ಉದ್ಯಮಿ ತೇಜಸ್ ಕಿಡ್ನಾಪೇ ಆಗಿರ್ಲಿಲ್ಲ, ಕಲ್ಲಪ್ಪ ಹಂಡಿಭಾಗ್ ಪ್ರಕರಣಕ್ಕೆ ಹೊಸ ತಿರುವು
ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣ ಇದೀಗ ಹೊಸ ತಿರುವು ಪಡೆದಿದ್ದು, ಅಸಲಿಗೆ ಉದ್ಯಮಿ ಎಚ್.ಎಮ್. ತೇಜಸ್ ಅವರ...

Published On :
ಚಿಕ್ಕಮಗಳೂರು: ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣ ಇದೀಗ ಹೊಸ ತಿರುವು ಪಡೆದಿದ್ದು, ಅಸಲಿಗೆ ಉದ್ಯಮಿ ಎಚ್.ಎಮ್. ತೇಜಸ್ ಅವರ ಅಪಹರಣವೇ ಆಗಿರಲಿಲ್ಲ ಎಂದು ಗುರುವಾರ ಪ್ರಕರಣದ ಆರೋಪಿ ಹೇಳಿಕೆ ನೀಡಿದ್ದಾರೆ.
ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ನಟರಾಜ್ ಅವರು ಈ ಬಗ್ಗೆ ಇಂದು ಹೇಳಿಕೆ ನೀಡಿರುವ ನಟರಾಜ್, ಹಂಡಿಭಾಗ್ ಅವರ ಆತ್ಮಹತ್ಯೆಗೆ ಉದ್ಯಮಿ ಎಚ್.ಎಮ್.ತೇಜಸ್ ಗೌಡ ಮಾಡಿದ್ದ ಸಂಚು ಕಾರಣ ಎಂದಿದ್ದಾರೆ.
ಜೂಜು, ಬೆಟ್ಟಿಂಗ್ ಜಾಲದಲ್ಲಿ ತೊಡಗಿಸಿಕೊಂಡಿದ್ದ ತೇಜಸ್‌ಗೆ ಹಂಡಿಭಾಗ್ ಅವರು ಎಚ್ಚರಿಕೆ ನೀಡಿ ಎದುರು ಹಾಕಿಕೊಂಡಿದ್ದರು. ಹೀಗಾಗಿ ತೇಜಸ್ ಹಂಡಿಭಾಗ್ ವಿರುದ್ಧ ಹುನ್ನಾರ ನಡೆಸಿ ಅಪಹರಣ ಪ್ರಕರಣದಲ್ಲಿ ಸಿಲುಕಿಸಿದ. ನಿಜವಾಗಲೂ ಅಪಹರಣವೇ ನಡೆದಿರಲಿಲ್ಲ. ತೇಜಸ್ ಸ್ವತಃ ಅಭಿಷೇಕ್ ಜೊತೆ ಬೆಂಗಳೂರಿಗೆ ತೆರಳಿ ಅಪಹರಣದ ಕತೆ ಕಟ್ಟಿ ಒಂದೇ ಬಾಣದಲ್ಲಿ 2 ಹಕ್ಕಿ ಹೊಡೆದಿದ್ದ'ಎಂದು ಹೇಳಿಕೆ ನೀಡಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


