ರಾಜ್ಯ

ಅನುಪಮಾ ಶೆಣೈ ರಾಜಿನಾಮೆ ಪ್ರಕರಣಕ್ಕೆ ಟ್ವಿಸ್ಟ್: ಎಸ್ ಪಿ ವಿರುದ್ದ ಮಹಿಳಾ ಆಯೋಗಕ್ಕೆ ದೂರು

ಮಾಜಿ ಡಿವೈಎಸ್ ಪಿ ಅನುಪಮಾ ಶೆಣೈ ರಾಜಿನಾಮೆ ಪ್ರಕರಣ ಹೊಸ ತಿರುವು ಪಡೆದಿದ್ದು, ಅವರು ರಾಜಿನಾಮೆ ನೀಡಿದ ಜೂನ್‌ 4ರ ದಿನಾಂಕವನ್ನೇ ಉಲ್ಲೇಖಿಸಿರುವ ಏಳು ...

ಅನುಪಮಾ ಶೆಣೈ ರಾಜಿನಾಮೆ ಪ್ರಕರಣಕ್ಕೆ ಟ್ವಿಸ್ಟ್: ಎಸ್ ಪಿ ವಿರುದ್ದ ಮಹಿಳಾ ಆಯೋಗಕ್ಕೆ ದೂರು
ಅನುಪಮಾ ಶೆಣೈ
Published On :

ಬಳ್ಳಾರಿ:  ಮಾಜಿ ಡಿವೈಎಸ್ ಪಿ ಅನುಪಮಾ ಶೆಣೈ ರಾಜಿನಾಮೆ ಪ್ರಕರಣ ಹೊಸ ತಿರುವು ಪಡೆದಿದ್ದು, ಅವರು ರಾಜಿನಾಮೆ ನೀಡಿದ ಜೂನ್‌ 4ರ ದಿನಾಂಕವನ್ನೇ ಉಲ್ಲೇಖಿಸಿರುವ ಏಳು ಪುಟದ ದೂರು, ಅವರ ಆಪ್ತರೊಬ್ಬರ ಮೂಲಕ ರಾಜ್ಯ ಮಹಿಳಾ ಆಯೋಗಕ್ಕೆ ತಲುಪಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಚೇತನ್‌ ನನಗೆ ಕಿರುಕುಳ ನೀಡುತ್ತಿದ್ದರು. ಕೆಲಸದಲ್ಲಿ ನನ್ನ ಅಧೀನ ಅಧಿಕಾರಿಗಳು ಸಹಕರಿಸುತ್ತಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ನಾನು ರಾಜೀನಾಮೆ ನೀಡಲು ಚೇತನ್‌ ಅವರೇ ಕಾರಣರಾಗಿರುತ್ತಾರೆ ಎಂದು ಆರೋಪಿಸಿದ್ದಾರೆ.

ಜನವರಿಯಲ್ಲಿ ಅನ್ಯಕಾರ್ಯ ನಿಮಿತ್ತ ನನ್ನನ್ನು ಇಂಡಿಗೆ ನಿಯೋಜಿಸಿದಾಗ ಮಾನಸಿಕ ಒತ್ತಡಕ್ಕೆ ಒಳಗಾಗಿ 19 ದಿನ ಕಾಯಿಲೆ ರಜೆ  ಹಾಕಿ ಊರಿಗೆ ತೆರಳಿದ್ದೆ. ಈ ಸಮಯದಲ್ಲಿ ಪೊಲೀಸ್ ಠಾಣೆಯ ಗೌಪ್ಯ ದಾಖಲೆಗಳನ್ನು ಎಸ್ಪಿ ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದರು ಎಂದು ದೂರವಾಗಿದೆ.

ನನ್ನ ಪರವಾಗಿ ಜನ ಪ್ರತಿಭಟನೆ ನಡೆಸುತ್ತಿದ್ದಾಗಲೇ, ಒಒಡಿ ಚಾಲನಾ ಆದೇಶವನ್ನು ಡಿವೈಎಸ್ಪಿ ಮೂಲಕ ಮನೆಗೆ ಕಳಿಸಿದ್ದರು. ಆ ಆದೇಶ ರದ್ದಾಗಿ ಕೂಡ್ಲಿಗಿಗೆ ಬಂದ ಬಳಿಕ ಕ್ಷುಲ್ಲಕ ಕಾರಣಗಳಿಗೆ ಮೆಮೊ ನೀಡುತ್ತಿದ್ದರು. ಜೂನ್‌ 4ರಂದು ಕೂಡ್ಲಿಗಿ ಡಿವೈಎಸ್ಪಿ ಕಚೇರಿ ಮುಂದೆ ನಡೆದ ಪ್ರತಿಭಟನೆಗೂ ಅವರೇ ಕುಮ್ಮಕ್ಕು ನೀಡಿದ್ದರು ಎಂದು ಅನುಪಮಾ ಆರೋಪಿಸಿದ್ದಾರೆ.

ಕಾಯಿಲೆಗಾಗಿ ಪಡೆದಿದ್ದ ರಜೆಯ ಹಿನ್ನೆಲೆಯಲ್ಲಿ ಸಲ್ಲಿಸಿದ್ದ ರಜೆ ಚೀಟಿಯನ್ನು ವೈದ್ಯಕೀಯ ಮಂಡಳಿ ಪರಿಶೀಲನೆಗೆ ಮೇ ತಿಂಗಳಲ್ಲಿ ರವಾನಿಸಿದ್ದಾರೆ ಎಂದು ದೂರಿರುವ ಅವರು, ದೂರು ಅರ್ಜಿ ವಿಚಾರಣೆಯನ್ನು ಪೊಲೀಸರಿಗೆ ನೀಡದೇ, ಆಯೋಗವೇ ನಡೆಸಬೇಕು ಎಂದು  ಕೋರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ಆರ್‌. ಚೇತನ್, ಅನುಪಮಾ ವಿಚಾರದಲ್ಲಿ, ಇತರ ಅಧೀನ ಅಧಿಕಾರಿಗಳೊಂದಿಗೆ ವರ್ತಿಸುವಂತೆ ಕಾನೂನು ಪ್ರಕಾರವೇ ನಡೆದುಕೊಂಡಿದ್ದೇನೆ  ಎಂದು ತಿಳಿಸಿದ್ದಾರೆ. ಅನುಪಮಾ ಅವರಿಗೆ ಕಿರುಕುಳ ನೀಡಲೇಬೇಕೆಂದಿದ್ದರೆ, ಅವರ ವಿರುದ್ಧ ಹಿರಿಯ ಅಧಿಕಾರಿಗಳಿಗೆ ವಿನಾಕಾರಣ ವರದಿ ಬರೆಯಬಹುದಿತ್ತು. ಸಹೋದ್ಯೋಗಿಗಳ ಮುಂದೆ ಅವರನ್ನು ಅವಮಾನಿಸಬಹುದಿತ್ತು. ಆದರೆ ಹಾಗೆ ಎಂದಿಗೂ ವರ್ತಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.