸ್ತೆ ದ್ವಿಪಥ ಹಾಗೂ ಬಳ್ಳಾರಿ- ಹಿರಿಯೂರು ಚತುಷ್ಪಥ ರಸ್ತೆ ಯೋಜನೆಗೆ ಕೇಂದ್ರ ಸಮ್ಮತಿಸಿದೆ. ಕೊಪ್ಪಳ- ರಾಯಚೂರು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಶೀಘ್ರವೇ ಆರಂಭಿಸಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


