ಶಿವಮೊಗ್ಗ: 17ನೇ ಶತಮಾನದ ಕೆಳದಿ ಶಿವಪ್ಪ ನಾಯಕನ ತಾಮ್ರ ಶಾಸನ ಪತ್ತೆ
17 ನೇ ಶತಮಾನದ ಕೆಳದಿ ಶಿವಪ್ಪನಾಯಕನಿಗೆ ಸೇರಿದ ಅಪರೂಪದ ತಾಮ್ರ ಶಾಸನವೊಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಪತ್ತೆಯಾಗಿದೆ..,.

ಶಿವಮೊಗ್ಗ: 17 ನೇ ಶತಮಾನದ ಕೆಳದಿ ಶಿವಪ್ಪನಾಯಕನಿಗೆ ಸೇರಿದ ಅಪರೂಪದ ತಾಮ್ರ ಶಾಸನವೊಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಪತ್ತೆಯಾಗಿದೆ.
ಸಾಗರ ತಾಲೂಕಿನ ಆನಂದಪುರಂ ಗ್ರಾಮದ ಬಳಿಯ ಯಡಹಳ್ಳಿ ಬಳಿ ಈ ಶಾಸನ ಪತ್ತೆಯಾಗಿದೆ. 6.5 ಇಂಚು ಅಗಲ, 10 ಇಂಚು ಉದ್ದ. 0.5 ಮಿಮಿ ದಪ್ಪ ಇರುವ ಶಾಸನ ಇದಾಗಿದೆ. ಶಾಸನವದ ಮುಂಭಾಗದಲ್ಲಿ 33 ಸಾಲು ಹಾಗೂ ಶಾಸನದ ಹಿಂಭಾಗದಲ್ಲಿ 17 ಸಾಲುಗಳಲ್ಲಿ ಬರೆಯಲಾಗಿದೆ.
ಕೆಳದಿ ಸಂಸ್ಥಾನಕ್ಕೆ ಸೇರಿದ ಶಾಸನ ಇದಾಗಿದ್ದು, ವೀರಭದ್ರ ನಾಯಕ, ಆತನ ಮೊಮ್ಮಗ ವೆಂಕಟಪ್ಪ ನಾಯಕ ಮತ್ತು ಆತನ ಮಗ ಭದ್ರಪ್ಪ ನಾಯಕನ ಆಡಳಿತದ ಬಗ್ಗೆ ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆ.
1632 ರಲ್ಲಿ ವೀರಭದ್ರ ನಾಯಕ ಹರತಾಳ ಪ್ರದೇಶದಲ್ಲಿರುವ ಆನಂದಪುರದ ಸಿದ್ದಲಿಂಗ ದೇವರು ಮತ್ತು ಉತ್ತರಾದಿ ದೇವರುಗಳಿಗೆ ಭೂಮಿಯನ್ನು ಶ್ರಾವಣ ತಿಂಗಳಿನ 15 ನೇ ದಿನ ದಾನವಾಗಿ ನೀಡಿದ್ದರು ಎಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


