ಕರ್ನಾಟಕದಲ್ಲಿ ಪತ್ತೆಯಾಯ್ತು 2 ಸಾವಿರ ಮುಖಬೆಲೆಯ ಜೆರಾಕ್ಸ್ ನೋಟು
: 2000 ರು ಮುಖಬೆಲೆಯ ನೋಟು ಹೋಲುವಂತಹ ಜೆರಾಕ್ಸ್ ನೋಟು ನೀಡಿ ರೈತನಿಗೆ ಈರುಳ್ಳಿ ವ್ಯಾಪಾರಿಯೊಬ್ಬ ವಂಚಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ

ಚಿಕ್ಕಮಗಳೂರು: 2000 ರು ಮುಖಬೆಲೆಯ ನೋಟು ಹೋಲುವಂತಹ ಜೆರಾಕ್ಸ್ ನೋಟು ನೀಡಿ ರೈತನಿಗೆ ಈರುಳ್ಳಿ ವ್ಯಾಪಾರಿಯೊಬ್ಬ ವಂಚಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತ ಅಶೋಕ್ ಎಂಬುವರಿಗೆ ಈರುಳ್ಳಿ ಖರೀದಿಸಿದ ವ್ಯಕ್ತಿ ನಕಲಿ ನೋಟು ನೀಡಿ ವಂಚಿಸಿದ್ದಾನೆ.
ಅಶೋಕ್ ಅಂಗಡಿಗೆ ಬಂದ ವರ್ತಕ 2ಸಾವಿರ ರುಪಾಯಿನ ಜೆರಾಕ್ಸ್ ನೋಟ್ ನೀಡಿ 3 ಚೀಲ ಈರುಳ್ಳಿ ಖರೀದಿಸಿ ಯಾಮಾರಿಸಿದ್ದಾನೆ. ತನ್ನ ಬಳಿಯಿದ್ದ ಎರಡು ಸಾವಿರ ರೂ ನೋಟನ್ನು ಅಶೋಕ್ ತನ್ನ ಸ್ನೇಹಿತರಿಗೆ ತೋರಿಸಿದಾಗ ಅದು ನಕಲಿ ನೋಟ್ ಎಂದು ತಿಳಿದು ಬಂದಿದೆ.
ಈ ನೋಟಿನ ಬಾರ್ಡರ್‍ನಲ್ಲಿ ಕತ್ತರಿಯಿಂದ ಕತ್ತರಿಸಿರೋದು ಕಾಣ್ತಿದೆ. ಸೈಡ್ ಎಡ್ಜ್ ನಲ್ಲಿ ಇರಬೇಕಾದ 7 ಗೆರೆಗಳು ಇಲ್ಲ. ಅಲ್ಲದೆ ಅಸಲಿ ನೋಟಿನ ನಾಲ್ಕು ಮೂಲೆಗಳು ಸ್ಪಷ್ಟವಾಗಿದ್ದು, ನಕಲಿ ನೋಟಿನ ಮೂಲೆಗಳು ಅನುಮಾನ ಮೂಡಿಸುವಂತಿದೆ. ಇದೀಗ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


