ರಾಜ್ಯ

ಫೆಬ್ರವರಿಯಿಂದ 70 ದಿನಗಳ ಕಾಲ ಕೆಂಪೇಗೌಡ ವಿಮಾನ ನಿಲ್ದಾಣದ ರನ್‏ವೇ ಭಾಗಶಃ ಬಂದ್

ಫೆಬ್ರವರಿಯಿಂದ - ಎಪ್ರಿಲ್ ವರೆಗೆ ಸುಮಾರು ಎರಡೂವರೆ ತಿಂಗಳುಗಳ ಕಾಲ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮುಚ್ಚಲಿದೆ...

ಫೆಬ್ರವರಿಯಿಂದ 70 ದಿನಗಳ ಕಾಲ ಕೆಂಪೇಗೌಡ ವಿಮಾನ ನಿಲ್ದಾಣದ ರನ್‏ವೇ ಭಾಗಶಃ ಬಂದ್
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಫೆಬ್ರವರಿಯಿಂದ - ಎಪ್ರಿಲ್ ವರೆಗೆ ಸುಮಾರು ಎರಡೂವರೆ ತಿಂಗಳುಗಳ ಕಾಲ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‏ವೇ ಭಾಗಶಃ ಮುಚ್ಚಲಿದೆ.

ಬೆಳಗ್ಗೆ 10.30 ರಿಂದ ಸಂಜೆ ಐದು ಗಂಟೆವರೆಗೆ ಭಾಗಶಃವಾಗಿ ರನ್ ವೇ ಮುಚ್ಚಲಾಗುವುದು ಎಂದು ಹೇಳಲಾಗಿದೆ. ರನ್ ವೇ ಇಂದ ಶೀಘ್ರವಾಗಿ ತೆರಳಲು ಟ್ಯಾಕ್ಸಿಗೆ ರಸ್ತೆ ಮಾಡುವ ಕಾಮಗಾರಿ ಆರಂಭವಾಗಲಿದೆ . ಹೀಗಾಗಿ ಫೆಬ್ರವರಿ 19 ರಿಂದ ಏಪ್ರಿಲ್ 30 ರವರೆಗೆ ರನ್ ವೇ ಭಾಗಶಃ ಮುಚ್ಚಲಿದೆ.

2008 ರಿಂದ ಇದು ಎರನೇ ಬಾರಿಗೆ ರನ್ ವೇ ಮುಚ್ಚಲಾಗುತ್ತಿದೆ. ಈ ಮೊದಲು 2012 ರಲ್ಲಿ ಮಾರ್ಚ್ 11ರಿಂದ ಏಪ್ರಿಲ್ 3 ರವರೆಗೆ ಮುಚ್ಚಲಾಗಿತ್ತು. ಈ ಬಗ್ಗೆ ಮಾಹಿತಿ ಕೇಳಲು ವಿಮಾನ ನಿಲ್ದಾಣ ಪ್ರಾಧಿಕಾರಿದ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಶೀಘ್ರವೇ ಈ ಸಂಬಂಧ ಪ್ರಕಟಣೆ ಹೊರಡಿಸುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.