ಜನಾರ್ಧನ ರೆಡ್ಡಿ ಪುತ್ರಿಯ ವಿವಾಹದ ಅದ್ಧೂರಿ 'ವಿಡಿಯೋ' ಆಮಂತ್ರಣ ಪತ್ರಿಕೆ
ಮಾಜಿ ಸಚಿವ ಹಾಗೂ ಗಣಿ ಧಣಿ ಜನಾರ್ದನರೆಡ್ಡಿ ಪುತ್ರಿ ಬ್ರಹ್ಮಿಣಿಯ ಮದುವೆಗೆ ಭರದ ಸಿದ್ಧತೆ ನಡೆದಿದೆ...

ಬೆಂಗಳೂರು: ಮಾಜಿ ಸಚಿವ ಹಾಗೂ ಗಣಿ ಧಣಿ ಜನಾರ್ದನರೆಡ್ಡಿ ಪುತ್ರಿ ಬ್ರಹ್ಮಿಣಿಯ ಮದುವೆಗೆ ಭರದ ಸಿದ್ಧತೆ ನಡೆದಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಹೈದರಾಬಾದ್ ಮೂಲದ ಉದ್ಯಮಿಯ ಪುತ್ರ ರಾಜೀವ್ ರೆಡ್ಡಿ ಅವರೊಂದಿಗೆ ನವೆಂಬರ್ 16ರಂದು ನಡೆಯಲಿದೆ. ಈ ಮದುವೆಗೆ ರೆಡ್ಡಿ ಕುಟುಂಬ ವಿಶಿಷ್ಟ ರೀತಿಯ ಆಹ್ವಾನ ಪತ್ರಿಕೆಯನ್ನು ಸಿದ್ಧಪಡಿಸಿದೆ.
ಎಲ್‌ಇಡಿ ಪರದೆ ಮೇಲೆ ರೆಡ್ಡಿ ದಂಪತಿ ಹಾಡಿನ ಮೂಲಕ ಆಹ್ವಾನ ನೀಡುವ ಆಮಂತ್ರಣ ಪತ್ರಿಕೆ ಸಿದ್ಧಪಡಿಸಲಾಗಿದೆ.
ಬಾದಾಮಿ, ಗೋಡಂಬಿ ಮುಂತಾದ ಒಣ ಹಣ್ಣುಗಳು ತುಂಬಿರುವ ಈ ವಿಶೇಷ ಆಮಂತ್ರಣ ಪತ್ರಿಕೆಯು ಶೀಘ್ರದಲ್ಲೇ ರಾಜ್ಯದ ಎಲ್ಲಾ ಜಿಲ್ಲೆಗಳ ಹಿತೈಷಿಗಳಿಗೆ, ಮುಖಂಡರಿಗೆ ತಲುಪಲಿದೆ.
ಹಿಂದೆ ಯಾರು ಮಾಡಿರದಂತ ಮದುವೆ ಸಮಾರಂಭ ಮಾಡಲು ನಿರ್ಧರಿಸಿರುವ ರೆಡ್ಡಿ ಆಮಂತ್ರಣ ಪತ್ರಿಕೆಯಲ್ಲಿ ಹಾಡಿನ ಮೂಲಕ ಆಹ್ವಾನ ನೀಡಿದ್ದಾರೆ. ಆಮಂತ್ರಣ ಪತ್ರಿಕೆ ತೆರೆದರೆ ಮಿನಿ ಎಲ್ ಸಿಡಿ ಪರದೆಯ ಮೇಲೆ ರೆಡ್ಡಿ ಕುಟುಂಬದ ಆಹ್ವಾನದ ಹಾಡು ಆಟೋ ಪ್ಲೇ ಆಗುತ್ತದೆ. ರೆಡ್ಡಿ ದಂಪತಿ, ಪುತ್ರ ಪುತ್ರಿ ಹಾಗೂ ಅಳಿಯ ಈ ಆಹ್ವಾನ ಪತ್ರಿಕೆಯ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


