ಖ್ಯಾತ ಗಾಯಕಿ ಕೆ.ಎಸ್ ಚಿತ್ರಾರಿಂದ ಸಂಗೀತ ಕಾರ್ಯಾಗಾರ
ಮಗ್ ಟು ಮೈಕ್ ಮತ್ತು ಲಕ್ಷ್ಯ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾರ್ಚ್ 26ರಂದು ಬೆಂಗಳೂರಿನಲ್ಲಿ ಖ್ಯಾತ ಗಾಯಕಿ ಪದ್ಮಶ್ರೀ ಕೆ.ಎಸ್ ಚಿತ್ರಾ...

Published On :
ಮಗ್ ಟು ಮೈಕ್ ಮತ್ತು ಲಕ್ಷ್ಯ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾರ್ಚ್ 26ರಂದು ಬೆಂಗಳೂರಿನಲ್ಲಿ ಖ್ಯಾತ ಗಾಯಕಿ ಪದ್ಮಶ್ರೀ ಕೆ.ಎಸ್ ಚಿತ್ರಾ ಅವರಿಂದ ಸಂಗೀತ ಕಾರ್ಯಾಗಾರ ನಡೆಯಲಿದೆ.
ಮಗ್ ಟು ಮೈಕ್ ರೂವಾರಿ ಸುನಿಲ್ ಕೋಶಿ ಕೆ.ಎಸ್ ಚಿತ್ರಾ ಅವರೊಂದಿಗೆ ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ.
ಬಾತ್‌ರೂಂ ಗಾಯಕರಿಗಾಗಿ ಮಗ್ ಟು ಮೈಕ್ ಎಂಬ ಕಾರ್ಯಾಗಾರ ಆರಂಭಿಸಿ ಬಾತ್‌ರೂಂನಲ್ಲಿ ಮಾತ್ರ ಹಾಡುತ್ತಿದ್ದ ಪ್ರತಿಭೆಗಳನ್ನು ಸ್ಟುಡಿಯೋವರೆಗೆ ಕರೆತಂದ ಟೆಕಿ, ಯುವ ಗಾಯಕ ಸುನೀಲ್ ಕೋಶಿ. ಎಲೆ ಮರೆಯ ಕಾಯಿಯಂತಿರುವ ಪ್ರತಿಭೆಗಳಲ್ಲಿ ಆತ್ಮ ವಿಶ್ವಾಸವನ್ನು ತುಂಬಿ ಹಾಡುಗಾರಿಕೆಯ ಕೌಶಲ್ಯವನ್ನು ಹೇಳಿಕೊಟ್ಟು ಸ್ಟುಡಿಯೋದಲ್ಲೂ, ವೇದಿಕೆಯ ಮೇಲೆಯೂ ಹಾಡುವಂತೆ ಮಾಡಿದ ಕೀರ್ತಿ ಸುನಿಲ್‌ಗೆ ಸಲ್ಲುತ್ತದೆ.
ಈಗಾಗಲೇ ಮಗ್ ಟು ಮೈಕ್ ಮೂಲಕ ಹಲವಾರು ಕಾರ್ಯಾಗಾರಗಳನ್ನು ಮಾಡಿ ಪ್ರತಿಭೆಗಳನ್ನು ಬೆಳಕಿಗೆ ತಂದಿರುವ ಸುನಿಲ್ ಇದೇ ಮೊದಲ ಬಾರಿಗೆ ಕೆ.ಎಸ್ ಚಿತ್ರಾ ಅವರೊಂದಿಗೆ ಸೇರಿ ಸಂಗೀತ ಕಾರ್ಯಾಗಾರ ಹಮ್ಮಿಕೊಂಡಿದ್ದಾರೆ.
ಈ ಕಾರ್ಯಾಗಾರದಲ್ಲಿ ಏನಿರುತ್ತದೆ?
ಸಂಗೀತಾಸಕ್ತರು ಮತ್ತು ಸಂಗೀತ ಪ್ರತಿಭೆಗಳಿಗಾಗಿ ನಡೆಸಿಕೊಡುವ ಈ ಕಾರ್ಯಾಗಾರದಲ್ಲಿ ಯಾರಿಗೆ ಬೇಕಾದರೂ ಭಾಗವಹಿಸಬಹುದು. ಇಲ್ಲಿ ಕೆ. ಎಸ್ ಚಿತ್ರಾ ಅವರು ಹಾಡುಗಾರಿಕೆಯ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳುವುದರ ಜತೆಗೆ ಸಂಗೀತ ಪ್ರತಿಭೆಗಳಿಗೆ ಸಲಹೆ ಸೂಚನೆಗಳನ್ನೂ ನೀಡುತ್ತಾರೆ.
