ಸಂಪ್ರದಾಯಬದ್ಧ ಕಂಬಳಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್
: ಬೆಂಗಳೂರು: ಉಡುಪಿಯಲ್ಲಿ ಸಂಪ್ರದಾಯಬದ್ಧ ಕಂಬಳ ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ.ರಾಸುಗಳ ಓಟವಿಲ್ಲದ, ಹಿಂಸೆಯಿಲ್ಲದ ಸಂಪ್ರದಾಯಬದ್ದ ..

ಬೆಂಗಳೂರು: ಬೆಂಗಳೂರು: ಉಡುಪಿಯಲ್ಲಿ ಸಂಪ್ರದಾಯಬದ್ಧ ಕಂಬಳ ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ.ರಾಸುಗಳ ಓಟವಿಲ್ಲದ, ಹಿಂಸೆಯಿಲ್ಲದ ಸಂಪ್ರದಾಯಬದ್ದ ಕಂಬಳ ನಡೆಸಲು ನ್ಯಾಯಮೂರ್ತಿ ಬೋಪಣ್ಣ ಅವರು ಅನುಮತಿ ನೀಡಿದ್ದಾರೆ.
ಜಿಲ್ಲಾ ಸಂಪ್ರದಾಯಬದ್ಧ ಕಂಬಳ ಸಮಿತಿಯವರು ಜನಪದ ಕ್ರೀಡೆಯಾದ ಕಂಬಳ ನಡೆಸಲು ಜಿಲ್ಲಾಧಿಕಾರಿ ಅವರಿಗೆ ಅವಕಾಶ ನೀಡುವಂತೆ ಮಾಡಿದ ಮನವಿಗೆ ಅವಕಾಶ ನಿರಾಕರಿಸಿರುವುದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದರು.
ಆಚರಿಸುತ್ತಿರುವ ಸಂಪ್ರದಾಯಗಳನ್ನು ನಿಷೇಧಿಸುವುದು ಸರಿಯಲ್ಲ ಎಂದು ಸಮಿತಿ ಸಲ್ಲಿಸಿದ್ದ ಅರ್ಜಿಯಲ್ಲಿ ಮನವಿ ಮಾಡಿತ್ತು, ಅರ್ಜಿ ವಿಚಾಣೆ ನಡೆಸಿದ್ದ ಹೈಕೋರ್ಟ್ 2015ರ ಡಿಸೆಂಬರ್ 17ರಂದು ಸಂಪ್ರದಾಯಬದ್ಧ ಕಂಬಳ ನಡೆಸಲು ಆದೇಶ ನೀಡಿತ್ತು.
ಉಡುಪಿ ಹಾಗೂ ದಶ್ರಿಣ ಕನ್ನಡ ಜಿಲ್ಲೆಗಳಲ್ಲೂ ಕಂಬಳ ಸಮಿತಿ ಸಂಪ್ರದಾಯಬದ್ಧ ಕಂಬಳ ನಡೆಸಲು ಅನುಮತಿ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


