ವಿಟಿಯು- ಮಹೇಶಪ್ಪ ಅವಧಿಯಲ್ಲಿ ನೇಮಕಗೊಂಡ 168 ಬೋಧಕರಿಗೆ ಸಂಕಷ್ಟ ಶುರು
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದಲ್ಲಿ ಕುಲಪತಿ ಡಾ.ಚ್ ಮಹೇಶಪ್ಪ ಅವರನ್ನು ಅಮಾನತುಗೊಳಿಸಿದ...

Published On :
ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದಲ್ಲಿ ಕುಲಪತಿ ಡಾ.ಚ್ ಮಹೇಶಪ್ಪ ಅವರನ್ನು ಅಮಾನತುಗೊಳಿಸಿದ ಬೆನ್ನಲ್ಲೇ, ಅಲ್ಲಿನ ಬೋಧಕ ಸಿಬ್ಬಂದಿ ಹುದ್ದೆಗೂ ಸಂಕಷ್ಟು ಶುರುವಾಗಿದೆ.
2013ರಲ್ಲಿ ವಿಟಿಯು 168 ಸಿಬ್ಬಂದಿಗಳನ್ನು ನೇಮಕಗೊಳಿಸಿತ್ತು. ಮಹೇಶಪ್ಪ ಅಮಾನತುಗೊಂಡ ಹಿನ್ನಲೆಯಲ್ಲಿ ನೇಮಕವಾಗಿದ್ದ 168 ಬೋಧಕ ಸಿಬ್ಬಂದಿ ವಿರುದ್ಧ ಈಗ ತನಿಖೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ನ್ಯಾಯಾಮೂರ್ತಿ ಕೆನ್ ಕೇಶವನಾರಾಯಣ ಅವರು ಸಲ್ಲಿಸಿರುವ ವರದಿಯಲ್ಲಿ ಬೋಧಕರ ನೇಮಕಾತಿ ಪ್ರಮುಖ ಅಂಶವಾಗಿದೆ. ಡಾ.ಮಹೇಶಪ್ಪ ಅವರು ಅಧಿಕಾರದಲ್ಲಿರಬೇಕಾದರೆ ಅವರು ಬೆಳಗಾವಿ ಕೇಂದ್ರ ಕಚೇರಿ ಸೇರಿ ಕಲಬುರಗಿ, ಮೈಸೂರು, ಮುದ್ದೇನಹಳ್ಳಿ ಕ್ಯಾಂಪಸ್ ಗಳಲ್ಲಿ ಖಾಲಿ ಇದ್ದ 169 ಬೋಧಕ ಸಿಬ್ಬಂದಿ ನೇಮಕಾತಿ ನಡೆಸಿದ್ದರು. ಅಕ್ರಮ ಆರೋಪ ಹಿನ್ನೆಲೆಯಲ್ಲಿ ಈ ನೇಮಕಾತಿ ಕುರಿತು ತನಿಖೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ನೇಮಕಾತಿ ವೇಳೆ ಸಂವಿಧಾನ ವಿಧಿ 371(ಜೆ) ಉಲ್ಲಂಘನೆಯಾಗಿದೆ. ಈ ಅಕ್ರಮ ನೇಮಕಾತಿಲ್ಲಿ ಪ್ರಮುಖ ಪ್ರಕರಗಳೆಂದರೆ, 2013ರ ಡಿಸೆಬಂರ್ 7ರಂದು ಐಪಿಎಶ್ ಅಧಿಕಾರಿಯ ಪತ್ನಿಯೊಬ್ಬರು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಕವಾಗಿದ್ದಾರೆ. ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಪಿಎಚ್ ಡಿ ನಂತರ 2 ವರ್ಷದ ಬೋಧನಾ ಅನುಭವ ಹೊಂದಿರಬೇಕು ಎಂದು ಅಧಿಸೂಚನೆಯಲ್ಲಿ ಹೇಳಲಾಗಿತ್ತು. ಆದರೆ, 2013 ಆಕ್ಟೋಬರ್ 1ರಂದು ಪಿಎಚ್ ಡಿ ಮುಗಿಸಿರುವ ಅಭ್ಯರ್ಥಿಯನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ.
ಮತ್ತೊಂದು ಪ್ರಮುಖ ಪ್ರಕರಣವೆಂದರೆ, ಎಐಸಿಟಿಇ ನಿಯಮ ಉಲ್ಲಂಘಿಸಿ ಇಂಜಿನಿಯರಿಂಗ್ ಪದವಿ ಹೊಂದಿರದ ಅಭ್ಯರ್ಥಿಯೊಬ್ಬರನ್ನು ಎಂ ಟೆಕ್ ಬೋಧಿಸಲು ನೇಮಕ ಮಾಡಿಕೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


