ಬೆಳಗಾವಿ: 34 ಜೀತದಾಳುಗಳ ರಕ್ಷಣೆ
23 ಮಂದಿ ಪುರುಷರು ಹಾಗೂ 8 ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದಂತೆ ಒಟ್ಟು 34 ಮಂದಿ ಜೀತದಾಳುಗಳನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ..

ಕರ್ನಾಟಕ: 23 ಮಂದಿ ಪುರುಷರು ಹಾಗೂ 8 ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದಂತೆ ಒಟ್ಟು 34 ಮಂದಿ ಜೀತದಾಳುಗಳನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ರಕ್ಷಿಸಲಾಗಿದೆ.
ಆರೋಪಿ ರಂಗಯ್ಯ 10 ಸಾವಿರ ಹಾಗೂ ಐವತ್ತು ಸಾವಿರ ಮುಂಗಡ ಹಣ ನೀಡಿ ಇವರನ್ನೆಲ್ಲಾ ಜೀತದಾಳುಗಳನ್ನಾಗಿ ಮಾಡಿಕೊಂಡಿದ್ದ. ರಂಗಯ್ಯನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ರಕ್ಷಣೆಗೊಂಡ ಎಲ್ಲರು ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದವರಾಗಿದ್ದಾರೆ. ಇವರನ್ನೆಲ್ಲಾ ನಾಗಕರ್ನೂಲ್ ಹಾಗೂ ಮೆಹಬೂಬ ನಗರ ಜಿಲ್ಲೆಗಳಿಂದ ರಕ್ಷಿಸಲಾಗಿದೆ.
ರಕ್ಷಿಸಿದ ಜೀತದಾಳುಗಳನ್ನು ಚಿಕ್ಕೋಡಿ ಪೊಲೀಸರ ಸಮ್ಮುಖಕ್ಕೆ ನೀಡಿದ್ದು,ಅವರನ್ನೆಲ್ಲಾ ಅವರವರ ಸ್ವಗ್ರಾಮಕ್ಕೆ ತೆರಳಲು ಅನುಕೂಲ ಮಾಡಿಕೊಡುವಂತೆ, ರಾಷ್ಟ್ರೀಯ ಆದಿವಾಸಿ ಏಕತಾ ಕೌನ್ಸಿಲ್ ಸೂಚಿಸಿದೆ.
ರಂಗಯ್ಯ ನಮಗೆ ಯಾವುದೇ ಹಣ ನೀಡಿರಲಿಲ್ಲ, ಆತ ನಮಗೆ ಊಟ ನೀಡುತ್ತಿದ್ದ, ಅನಾರೋಗ್ಯವಿದ್ದರೂ ನಮ್ಮನ್ನು ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದ ಎಂದು ಬಿಡುಗಡೆಗೊಂಡ ಜೀತದಾಳುಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


