ಮೈಸೂರು ರಸ್ತೆ ಮೆಟ್ರೋ ಸ್ಟೇಷನ್ ಗಳಲ್ಲಿ ಇನ್ಮುಂದೆ ಉಚಿತ ವಾಹನ ನಿಲುಗಡೆ ಇಲ್ಲ!
ನಮ್ಮ ಮೆಟ್ರೋದ ಈಸ್ಟ್- ವೆಸ್ಟ್ ಕಾರಿಡಾರ್ ಉದ್ಘಾಟನೆಯಾದಾಗಿನಿಂದಲೂ ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್ ಗಾಗಿ ಅತಿ ಹೆಚ್ಚು ಬೇಡಿಕೆ ಉಂಟಾಗಿದೆ.

ಬೆಂಗಳೂರು: ನಮ್ಮ ಮೆಟ್ರೋದ ಈಸ್ಟ್- ವೆಸ್ಟ್ ಕಾರಿಡಾರ್ ಉದ್ಘಾಟನೆಯಾದಾಗಿನಿಂದಲೂ ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್ ಗಾಗಿ ಅತಿ ಹೆಚ್ಚು ಬೇಡಿಕೆ ಉಂಟಾಗಿದೆ. ಪ್ರತಿ ದಿನ ಕನಿಷ್ಠ 2,000 ದ್ವಿಚಕ್ರ ವಾಹನಗಳು ಹಾಗೂ 250 ಕಾರುಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಇದರಿಂದಾಗಿ ಉಂಟಾಗಿರುವ ಪಾರ್ಕಿಂಗ್ ಸ್ಥಳದ ಬೇಡಿಕೆ ಹಾಗೂ ಟ್ರಾಫಿಕ್ ನ್ನು ತಡೆಗಟ್ಟಲು ಬಿಎಂಆರ್ ಸಿಎಲ್ ಶುಲ್ಕ ಸಹಿತ ಪಾರ್ಕಿಂಗ್ ವ್ಯವಸ್ಥೆಯ ಜಾರಿಗೆ ತರಲು ನಿರ್ಧರಿಸಿದೆ.
ಶುಲ್ಕ ಸಹಿತ ಪಾರ್ಕಿಂಗ್ ವ್ಯವಸ್ಥೆಗಾಗಿ ಈಗಾಗೆಲೇ ಟೆಂಡರ್ ಕರೆಯಲಾಗಿದ್ದು, ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದೆ ಎಂದು ಬಿಎಂಆರ್ ಸಿಎಲ್ ನ ಹಣಕಾಸು ವಿಭಾಗದ ಪ್ರಧಾನ ವ್ಯವಸ್ಥಾಪಕ ಯುಎ ವಸಂತ್ ರಾವ್ ತಿಳಿಸಿದ್ದಾರೆ. ಈಸ್ಟ್- ವೆಸ್ಟ್ ಕಾರಿಡಾರ್ ಸಂಚಾರ ಪ್ರಾರಂಭವಾದ ನಂತರ ಹೆಚ್ಚು ವಾಹನ ನಿಲುಗಡೆಯನ್ನು ನಿರೀಕ್ಷಿಸಲಾಗಿತ್ತಾದರೂ ಈ ಪ್ರಮಾಣದಲ್ಲಿ ವಾಹನ ನಿಲುಗಡೆಯನ್ನು ಊಹಿಸಿರಲಿಲ್ಲ. ಉಚಿತ ವಾಹನ ನಿಲುಗಡೆಗಾಗಿ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಶುಲ್ಕ ಸಹಿತ ಪಾರ್ಕಿಂಗ್ ವ್ಯವಸ್ಥೆಯನ್ನು ಶೀಘ್ರವೇ ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.
ವಾಹನ ನಿಲುಗಡೆಗಾಗಿ 3 .5 ಎಕರೆಯಷ್ಟು ಜಾಗವಿದ್ದು 3 ,000 ದ್ವಿಚಕ್ರ ವಾಹನ ಹಾಗೂ 300 ಕಾರುಗಳ ಪಾರ್ಕಿಂಗ್ ಮಾಡಬಹುದಾಗಿದೆ ಎಂದು ಯುಎ ವಸಂತ್ ತಿಳಿಸಿದ್ದಾರೆ. ಮೈಸೂರು ರಸ್ತೆ ಸ್ಟೇಷನ್ ನೊಂದಿಗೆ ಸ್ವಾಮಿ ವಿವೇಕಾನಂದ, ಜಾಲಹಳ್ಳಿ, ನಾಗಸಂದ್ರ ಮೆಟ್ರೋ ಸ್ಟೇಷನ್ ಗಳಲ್ಲಿ ಇನ್ನು ಮೂರು ವಾರಗಳಲ್ಲಿ ಶುಲ್ಕ ಸಹಿತ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ಬರಲಿದೆ. ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಈಗಾಗಲೇ ಶುಲ್ಕ ಸಹಿತ ಪಾರ್ಕಿಂಗ್ ವ್ಯವಸ್ಥೆ ಜಾರಿಯಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


