ತಾರಾ ನನಗೆ ಹಿಂಸೆ, ಕಿರುಕುಳ ನೀಡಿದ್ದಾರೆ: ಮನೆಕೆಲಸದಾಕೆ ಆರೋಪ
ತನಗೆ ಮಾನಸಿಕ ಹಿಂಸೆ ನೀಡಿ ಸರಿಯಾಗಿ ಊಟ, ತಿಂಡಿಯನ್ನು ನೀಡದೆ ಕಿರುಕುಳ ನೀಡಿದ್ದಾರೆ. ಅವರು ತಮ್ಮ ಪ್ರಭಾವ ಬಳಸಿ ನನ್ನ ಅಣ್ಣನನ್ನು ಕೆಲಸದಿಂದ ತೆಗೆದು...

ಬೆಂಗಳೂರು: ತನಗೆ ಮಾನಸಿಕ ಹಿಂಸೆ ನೀಡಿ ಸರಿಯಾಗಿ ಊಟ, ತಿಂಡಿಯನ್ನು ನೀಡದೆ ಕಿರುಕುಳ ನೀಡಿದ್ದಾರೆ. ಅವರು ತಮ್ಮ ಪ್ರಭಾವ ಬಳಸಿ ನನ್ನ ಅಣ್ಣನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದು ನಟಿ, ವಿಧಾನ ಪರಿಷತ್ ಸದಸ್ಯೆ ತಾರಾ ವಿರುದ್ಧ ಶನಿವಾರ ಅವರ ಮನೆ ಕೆಲಸದಾಕೆ ತುಮಕೂರಿನಲ್ಲಿ ಆರೋಪ ಮಾಡಿದ್ದಾಳೆ.
ತುಮಕೂರಿನ ಗುಬ್ಬಿ ಮೂಲದ ಲತಾ ಎಂಬಾಕೆ ತಾರಾ ಅವರ ಮಗನನ್ನು ನೋಡಿಕೊಳ್ಳಲೆಂದು ಕೆಲ ವರ್ಷಗಳ ಹಿಂದೆ ಅವರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಆದರೆ ಇತ್ತೀಚೆಗೆ ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ರಜೆ ತೆಗೆದು ಊರಿಗೆ ಹೋಗಲು ಬಿಡುತ್ತಿರಲಿಲ್ಲ, ನನ್ನ ಗಂಡನ ಆಸ್ತಿ ಪಡೆಯುವ ಸಲುವಾಗಿ ಕೋರ್ಟ್ ಮೆಟ್ಟಿಲೇರಿದ್ದು ಈ ಸಲುವಾಗಿ ಕೋರ್ಟ್‌ಗೂ ತೆರಳಲು ಬಿಡುತ್ತಿರಲಿಲ್ಲ. ನನಗೆ ಸರಿಯಾಗಿ ಊಟ ತಿಂಡಿಯನ್ನೂ ನೀಡುತ್ತಿರಲಿಲ್ಲ. ರಾತ್ರಿ 12 ಗಂಟೆಯ ವರೆಗೆ ಕೆಲಸಮಾಡಬೇಕಾಗಿತ್ತು. ನಾನು ಕಳೆದ ಕೆಲ ದಿನಗಳಿಂದ ನೊಂದು ಕೆಲಸಕ್ಕೆ ಹೋಗಿಲ್ಲ. ಇದರಿಂದಾಗಿ ಸಿಟ್ಟಾದ ತಾರಾ ಅವರು ನನ್ನ ಅಣ್ಣ ಕಾಲೇಜ್‌ನ ಹಾಸ್ಟೇಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದು ಆತನನ್ನು ಕೆಲಸದಿಂದ ವಜಾ ಗೊಳಿಸುವಂತೆ ಮಾಡಿದ್ದಾರೆ. ಎಂದು ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.
ಆದರೆ ಲತಾಳ ಎಲ್ಲಾ ಆರೋಪಗಳನ್ನು ತಾರಾ ತಳ್ಳಿಹಾಕಿದ್ದಾರೆ. ಆಕೆಗೆ ಮಗುವನ್ನು ನೋಡಿಕೊಳ್ಳುವ ಕೆಲಸ ಮಾತ್ರ ನೀಡಿದ್ದೆ, ಬೇರೆ ಕೆಲಸ ಮಾಡಲು ಬೇರೆಯವರನ್ನು ನೇಮಿಸಿದ್ದೇನೆ. ಆಕೆಗೆ ಊಟ, ತಿಂಡಿ ನೀಡದೆ ಹಿಂಸೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


