ರಾಜ್ಯ

ಉಪನ್ಯಾಸಕರ ವರ್ಗಾವಣೆ ಖಂಡಿಸಿ ವಿದ್ಯಾರ್ಥಿನಿಯರಿಂದ ಪ್ರತಿಭಟನೆ: ಪ್ರಾಂಶಪಾಲೆ ವರ್ಗಾವಣೆ

ಇಬ್ಬರು ಉಪನ್ಯಾಸಕರ ವರ್ಗಾವಣೆ ವಿರೋಧಿಸಿ ಬೆಂಗಳೂರಿನ ಮಹಾರಾಣಿ ಕಲಾ, ವಾಣಿಜ್ಯ ಮತ್ತು ಮ್ಯಾನೇಜ್ ಮೆಂಟ್ ಕಾಲೇಜಿನ ಸಾವಿರಾರು ಮಂದಿ ವಿದ್ಯಾರ್ಥಿನಿಯರು...

ಉಪನ್ಯಾಸಕರ ವರ್ಗಾವಣೆ ಖಂಡಿಸಿ ವಿದ್ಯಾರ್ಥಿನಿಯರಿಂದ ಪ್ರತಿಭಟನೆ: ಪ್ರಾಂಶಪಾಲೆ ವರ್ಗಾವಣೆ
ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ವಿದ್ಯಾರ್ಥಿನಿಯರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು
Published On :

ಬೆಂಗಳೂರು: ಇಬ್ಬರು ಉಪನ್ಯಾಸಕರ ವರ್ಗಾವಣೆ ವಿರೋಧಿಸಿ ಬೆಂಗಳೂರಿನ ಮಹಾರಾಣಿ ಕಲಾ, ವಾಣಿಜ್ಯ ಮತ್ತು ಮ್ಯಾನೇಜ್ ಮೆಂಟ್ ಕಾಲೇಜಿನ ಸಾವಿರಾರು ಮಂದಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು.

ಕಾಲೇಜು ಶಿಕ್ಷಣ ಇಲಾಖೆ ಇತ್ತೀಚೆಗೆ ವಾಣಿಜ್ಯ ವಿಭಾಗದ ಇಬ್ಬರು ಉಪನ್ಯಾಸಕರಾದ ಪ್ರೊ.ನರಸಿಂಹಸ್ವಾಮಿ ಮತ್ತು ಪ್ರೊ.ಮಧುಮತಿ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಈ ಇಬ್ಬರು ಉಪನ್ಯಾಸಕರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪದ ಮೇಲೆ ಕಾಲೇಜು ಪ್ರಾಂಶುಪಾಲೆ ಕೋಮಲ ತನಿಖೆ ನಡೆಸಿ ನೀಡಿರುವ ವರದಿಯಾಧರಿಸಿ ವರ್ಗಾವಣೆ ಮಾಡಲಾಗಿತ್ತು.

ವರ್ಗಾವಣೆ ಆದೇಶವನ್ನು ಖಂಡಿಸಿ ನಿನ್ನೆ ರಸ್ತೆಗಿಳಿದ ನೂರಾರು ವಿದ್ಯಾರ್ಥಿನಿಯರು ಪ್ರಾಂಶುಪಾಲೆ ವಿರುದ್ಧ ಘೋಷಣೆ ಕೂಗಿದರು. ಸತ್ಯ ಏನೆಂದು ವಿದ್ಯಾರ್ಥಿಗಳನ್ನು ಕೇಳದೆ, ವಿಚಾರಿಸದೆ ಏಕಾಏಕಿ ವರ್ಗಾವಣೆ ಮಾಡಲಾಗಿದೆ. ಇದೆಲ್ಲ ಸುಳ್ಳು ಆರೋಪ. ಇಬ್ಬರು ಉಪನ್ಯಾಸಕರು ಕೂಡ ಉತ್ತಮ ನಡತೆಯವರು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪವಿತ್ರಾ ಎನ್ನುವ ವಿದ್ಯಾರ್ಥಿನಿ ಹೇಳಿದರು.

ತಮ್ಮ ವೈಯಕ್ತಿಕ ದ್ವೇಷದಿಂದ ಪ್ರಾಂಶುಪಾಲೆ ಈ ಇಬ್ಬರು ಉಪನ್ಯಾಸಕರ ವಿರುದ್ಧ ಆರೋಪ ಮಾಡಿದ್ದಾರೆ ಎಂದರು.ಕಾಲೇಜು ಕ್ಯಾಂಪಸ್ ನಿಂದ ಪ್ರತಿಭಟನೆ ಆರಂಭಿಸಿ ವಿಧಾನಸೌಧಕ್ಕೆ ವಿದ್ಯಾರ್ಥಿನಿಯರು ಪ್ರತಿಭಟನೆ ಸಾಗಿದರು.ಮಾಧ್ಯಮದವರು ಪ್ರಾಂಶುಪಾಲೆ ಕೋಮಲಾರವರನ್ನು ಸಂಪರ್ಕಿಸಿದಾಗ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಈ ಮಧ್ಯೆ ವಿದ್ಯಾರ್ಥಿನಿಯರ ಪ್ರತಿಭಟನೆ ಪರಿಣಾಮ ಕಾಲೇಜು ಶಿಕ್ಷಣ ಇಲಾಖೆ ಪ್ರಾಂಶುಪಾಲೆ ಕೋಮಲರವರನ್ನು ಬೆಂಗಳೂರಿನ ವಿಜಯನಗರ ಪ್ರಥಮ ದರ್ಜೆ ಕಾಲೇಜಿಗೆ ವರ್ಗಾವಣೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.