ರಾಜ್ಯ

ಹೆಂಡತಿಯ ಸೀರೆ ಎಳೆದ ಟಿಕೆಟ್ ಪರಿವೀಕ್ಷಕ: ರೈಲಿನ ಮುಂದೆ ನಿಂತು ಗಂಡನ ಪ್ರತಿಭಟನೆ

ರೈಲ್ವೆ ಟಿಕೆಟ್ ಪರಿವೀಕ್ಷಕ ತನ್ನ ಹೆಂಡತಿಯ ಸೀರೆ ಎಳೆದ ಎಂದು ಆರೋಪಿಸಿ ವ್ಯಕ್ತಿಯೊಬ್ಬ ರೈಲನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ...

ಹೆಂಡತಿಯ ಸೀರೆ ಎಳೆದ ಟಿಕೆಟ್ ಪರಿವೀಕ್ಷಕ: ರೈಲಿನ ಮುಂದೆ ನಿಂತು ಗಂಡನ ಪ್ರತಿಭಟನೆ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ರೈಲ್ವೆ ಟಿಕೆಟ್ ಪರಿವೀಕ್ಷಕ ತನ್ನ ಹೆಂಡತಿಯ ಸೀರೆ ಎಳೆದ ಎಂದು ಆರೋಪಿಸಿ ವ್ಯಕ್ತಿಯೊಬ್ಬ ರೈಲನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು- ಚೆನ್ನೈ ಏಕ್ಸ್ ಪ್ರೆಸ್ ನಲ್ಲಿ ರೈಲು ಪ್ರಯಾಣ ಟಿಕೆಟ್ ಪರಿವೀಕ್ಷಕ ತನ್ನ ಹೆಂಡತಿಯ ಸೀರೆ ಎಳೆದಿದ್ದಾನೆ . ಆತನ ವಿರುದ್ದ ರೈಲ್ವೆ ಪ್ರಾಧಿಕಾರದ ಅಧಿಕಾರಿಗಳು ಆತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರೈಲು ತಡೆದು ಪ್ರತಿಭಟನೆ ನಡೆಸಿದನು. ನಂತರ ಸ್ಥಳಕ್ಕೆ ಬಂದ ರೈಲ್ವೆ ಅಧಿಕಾರಿಗಳು ಆಕಸ್ಮಿಕವಾಗಿ ಈ ಘಟನೆ ನಡೆದಿದೆ ಎಂದು ಆತನಿಗೆ ಮನವರಿಕೆ ಮಾಡಿಕೊಟ್ಟರು.

ಆತನನ್ನು ವಶಕ್ಕೆ ಪಡೆದ ರೈಲ್ವೆ ಪೊಲೀಸರು ಕೆಲ ಸಮಯದ ನಂತರ ಬಿಡುಗಡೆ ಮಾಡಿದರು. ನಂತರ ಸಮಸ್ಯೆ ಬಗೆಹರಿಸಿ ಆತನನ್ನು ವಾಪಸ್ ಕಳುಹಿಸಿದ ಪೊಲೀಸರು ಯಾವುದೇ ದೂರು ದಾಖಲಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.