ದಸರಾ ಕುಸ್ತಿ: ಬೆಂಗಳೂರಿನ ಪಾಂಡುರಂಗ 'ದಸರಾ ಕಂಠೀರವ'
ದಸರಾ ಮಹೋತ್ಸವದ ಅಂಗವಾಗಿ ನಡೆದ ರಾಜ್ಯ ಹಾಗೂ ಅಖಿಲ ಭಾರತ ಕುಸ್ತಿ ಚಾಂಪಿಯನ್ ಷಿಪ್ ನ 75 ಕೆಜಿ ಮೇಲಿನವರ ವಿಭಾಗದಲ್ಲಿ ಬೆಂಗಳೂರಿನ ಎಂಇಜಿಯ...

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ನಡೆದ ರಾಜ್ಯ ಹಾಗೂ ಅಖಿಲ ಭಾರತ ಕುಸ್ತಿ ಚಾಂಪಿಯನ್ ಷಿಪ್ ನ 75 ಕೆಜಿ ಮೇಲಿನವರ ವಿಭಾಗದಲ್ಲಿ ಬೆಂಗಳೂರಿನ ಎಂಇಜಿಯ ಪಾಂಡುರಂಗ ಶಿಂಧೆ ದಸರಾ ಕಂಠೀರವ ಗೌರವ ಪಡೆದಿದ್ದಾರೆ.
ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಅಖಾಡದಲ್ಲಿ ಬೆಳಗಾವಿಯ ಮರಾಠಾ ಲೈಟ್ ಇನ್ಫೆಂಟ್ರಿಯ ಆನಂದ್ ಹೊಳೆ ಹಡಗಲಿ ಹಾಗೂ ಪಾಂಡುರಂಗ ಶಿಂಧೆ ನಡುವಿನ ಜಿದ್ದಾಜಿದ್ದಿನ ಪೈಪೋಟಿಯು ಕುಸ್ತಿ ಪ್ರಿಯರಿಗೆ ರಸದೌತಣ ನೀಡಿತು.
ಪಾಂಡುರಂಗ ಅವರ ಹಾಕಿದ ಪಟ್ಟನ್ನು ಬಿಡಿಸಿಕೊಳ್ಳಲು ಆನಂದ್ ಅವರಿಗೆ ಸಾಧ್ಯವಾಗದೆ ಪಾಂಡುರಂಗರಿಗೆ ಶರಣಾದರು. ಇನ್ನು ಧಾರವಾಡದ ರಿಯಾಜ್ ಮುಲ್ಲಾ ಹಾಗೂ ದಾವಣಗೆರೆಯ ಕಿರಣ್ ಮೂರನೇ ಸ್ಥಾನ ಗಳಿಸಿದ್ದಾರೆ.
ಇನ್ನು ಅಖಿಲ ಭಾರತ ಕುಸ್ತಿ ಚಾಂಪಿಯನ್ ಷಿಪ್ ನಲ್ಲಿ ಗಮನಾರ್ಹ ಸಾಧನೆ ಮಾಡಿದ ಎಂಇಜಿಯ ಗೋಪಾಲ ಕೋಳಿ ಅತ್ಯುತ್ತಮ ಕುಸ್ತಿಪಟು ಶ್ರೇಯಕ್ಕೆ ಪಾತ್ರರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


