ಪೊಲೀಸರು, ರಾಜಕಾರಣಿಗಳು, ಉದ್ಯಮಿಗಳಿಗೆ 30 ಕೋಟಿ ರೂ. ಸಾಲ ನೀಡಿದ್ದ ಸುರೇಂದ್ರ ಕುಮಾರ್
ಸಂಜಯನಗರದಲ್ಲಿ ಕೊಲೆಯಾದ ಉದ್ಯಮಿ ಸುರೇಂದ್ರ ಕುಮಾರ್ ಪರಚೂರಿ ರಾಜಕಾರಣಿಗಳು, ಪೊಲೀಸರು ಹಾಗೂ ಹಲವು ಉದ್ಯಮಿಗಳಿಗೆ ಸುಮಾರು 30 ...

ಬೆಂಗಳೂರು: ಸಂಜಯನಗರದಲ್ಲಿ ಕೊಲೆಯಾದ ಉದ್ಯಮಿ ಸುರೇಂದ್ರ ಕುಮಾರ್ ಪರಚೂರಿ ರಾಜಕಾರಣಿಗಳು, ಪೊಲೀಸರು ಹಾಗೂ ಹಲವು ಉದ್ಯಮಿಗಳಿಗೆ ಸುಮಾರು 30 ಕೋಟಿ ರೂ ಹಣ ಸಾಲ ನೀಡಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ತಮಗೆ ಪರಿಚಯ ಇರುವವರಿಗೆ ಸುರೇಂದ್ರ ಕುಮಾರ್ ಕೈಸಾಲ ನೀಡುತ್ತಾ ಬಂದಿದ್ದರು. ಕೊಲವೊಮ್ಮೆ ತಮ್ಮಿಂದ ಸಾಲ ಪಡೆದವರು ಹಣ ಮರಳಲಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದರೇ ಅಂತವರ ಸಾಲ ಮನ್ನಾ ಮಾಡಿದ್ದರು ಎಂದು ಸುರೇಂದ್ರ ಸಂಬಂಧಿ ಕ್ಯಾಪ್ಟನ್ ಚೌಧುರಿ ಹೇಳಿದ್ದಾರೆ.
ಸುರೇಂದ್ರ ಕುಮಾರ್ ಕೊಲೆ ಸಂಬಂಧ 4 ತಂಡಗಳನ್ನು ರಚಿಸಿರುವ ಪೊಲೀಸರ ಒಂದು ತಂಡ ಗುಂಟೂರಿಗೆ ಹೋಗಿದ್ದರೆ, ಮತ್ತೊಂದು ತಂಡ ಮಥುರಾಗೆ ತೆರಳಿದೆ. ಇನ್ನುಳಿದ ತಂಡಗಳು ನಗರದಲ್ಲೇ ಇರುವ ಮೃತರ ಸ್ನೇಹಿತರು, ಸಂಬಂಧಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನೂ ಸುರೇಂದ್ರ ಕುಮಾರ್ ಹಣಕಾಸು ವ್ಯವಹಾರ ಮಾಡುತ್ತಿದ್ದುದ್ದರಿಂದ ಪ್ರತಿಯೊಂದು ಲೆಕ್ಕವನ್ನು ಬರೆದಿಡುತ್ತಿದ್ದರು, ಹಣದ ವಹಿವಾಟು ಸಂಬಂಧಿಸಿದಂತೆ ಪ್ರತಿಯೊಂದು ದಾಖಲೆಗಳನ್ನು ಸಂಗ್ರಹಿಸಿಡುತ್ತಿದ್ದರು ಎಂದು ಸುರೇಂದ್ರ ಕುಮಾರ್ ಸಂಬಂಧಿ ತಿಳಿಸಿದ್ದಾರೆ.
ದೇವನಹಳ್ಳಿ ಬಳಿ ಎರಡು ಎಕರೆ ಭೂಮಿಯನ್ನು ಲೀಸ್ ಗೆ ಪಡೆದಿದ್ದ ಸುರೇಂದ್ರ ಕುಮಾರ್ ಅದರಲ್ಲಿ 56 ನಾಯಿಗಳನ್ನು ಸಾಕಿದ್ದರು. ಪಕ್ಕದಲ್ಲಿದ್ದ ಗ್ರಾಮದ ಬಡ ಜನರಿಗೆ ಸಹಾಯ ಮಾಡುತ್ತಿದ್ದರು. ಫಾರ್ಮ್ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 30 ಕೇರ್ ಟೇಕರ್ ಗಳು ಸುರೇಂದ್ರ ಕುಮಾರ್ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.
ಹಣಕಾಸಿನ ವ್ಯವಹಾರವೇ ಕೊಲೆಗೆ ಕಾರಣವಿರಬಹುದು ಎಂದು ಶಂಕಿಸಿರುವ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ. ಸುರೇಂದ್ರ ಅವರ ಬಳಿ ಯಾವುದೇ ಸ್ಥಿರಾಸ್ತಿ ಇಲ್ಲ, ಅವರು ಹಣಕಾಸು ವ್ಯವಹಾರ ಮಾಡುತ್ತಿದ್ದರು. ಬೆಂಜ್ ಹಾಗೂ ಮಾರುತಿ ಇಕೋ ಕಾರನ್ನು ಹೊಂದಿದ್ದರು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


