ರಾಜ್ಯ

ಸಿಎಂ ಸಿದ್ದರಾಮಯ್ಯರಿಗೆ ಬೆದರಿಕೆ ಪತ್ರ; ಚಿತ್ರದುರ್ಗದಲ್ಲಿ ವ್ಯಕ್ತಿ ಬಂಧನ

ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅನಾಮಧೇಯ ಬೆದರಿಕೆ ಪತ್ರ ಬರೆದಿದ್ದ ವ್ಯಕ್ತಿಯನ್ನು ಚಿತ್ರದುರ್ಗದಲ್ಲಿ ಪೊಲೀಸರು ಬಂಧಿಸಿದ್ದಾರೆ...

ಸಿಎಂ ಸಿದ್ದರಾಮಯ್ಯರಿಗೆ ಬೆದರಿಕೆ ಪತ್ರ; ಚಿತ್ರದುರ್ಗದಲ್ಲಿ ವ್ಯಕ್ತಿ ಬಂಧನ
ಸಿದ್ದರಾಮಯ್ಯ
Published On :

ಚಿತ್ರದುರ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅನಾಮಧೇಯ ಬೆದರಿಕೆ ಪತ್ರ ಬರೆದಿದ್ದ ವ್ಯಕ್ತಿಯನ್ನು ಚಿತ್ರದುರ್ಗದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಅನಾಮಧೇಯ ಬೆದರಿಕೆ ಪತ್ರ ಬರೆದಿದ್ದ ದಾವಣಗೆರೆ ಮೂಲದ 35 ವರ್ಷದ ಶಂಕರಪ್ಪನನ್ನು ಬಂಧಿಸಲಾಗಿದ್ದು, ಬೆದರಿಕೆ ಪತ್ರವನ್ನು ಜಿಲ್ಲಾ ಸಚಿವ ಹೆಚ್. ಆಂಜನೇಯ ಕಚೇರಿ ಸಿಬ್ಬಂದಿಗಳು ಎಸ್ ಪಿ ಎಂಎನ್ ಅನುಚೇತ್ ಅವರಿಗೆ ನೀಡಿದ್ದಾರೆ.

ಕಾಲೇಜು ತೊರೆದಿರುವ ಶಂಕರಪ್ಪನಿಗೆ ಪ್ರಸಿದ್ಧ ವ್ಯಕ್ತಿಗಳಿಗೆ ಅನಾಮಧೇಯ ಬೆದರಿಕೆ ಪತ್ರಗಳನ್ನು ಬರೆಯುವುದೇ ಕೆಲಸವಾಗಿದೆ. ರಾಜಕೀಯದಲ್ಲಿ ತೊಡಗಿಕೊಳ್ಳಲು ಸಕ್ರಿಯನಾಗಿರುವ ಶಂಕರಪ್ಪ ರಾಜಕೀಯ ಮುಂಖಡರ ಗಮನ ಸೆಳೆಯುವ ಸಲುವಾಗಿ ಈ ರೀತಿ ಪತ್ರಗಳನ್ನು ಬರೆಯುತ್ತಿದ್ದಾನೆ ಎಂದು ತನಿಖಾಧಿಕಾರಿ ಹೇಳಿದ್ದಾರೆ.

ಎಸ್ ಪಿ ಅನುಚೇತ್ ಅವರು ಬೆದರಿಕೆ ಪತ್ರ ಬರೆದಿದ್ದ ಅನಾಮಧೇಯ ವ್ಯಕ್ತಿಯನ್ನು ಬಂಧಿಸುವ ಸಲುವಾಗಿ ನಾಲ್ಕು ತಂಡಗಳನ್ನು ರಚಿಸಿದ್ದರು. ಫೆಬ್ರವರಿ 23 ರಂದು ಮುರುಘಮಠದ ಡಾ.

ಶಿವಮೂರ್ತಿ ಮುರುಘ ಶರಣರ ಆರೋಹಣದ ಸಿಲ್ವರ್ ಜುಬಿಲಿ ಸಂಭ್ರಮಾಚರಣೆ ವೇಳೆ ಹೆಚ್. ಆಂಜನೇಯ ಅವರಿಗೆ ಈ ಪತ್ರವನ್ನು ನೀಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.