ತಿರಸ್ಕರಿಸಲ್ಪಟ್ಟ ಶಿಶುಗಳ ರಕ್ಷಣೆಗಾಗಿ ಎನ್ಐಇ ವಿದ್ಯಾರ್ಥಿಗಳಿಂದ ಸ್ಮಾರ್ಟ್ ತೊಟ್ಟಿಲು ಅಭಿವೃದ್ಧಿ
ತಿರಸ್ಕರಿಸಲ್ಪಟ್ಟು ಬಾಲಗೃಹದಲ್ಲಿರುವ ಮಕ್ಕಳ ನೋಡಿಕೊಳ್ಳುವ ಸಲುವಾಗಿ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ನ ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳು...

ಮೈಸೂರು: ತಿರಸ್ಕರಿಸಲ್ಪಟ್ಟು ಬಾಲಗೃಹದಲ್ಲಿರುವ ಮಕ್ಕಳ ನೋಡಿಕೊಳ್ಳುವ ಸಲುವಾಗಿ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ನ ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳು ಸ್ಮಾರ್ಟ್ ತೊಟ್ಟಿಲೊಂದನ್ನು ತಯಾರಿಸಿದ್ದು, ಇದೀಗ ಸ್ಮಾರ್ಟ್ ತೊಟ್ಟಿಲನ್ನು ಗೋಕುಲಮ್ ನಲ್ಲಿರುವ ಬಾಪುಜಿ ಬಾಲಗೃಹಕ್ಕೆ ನೀಡಿದ್ದಾರೆ.
ವಿದ್ಯಾರ್ಥಿಗಳು ತಯಾರು ಮಾಡಿರುವ ಸ್ಮಾರ್ಟ್ ತೊಟ್ಟಿಲು ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆಯನ್ನು ಹೊಂದಿದ್ದು, ಮಕ್ಕಳನ್ನು ಸಂರಕ್ಷಿಸುತ್ತದೆ. ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸುತ್ತಿದ್ದಂತೆ ಅಲರ್ಟ್ ಆಗುವ ಈ ತೊಟ್ಟಿಲು, ಮತ್ತೆ ಮಗುವನ್ನು ಎತ್ತಿಕೊಳ್ಳುವ ಹಾಗೂ ಮಗು ಅಳುವ ಎಲ್ಲಾ ಸಂದರ್ಭವನ್ನು ಗ್ರಹಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ವೈಯರ್ ಲೆಸ್ ತಾಂತ್ರಿಕತೆಯ ಮೂಲಕ ಎಚ್ಚರಿಕೆಯನ್ನು ನೀಡುತ್ತದೆ. ಹಾಗೂ ಮೊಬೈಲ್ ಗೆ ಸಂದೇಶವನ್ನು ರವಾನಿಸುತ್ತದೆ.
ತೊಟ್ಟಿಲಿನಲ್ಲಿ ಚಿಕ್ಕದಾದ ಬ್ಯಾಟರಿ ಚಾಲಿತ ಯಂತ್ರವನ್ನು ಅಳವಡಿಸಲಾಗಿದ್ದು, ಮಗುವಿಗೂ ಹಾಗೂ ಯಂತ್ರಕ್ಕೂ 50.60 ಮೀಟರ್ ಗಳಷ್ಟು ಅಂತರವಿರುತ್ತದೆ. ಮಗುವನ್ನು ಮಲಗಿಸುತ್ತಿದ್ದಂತೆ ತೊಟ್ಟಿಲಿನ ಕೆಳಗೆ ನೀಡಲಾಗಿರುವ ಬಟನ್ ನ್ನು ಆನ್ ಮಾಡಬೇಕಾಗುತ್ತದೆ. ನಂತರ ಮಗುವಿನ ಚಲನವಲನಗಳನ್ನು ಗ್ರಹಿಸುವ ಯಂತ್ರ ಅಧಿಕಾರಿಗಳಿಗೆ ಆಗಾಗ ಸಂದೇಶಗಳನ್ನು ರವಾನಿಸುತ್ತಿರುತ್ತದೆ.
ನವಜಾತ ಶಿಶುಗಳನ್ನು ಬೀದಿ ನಾಯಿಗಳು ತಿಂದುಬಿಡುತ್ತವೆಂಬ ಭಯವಿರುತ್ತದೆ. ಹೀಗಾಗಿ ನವಜಾತ ಶಿಶುವಿನ ರಕ್ಷಣೆಗಾಗಿ ಸ್ಮಾರ್ಟ್ ತೊಟ್ಟಿಲನ್ನು ನಿರ್ಮಿಸಲಾಗಿದೆ. ಪ್ರಾಣಿಗಳಿಂದ ಹಾಗೂ ಇನ್ನಿತರೆ ಸಮಸ್ಯೆಗಳ ಎದುರಿಸಿ ಮಕ್ಕಳ ಪಾಲನೆ ಮಾಡುವ ಆಸ್ಪತ್ರೆಗಳಿಗೆ ಸ್ಮಾರ್ಟ್ ತೊಟ್ಟಿಲು ಸಹಾಯಕವಾಗಲಿದೆ ಎಂದು ಸ್ಮಾರ್ಟ್ ತೊಟ್ಟಿಲು ತಯಾರಿಸಿದ ಅಜಿತ್ ಎನ್ಎನ್, ರಾಕೇಶ್ ಕೆ.ಎಂ ಮತ್ತು ಕೇಶವ ಪ್ರಕಾಶಅ ವಿ ಅವರು ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


