ರಾಜ್ಯ

ನೀವು ಕೆಲಸ ಮಾಡದ ಬಿಸಿ ಎಲೆಕ್ಷನ್ ನಲ್ಲಿ ನಮಗೆ ತಟ್ಟುತ್ತೆ: ಸಿದ್ದರಾಮಯ್ಯ

ವು ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆಗಾಗಿ ಜನರ ಬಳಿ ಹೋಗುತ್ತೇವೆ, ನಾವು ಕೆಲಸ ಮಾಡದ ಬಿಸಿ ನಮಗೆ ತಟ್ಟುತ್ತೆ ಎಂದು ಅಧಿಕಾರಿಗಳಿಗೆ ಬಿಸಿ ..

ನೀವು ಕೆಲಸ ಮಾಡದ ಬಿಸಿ ಎಲೆಕ್ಷನ್ ನಲ್ಲಿ ನಮಗೆ ತಟ್ಟುತ್ತೆ: ಸಿದ್ದರಾಮಯ್ಯ
ಸಿದ್ದರಾಮಯ್ಯ
Published On :

ಬೆಂಗಳೂರು: ಹಿಂದೆ ಬ್ರಿಟಿಷರ ಕಾಲದಲ್ಲಿ ಅಮಲ್ದಾರರು ಅಂತ ಇದ್ದಿದ್ದರು. ಅವರು ಕುದುರೆ ಮೇಲೆ ಹೋಗಿ ಜನರ ಕೆಲಸ ಮಾಡುತ್ತಿದ್ದರು. ನಿಮಗೆ ಒಳ್ಳೆಯ ರಸ್ತೆ, ಎಸಿ ಕಾರು ಎಲ್ಲವೂ ಇದೆ. ಹಳ್ಳಿಗಳ ಕಡೆ ಹೋಗೋಗೆ ನಿಮಗೇನು ದಾಡಿ...ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳಿಗೆ ಕ್ಲಾಸ್ ತಗೊಂಡ ಪರಿ!

ವಿಧಾನಸೌಧದಲ್ಲಿ ನಡೆದ ಜಿಲ್ಲಾಧಿಕಾರಿಗಳ ಜೊತೆ ಚರ್ಚೆಯಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ, ನಾವು ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆಗಾಗಿ ಜನರ ಬಳಿ ಹೋಗುತ್ತೇವೆ, ನಾವು ಕೆಲಸ ಮಾಡದ ಬಿಸಿ ನಮಗೆ ತಟ್ಟುತ್ತೆ ಎಂದು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಎಲ್ಲಾ ಸರ್ಕಾರಿ ಶಾಲೆಗಳಿಗೆ ಡೈಲಿ ಮೆನು ವ್ಯವಸ್ಥೆ ಮಾಡಿ. ಜನರಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಆದರೆ ಯೋಜನೆಗಳಿಗೆ ಅಧಿಕಾರಿಗಳೇ ಕೊಕ್ಕೆ ಹಾಕ್ತಾರೆ ಎಂಬ ಟೀಕೆ ಇದೆ. ಜನಸಾಮಾನ್ಯರ ಅಸಹನೆಗೆ ಇದೂ ಸಹ ಕಾರಣವಾಗಿದೆ. ಶಾಲೆ, ಆಸ್ಪತ್ರೆಗಳಿಗೆ ಪದೇ, ಪದೇ ಭೇಟಿ ನೀಡಿ ಪರಿಶೀಲಿಸಿ ಎಂದು ಸಿಎಂ ಸೂಚನೆ ನೀಡಿದ್ದಾರೆ.

ಎಸಿ ರೂಂನಿಂದ ಹೊರಬಂದು ಜನರ ಜೊತೆ ಬೆರೆಯಿರಿ. ಇಲ್ಲದಿದ್ದರೆ ಕರ್ತವ್ಯಲೋಪ ಎಂದು ಪರಿಗಣಿಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಜಿಲ್ಲಾಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.