ರಾಜ್ಯ

ಸೈಬರ್ ಕ್ರೈಂ ಬಗ್ಗೆ ಜಾಗೃತಿಗಾಗಿ ಟಿವಿ ಧಾರಾವಾಹಿ ಮೊರೆ ಹೋದ ಪೊಲೀಸರು

ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ್ ಕ್ರೈಂ ಬಗ್ಗೆ ಮಧ್ಯಮ ಹಾಗೂ ಕೆಳ ವರ್ಗದ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಸೈಬರ್ ಕ್ರೈಂ ಪೊಲೀಸರು ಕಿರುತೆರೆ ಮೊರೆ...

ಸೈಬರ್ ಕ್ರೈಂ ಬಗ್ಗೆ ಜಾಗೃತಿಗಾಗಿ ಟಿವಿ ಧಾರಾವಾಹಿ ಮೊರೆ ಹೋದ ಪೊಲೀಸರು
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ್ ಕ್ರೈಂ ಬಗ್ಗೆ ಮಧ್ಯಮ ಹಾಗೂ ಕೆಳ ವರ್ಗದ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಸೈಬರ್ ಕ್ರೈಂ ಪೊಲೀಸರು ಕಿರುತೆರೆ ಮೊರೆ ಹೋಗಿದ್ದಾರೆ.

ಮಹಿಳೆಯರನ್ನು ಆಕರ್ಷಿಸುವ ಟಿವಿ ಧಾರಾವಾಹಿಗಳ ಮೂಲಕ ಅವರಿಗೆ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. 2016 ರಲ್ಲಿ ಸೈಬರ್ ಕ್ರೈಂ ವಿಭಾಗಕ್ಕೆ ಸುಮಾರು 50 ದೂರು ದಾಖಲಾಗಿವೆ. ಮೋಸ ಹೋದವರಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ.  ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡಿರುವ ಈ ವಂಚಕರು ಮೊದಲಿಗೆ ದಿನಚರಿ ತಿಳಿದುಕೊಂಡು, ನಂತರ ಹೆಜ್ಜೆ ಇಡುತ್ತಾರೆ.

ಮಹಿಳೆಯರು ನೌಕರಿ ಬಯಸುತ್ತಿದ್ದಾರೆಯೇ ಅಥವಾ ಸ್ಥಿತಿವಂತನಾಗಿರುವ ವರನನ್ನು ಬಯಸುತ್ತಿದ್ದಾರೆಯೇ ಎಂಬುದನ್ನು ತಿಳಿದುಕೊಂಡು ನಂತರ ಗಾಳ ಹಾಕುತ್ತಾರೆ. ಅವರಿಗೆ ಇಲ್ಲಸಲ್ಲದ ನಂಬಿಕೆ ಹುಟ್ಟಿಸಿ ಹಣ ದೋಚುತ್ತಾರೆ, ಸತ್ಯ ಅರಿಯುವಷ್ಟರಲ್ಲಿ ಇವರೆಲ್ಲಾ ಮೋಸ ಹೋಗಿರುತ್ತಾರೆ ಎಂದು ಸೈಬರ್ ಕ್ರೈಂ ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

26 ರಿಂದ 35 ವರ್ಷದೊಳಗಿನ ಒಂಟಿ ಮಹಿಳೆಯರೇ ಈ ವಂಚಕರ ಟಾರ್ಗೆಟ್, ಅವಹ ವಯಕ್ತಿಕ ಮಾಹಿತಿಗಳನ್ನು ಪಡೆದುಕೊಂಡು ಅವರ ವಿರುದ್ಧವೇ ಅಸ್ತ್ರವನ್ನಾಗಿ ಕೆಲವೊಮ್ಮೆ ಬಳಸುತ್ತಾರೆ ಎಂದು ಅವರು ಹೇಳಿದ್ದಾರೆ.

ವ್ಯಕ್ತಿಯೊಬ್ಬ ಸ್ಕೈಪ್ ನಲ್ಲಿ ಮಹಿಳೆಗೆ ಕರೆ ಮಾಡಿ 20 ರಿಂದ 25 ದಿನಗಳೊಳಗೆ ಆಕೆಯ ನಂಬಿಕೆ ಗಳಿಸಿ, ತನ್ನ ವ್ಯವಹಾರವೆಲ್ಲಾ ನಷ್ಟವಾಯಿತು ಎಂದು ಅತ್ತಿದ್ದಾನೆ. ಇದನ್ನು ನಂಬಿದ ಆ ಮಹಿಳೆ ಮೊದಲು 5.5 ಲಕ್ಷ ಹಣ ನೀಡಿದ್ದಾರೆ. ಮತ್ತು 7 ಲಕ್ಷ ನೀಡಲು  ಹಣ ಹೊಂದಿಸುತ್ತಿರುವಾಗ ಅನುಮಾನ ಬಂದು ಹಣ ನೀಡುವುದನ್ನು ನಿಲ್ಲಿಸಿದ್ದಾರೆ ಎಂದು ಸೈಬರ್ ಅಪರಾಧ ದಳದ ಸೂಪರಿಂಟೆಂಡ್ ಆಫ್ ಪೊಲೀಸ್ ಭೂಷಣ್ ಬೊರಸೆ ಹೇಳಿದ್ದಾರೆ.

ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸಲು ವಿದ್ಯುನ್ಮಾನ ಮಾಧ್ಯಮ ಪರಿಣಾಮಕಾರಿಯಾಗಿದ್ದು, ಈ ಅಪರಾಧ ಪ್ರಕರಣಗಳ ಬಗ್ಗೆ ಒಂದೊಂದು ಎಪಿಸೋಡ್ ನಲ್ಲಿ ವೀಕ್ಷಕರಿಗೆ ತೋರಿಸುವಂತೆ ಹೇಳಲಾಗಿದೆ ಎಂದು ಹೇಳಿದ್ದಾರೆ.

ಈ ಸಂಬಂಧ ಮೀಡಿಯಾ ಹೌಸ್ ಮತ್ತು ಧಾರವಾಹಿ ತಯಾರು ಮಾಡುವವರ ಜೊತೆ ಸಮಾಲೋಚನೆ ನಡೆಸಲಾಗಿದ್ದು, ಶೀಘ್ರವೇ ಮಹಿಳೆಯರಿಗೆ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ಸರಣಿ ಕಾರ್ಯಕ್ರಮ ಪ್ರಸಾರ ಮಾಡಲಾಗುವುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.