ಆಸ್ತಿ ವಿಷಯದಲ್ಲಿ ಜಗಳ: ವೈರಲ್ ಆದ ವಿಡಿಯೋ
ಆಸ್ತಿ ವಿವಾದಕ್ಕೆ ಸಂಬಂಧಪಟ್ಟಂತೆ ಶಿಲಾಯುಗವನ್ನು ನೆನಪಿಸುವ ರೀತಿಯಲ್ಲಿ ಕುಡುಗೋಲು, ಕಲ್ಲು...
Published On :
ತುಮಕೂರು: ಆಸ್ತಿ ವಿವಾದಕ್ಕೆ ಸಂಬಂಧಪಟ್ಟಂತೆ ಶಿಲಾಯುಗವನ್ನು ನೆನಪಿಸುವ ರೀತಿಯಲ್ಲಿ ಕುಡುಗೋಲು, ಕಲ್ಲು, ಮರದ ದಿಮ್ಮುಗಳನ್ನು ಹಿಡಿದು ಗ್ರಾಮಸ್ಥರು ಜಗಳ ಮಾಡಿಕೊಂಡಿರುವ ಘಟನೆ ತುಮಕೂರಿನ ಬುಗುಡನಹಳ್ಳಿ ಗ್ರಾಮದಲ್ಲಿ ನಡೆದಿದ್ದು ಅಲ್ಲೀಗ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಖಾಸಗಿ ಟಿವಿ ಚಾನೆಲ್ ವೊಂದು ಮಾಡಿದ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆಯನ್ನು ಚಿತ್ರೀಕರಿಸುವಂತೆ ಟಿವಿ ಚಾನೆಲ್ ನವರಿಗೆ ಕರೆ ಮಾಡಿ ಕರೆಸಿಕೊಂಡ ಗ್ರಾಮ ಪಂಚಾಯ್ತಿಯ ಕಾಂಗ್ರೆಸ್ ಮಾಜಿ ಸದಸ್ಯ ಲಕ್ಷ್ಮೀನಾರಾಯಣಪ್ಪ ಕೂಡ ಘಟನೆಯಲ್ಲಿ ಗಾಯಗೊಂಡಿದ್ದು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಆತನ ನೆರೆಹೊರೆಯವರಾದ ವೆಂಕಟರಾಮಯ್ಯ ಮತ್ತು ಅವನ ಪುತ್ರ ಬಿ.ವಿ.ಲಕ್ಷ್ಮೀನಾರಾಯಣ ಹಲ್ಲೆ ಮಾಡಿದ್ದು ಅವರ ವಿರುದ್ಧ ಕೊಲೆ ಯತ್ನ ಕೇಸು ದಾಖಲಾಗಿದೆ. ಅದಕ್ಕೆ ಪ್ರತಿಯಾಗಿ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಲಕ್ಷ್ಮೀನಾರಾಯಣಪ್ಪ ವಿರುದ್ಧ ಕೂಡ ಕೇಸು ದಾಖಲಾಗಿದೆ.
ಹಿನ್ನೆಲೆ: ವೆಂಕಟರಾಮಯ್ಯ ಮತ್ತು ಆತನ ಪುತ್ರ ಬಿ.ವಿ.ಲಕ್ಷ್ಮೀನಾರಾಯಣ ಅಕ್ರಮವಾಗಿ ಸೈಟ್ ವೊಂದನ್ನು ಅತಿಕ್ರಮಿಸಿ ಅಲ್ಲಿ ಗೋಡೆಯನ್ನು ನಿರ್ಮಿಸಿಕೊಂಡಿದ್ದರು. ಅವರ ಪ್ರತಿಸ್ಪರ್ಧಿ ಲಕ್ಷ್ಮೀನಾರಾಯಣಪ್ಪ ಖಾಸಗಿ ಟಿವಿ ಚಾನೆಲ್ ನವರನ್ನು ಕರೆಸಿ ಅತಿಕ್ರಮಣ ಮಾಡಿ ನಿರ್ಮಿಸಿಕೊಂಡಿದ್ದ ಗೋಡೆಯನ್ನು ಕೆಡವಲು ಮುಂದಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

