ಇಸ್ರೋ: ಮುಂದಿನ ತಿಂಗಳು ಒಂದೇ ಬಾರಿಗೆ 22 ಉಪಗ್ರಹಗಳನ್ನು ಉಡಾವಣೆ
ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಮುಂದಿನ ತಿಂಗಳು ಒಂದೇ ಬಾರಿಗೆ 22 ಉಪಗ್ರಹಗಳನ್ನು...

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಮುಂದಿನ ತಿಂಗಳು ಒಂದೇ ಬಾರಿಗೆ 22 ಉಪಗ್ರಹಗಳನ್ನು ಉಡಾಯಿಸಲಿದೆ.
ಮೊನ್ನೆಯಷ್ಟೇ ಮರುಬಳಕೆ ಉಡ್ಡಯನ ವಾಹನವನ್ನು ಉಡಾಯಿಸಿದ್ದ ಇಸ್ರೋ ಮುಂದಿನ ತಿಂಗಳು 22 ಸ್ಯಾಟಲೈಟ್ ಗಳನ್ನು ಒಟ್ಟಿಗೆ ಉಡಾಯಿಸಲಿದೆ. ಕಾರ್ಟೊಗ್ರಾಫಿಕ್ ಸರಣಿ ಉಪಗ್ರಹಗಳನ್ನು ಉಡಾಯಿಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ತಿಳಿಸಿದ್ದಾರೆ. ಎಫ್ ಕೆಸಿಸಿಐ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 22 ಉಪಗ್ರಹಗಳಲ್ಲಿ ಮೂರು ಭಾರತೀಯ ಉಪಗ್ರಹಗಳಾದರೆ ಉಳಿದವೆಲ್ಲ ವಾಣಿಜ್ಯ ಬಳಕೆಯವು ಎಂದು ಹೇಳಿದರು.
ಮುಂದಿನ ತಿಂಗಳು ಕೊನೆಯ ವೇಳೆಗೆ ಉಪಗ್ರಹಗಳನ್ನು ಉಡಾಯಿಸಲಾಗುವುದು. ಈ ಮುನ್ನ ವಿಕ್ರಮ್ ಸಾರಾಭಾಯಿ ಅಂತರಿಕ್ಷ ಕೇಂದ್ರದ ನಿರ್ದೇಶಕ ಕೆ.ಸಿವನ್ ಮಾತನಾಡಿ, ಪೋಲಾರ್ ರಾಕೆಟ್ ಪಿಎಸ್ ಎಲ್ ವಿ ಸಿ 34ನ್ನು ಉಡಾವಣೆಗೆ ಬಳಸಿಕೊಳ್ಳಲಾಗುವುದು. ಈ ಹಿಂದೆ ಇಸ್ರೋ 2008ರಲ್ಲಿ ಅಂತರಿಕ್ಷಕ್ಕೆ ಒಂದೇ ಬಾರಿಗೆ 10 ಸ್ಯಾಟಲೈಟ್ ಗಳನ್ನು ಕಳುಹಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