ಹೆಚ್ಚಿನ ಮಾಹಿತಿಗಳಿಗಾಗಿ ಕರೆ ಮಾಡಿ: 7899262262
ಕೆ.ಎಸ್ ಚಿತ್ರಾ ಬಗ್ಗೆ...
6 ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಏಕೈಕ ಗಾಯಕಿ ಕೆ.ಎಸ್ ಚಿತ್ರಾ. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಹಾಡಿರುವ ಈ ಹಿನ್ನೆಲೆ ಗಾಯಕಿಗೆ ಎಲ್ಲ ಭಾಷೆಗಳಲ್ಲಿಯೂ ರಾಜ್ಯ ಪ್ರಶಸ್ತಿ ದಕ್ಕಿದೆ. ಇಲ್ಲಿಯವರೆಗೆ ಸುಮಾರು 25,000 ಹಾಡುಗಳನ್ನು ಹಾಡಿರುವ ಚಿತ್ರಾ ಮೆಲೊಡಿ ಹಾಡುಗಳಿಂದಲೇ ಜನರನ್ನು ಮೋಡಿ ಮಾಡಿದವರು. ಖ್ಯಾತ ಸಂಗೀತ ನಿರ್ದೇಶಕರೊಂದಿಗೆ ಮತ್ತು ಖ್ಯಾತ ಗಾಯಕರೊಂದಿಗೆ ಕೆಲಸ ಮಾಡಿ ಅನುಭವವಿರುವ ಕೆ.ಎಸ್ ಚಿತ್ರಾ ಈ ಕಾರ್ಯಾಗಾರದ ಮೂಲಕ ಹೊಸ ಪ್ರತಿಭೆಗಳಿಗೆ ಅಮೂಲ್ಯ ಸಲಹೆಗಳನ್ನು ನೀಡಲಿದ್ದಾರೆ.
ಕಾರ್ಯಾಗಾರ ಯಾವಾಗ? : ಮಾರ್ಚ್ 26
ಸ್ಥಳ: ದ ಕ್ಯಾಪಿಟಲ್ ಹೋಟೆಲ್ (ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಕಟ್ಟಡದ ಬಳಿ)
ಸಮಯ: ಬೆಳಗ್ಗೆ 9.30 ರಿಂದ 3. 30 ವರೆಗೆ
ಕೆ.ಎಸ್ ಚಿತ್ರಾ ಸಂಗೀತ ಸಂಜೆ

ಭಾನುವಾರ ಮಾರ್ಚ್ 27ರಂದು ಕೆ.ಎಸ್ ಚಿತ್ರಾ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.
ಎಲ್ಲಿ?: ಡಾ.ಪ್ರೇಮಚಂದ್ರ ಸಾಗರ್ ಸಭಾಂಗಣ, ದಯಾನಂದ್ ಸಾಗರ್ ಕಾಲೇಜು, ಕುಮಾರ ಸ್ವಾಮಿ ಲೇ ಔಟ್
ಸಮಯ: ಸಂಜೆ 6. 30
ಈ ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಚಿತ್ರಾ ಅವರು ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳ ಜನಪ್ರಿಯ ಹಾಡುಗಳನ್ನು ಹಾಡಲಿದ್ದಾರೆ. ಸುನಿಲ್ ಕೋಶಿ, ರೂಪಾ, ನಿಶಾದ್ ಮೊದಲಾದ ಗಾಯಕರು ಕೂಡಾ ಈ ಕಾರ್ಯಕ್ರಮದಲ್ಲಿ ಸಂಗೀತ ರಸದೌತಣ ಬಡಿಸಲಿದ್ದಾರೆ.
ಟಿಕೆಟ್ ಬುಕಿಂಗ್ ಮತ್ತು ಹೆಚ್ಚಿನ ಮಾಹಿತಿಗಳಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://in.explara.com/e/ks-chithra-live-in-concert
https://in.bookmyshow.com/bengaluru/events/heart-to-heart-a-musical-extravaganza/ET00039545
ಫೇಸ್ಬುಕ್ ನಲ್ಲಿ
https://www.facebook.com/FromMugToMike/?fref=ts
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
musicWorkshopಸಂಗೀತMug To Mikeಸುನಿಲ್ ಕೋಶಿಮಗ್ ಟು ಮೈಕ್KS ChitraSunil KoshiLive in Concerಕೆ.ಎಸ್ ಚಿತ್ರಾಸಂಗೀತ ಸಂಜೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


