ತುಮಕೂರಿನಲ್ಲಿ ನೋಟ್ ಬದಲಾವಣೆಗಾಗಿ ಕ್ಯೂ ನಿಂತಿದ್ದ ಹಿರಿಯ ನಾಗರಿಕ ಸಾವು
ತುಮಕೂರಿನಲ್ಲಿ ಮೈಸೂರು ಬ್ಯಾಂಕಿನ ಮುಂದೆ ಸರತಿ ಸಾಲಿನಲ್ಲಿ ನಿಂತ 70 ವರ್ಷದ ಹಿರಿಯ ನಾಗರಿಕರೊಬ್ಬರು ಕ್ಯೂನಲ್ಲಿಯೇ ಜೀವಕಳೆದುಕೊಂಡಿದ್ದಾರೆ.

Published On :
ತುಮಕೂರು: ತುಮಕೂರಿನಲ್ಲಿ ಮೈಸೂರು ಬ್ಯಾಂಕಿನ ಮುಂದೆ ಸರತಿ ಸಾಲಿನಲ್ಲಿ ನಿಂತ 70 ವರ್ಷದ ಹಿರಿಯ ನಾಗರಿಕರೊಬ್ಬರು ಕ್ಯೂನಲ್ಲಿಯೇ ಜೀವಕಳೆದುಕೊಂಡಿದ್ದಾರೆ.
ತುಮಕೂರು ತಾಲ್ಲೂಕು ಚೇಳೂರಿನ ಎಸ್ ಬಿಎಂ ಬ್ಯಾಂಕಿನ ಮುಂದೆ ಇಂದು ಮಧ್ಯಾಹ್ನ 12.30 ಕ್ಕೆ ಸಿದ್ದಪ್ಪ(70) ಎಂಬುವವರು ನೋಟನ್ನು ಬದಲಾಸಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದರು. ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಕುಸಿದಿದ್ದಾರೆ. ಸರತಿ ಸಾಲಿನಲ್ಲಿ ನಿಂತಿದ್ದ ಜನರು ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯದರು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ.
ಬ್ಯಾಂಕ್ ಗಳು ಇಂದು ದೇಶಾದ್ಯಂತ ಹಳೆ ನೋಟ್ ಗಳ ಬದಲಾವಣೆ ಸೇವೆಯನ್ನು ಕೇವಲ ಹಿರಿಯ ನಾಗರಿಕರಿಗೆ ಮಾತ್ರ ಮೀಸಲಿಟ್ಟದ್ದವು. ಹೀಗಾಗಿ ಬ್ಯಾಂಕಿನ ಮುಂದೇ ಹಿರಿಯ ನಾಗರಿಕರೇ ತುಂಬಿದ್ದರು.
ಐವತ್ತು ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ನೋಟು ಬದಲಾವಣೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕೆಂದು ಪ್ರತಿಪಕ್ಷಗಳು ಸರ್ಕಾರಕ್ಕೆ ಒತ್ತಾಯಿಸಿದ್ದವು. ಹಾಗಯೇ ನೋಟಿನ ಕಾರಣದಿಂದಾಗಿ ಆದ ಅನೇಕ ಸಾವು ನೋವುಗಳಿಗೆ ಸರ್ಕಾರದ ದಿಢೀರ್ ನಿರ್ಧಾರವೇ ಕಾರಣ ಎಂದು ಆರೋಪಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


